ಕಬ್ಬು ಬೆಳೆಗಾರರ ಹೋರಾಟ: ಸಿಎಂ ಜೊತೆಗಿನ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಅಳಲು?

ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಆಯೋಜಿಸಿದ್ದಾರೆ. ತಮ್ಮ ...
ಕುಮಾರ ಸ್ವಾಮಿ
ಕುಮಾರ ಸ್ವಾಮಿ
ಬೆಳಗಾವಿ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಆಯೋಜಿಸಿದ್ದಾರೆ. ತಮ್ಮ ಕಾರ್ಖಾನೆಗಳ ಆರ್ಥಿಕ ಮುಗ್ಗಟ್ಟಿನಿಂದಾಗಿ ತಾವು ಕಬ್ಬು ಬೆಳೆಗಾರರ ಬಾಕಿ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಲೀಕರು ತಮ್ಮ ಅಸಹಾಯಕತೆ ವ್ಯಕ್ತ ಪಡಿಸುವ ಸಾಧ್ಯತೆಯಿದೆ.
ಹಲವು ಕಾರ್ಖಾನೆಗಳ ಹಣಕಾಸಿನ ಪರಿಸ್ಥಿತಿ ಅತ್ಯಂತ ಕೆಟ್ಟದ್ದಾಗಿದೆ, ಆದರೆ ಅವರಿಗೆ ಬೇರೆ ದಾರಿಯಿಲ್ಲ, ಹೀಗಾಗಿ ರೈತರ ಬಾಕಿ ತೀರಿಸಲು ಸರ್ಕಾರದಿಂದ ಹಣಕಾಸು ಸಹಾಯ ಕೋರಬೇಕು ಎಂದು ಶಾಸಕ ಹಾಗೂ ಅಥಣಿಯ ಫಾರ್ಮಸ್ ಶುಗರ್ ಫ್ಯಾಕ್ಚರಿ ಮಾಲೀಕತ ಶ್ರೀಮಂತ್ ಪಾಟಿಲ್ ಹೇಳಿದ್ದಾರೆ.
ಬೆಳಗಾವಿಯ ಹುಕ್ಕೇರಿಯಲ್ಲಿರುವ ಉಮೇಶ್ ಕತ್ತಿ ಕುಟುಂಬದ ಎರಡು ಸಕ್ಕರೆ ಕಾರ್ಖಾನೆಗಳು ರೈತರಿಗೆ 34 ಕೋಟಿ ರು ಹಣ ಬಾಕಿ ನೀಡಬೇಕಿದೆ. ಸಿಎಂ ಕರೆದಿರುವ ಸಭೆಗೆ ನಾನು ಹಾಜರಾಗುತ್ತೇನೆ, ಆದರೆ ಕೂಡಲೇ ಹಣ ಪಾವತಿ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಖಾನೆಯ ಸಾಮಾನ್ಯ ಸಭೆಯಲ್ಲಿ ಸುಮಾರು 30 ಸಾವಿರ ರೈತರು ಹಾಜರಾಗಿದ್ದರು. ತಮ್ಮ ಬಾಕಿ ಹಣವನ್ನು ಪಾವತಿಸಬೇಕೆಂದು ಮನವಿ ಮಾಡಿದ್ದಾರೆ,ನಮ್ಮಕಾರ್ಖಾನೆ ಮತ್ತು ರೈತರ ನಡುವೆ ಯಾವುದೇ ವಿವಾದವಿಲ್ಲ, ಸದ್ಯ ಹಣ ನೀಡುವ ಪರಿಸ್ಥಿತಿಯಲ್ಲಿ ನಾವಿಲ್ಲ, ಹೀಗಾಗಿ ಕುಮಾರ ಸ್ವಾಮಿ ಅವರ ಸಭೆಯಲ್ಲಿ ತಮ್ಮ ಅಹಾಯಕತೆ ಬಗ್ಗೆ ಹೇಳಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com