ಸರ್ಕಾರಕ್ಕೆ ವಂಚನೆ: ಪೊಲೀಸರ ಮುಂದೆ ಶಾಸಕರ ವಿವರಣೆ

ಬಿಬಿಎಂಪಿ ಚುನಾವಣೆ ವೇಳೆ ತಪ್ಪು ವಿಳಾಸ ನೀಡಿ ಮತದಾನದ ಹಕ್ಕನ್ನು ಬದಲಿಸಿಕೊಂಡ ಹಾಗೂ ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆ ಪಡೆದು ಸರ್ಕಾರಕ್ಕೆ ವಂಚಿಸಿದ ...
ರಘು ಆಚಾರ್
ರಘು ಆಚಾರ್
ಬೆಂಗಳೂರು:  ಬಿಬಿಎಂಪಿ ಚುನಾವಣೆ ವೇಳೆ ತಪ್ಪು ವಿಳಾಸ ನೀಡಿ ಮತದಾನದ ಹಕ್ಕನ್ನು ಬದಲಿಸಿಕೊಂಡ ಹಾಗೂ ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆ ಪಡೆದು  ಸರ್ಕಾರಕ್ಕೆ ವಂಚಿಸಿದ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಮತ್ತು ಮಾಜಿ ಎಂಎಲ್ ಸಿ ಎಂ.ಡಿ ಲಕ್ಷ್ಮಿ ನಾರಾಯಣ್ ಗುರುವಾರ ಬೆಳಗ್ಗೆ ವಿಧಾನಸೌಧ ಠಾಣೆಗೆ ತೆರಳಿ ವಿವರಣೆ ನೀಡಿದರು.
ನನಗೆ ಸುಳ್ಳು ವಿಳಾಸ ನೀಡಿ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕಾದ ಅಗತ್ಯವಿಲ್ಲ. ನಾನು ಹುಟ್ಟಿದ ವಿಳಾಸ ಹೊರತುಪಡಿಸಿ ಉಳಿದೆಲ್ಲವೂಬಿಬಿಎಂಪಿ ವ್ಯಾಪ್ತಿಯಲ್ಲೆ ಇದೆ. ಪೊಲೀಸರು ಎಫ್‍ಐಆರ್ ದಾಖಲಿಸಿದ್ದರೆ ತನಿಖಾಧಿಕಾರಿಗಳಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.
ನಾನು ಯಾವುದೇ ತಪ್ಪು ಮಾಡಿಲ್ಲ, ಸಭಾಪತಿಗಳು ಹಿಂದೆಯೇ ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ. ಆದರೂ ಈಗ ಯಾವ ಕಾರಣಕ್ಕೆ ಎಫ್ಐಆರ್ ದಾಖಲು ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ, ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ, ಕರೆದಾಗ ವಿಚಾರಣೆಗೆ ಬರಬೇಕಾಗುತ್ತದೆ ಎಂದು ಹೇಳಿದ್ದಾರೆ.
ನನ್ನ ವಿರುದ್ದ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಪೊಲೀಸರು ನೋಟೀಸ್ ಕೊಡುವ ಮುಂಚೆಯೇ ಠಾಣೆಗೆ ಅಗತ್ಯ ದಾಖಲೆಗಳನ್ನ ಸಲ್ಲಿಸಿ ಸತ್ಯಾಂಶ ಮನವರಿಕೆ ಮಾಡಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ನಾನು ಹುಟ್ಟಿದ ವಿಳಾಸ ಹೊರತುಪಡಿಸಿ ಉಳಿದೆಲ್ಲವೂಬಿಬಿಎಂಪಿ ವ್ಯಾಪ್ತಿಯಲ್ಲೆ ಇದೆ. ಪೊಲೀಸರು ಎಫ್‍ಐಆರ್ ದಾಖಲಿಸಿದ್ದರೆ ತನಿಖಾಧಿಕಾರಿಗಳಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com