'ಮಾನ್ಯ ಮುಖ್ಯಮಂತ್ರಿಗಳ ಸನ್ನಿಧಾನಕ್ಕೆ': ಪತ್ರ ಬರೆದು ಮಂಡ್ಯದಲ್ಲಿ ರೈತ ಆತ್ಮಹತ್ಯೆ

ತಾಲೂಕಿನ ಕನ್ನಹಟ್ಟಿ ಗ್ರಾಮದ ಜೈಕುಮಾರ್ (43) ಸಾಲಬಾಧೆ ಮತ್ತು ಅನಾರೋಗ್ಯದಿಂದ ತಮ್ಮ ಜಮೀನಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ..
ಆತ್ಮಹತ್ಯೆ ಮಾಡಿಕೊಂಡ ರೈತ ಜೈಕುಮಾರ್
ಆತ್ಮಹತ್ಯೆ ಮಾಡಿಕೊಂಡ ರೈತ ಜೈಕುಮಾರ್
ಮಂಡ್ಯ: ತಾಲೂಕಿನ ಕನ್ನಹಟ್ಟಿ ಗ್ರಾಮದ ಜೈಕುಮಾರ್ (43) ಸಾಲಬಾಧೆ ಮತ್ತು ಅನಾರೋಗ್ಯದಿಂದ ತಮ್ಮ ಜಮೀನಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಆತ್ಮಹತ್ಯೆ ಮುನ್ನ ಮುಖ್ಯಮಂತ್ರಿಗಳ ಸನ್ನಿಧಾನಕ್ಕೆ, ಕರ್ನಾಟಕ ಸರ್ಕಾರ ಎಂದು ಡೆತ್ ನೋಟ್ ಬರೆದಿದ್ದಾರೆ. ನಾನು ಮದುವೆಯಾಗಿ ಸುಮಾರು 15 ವರ್ಷ ಆಗಿದೆ. ರಕ್ಷಿತ್ (13) ಹಾಗೂ ರಾಜೇಶ್ (10) ಎಂಬ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. 3 ಲಕ್ಷ ರೂಪಾಯಿ ಸಾಲವನ್ನು ಮಾಡಿದ್ದು, ಜೊತೆಗೆ 80 ಸಾವಿರ ಸಾಲ ಮಾಡಿ ವ್ಯವಸಾಯಕ್ಕೆ ಹಾಕಿದ್ದೆ. 
ಆದರೆ ಇಂದು ಅದು ಕೂಡ ಕೈ ಹಿಡಿಯಲಿಲ್ಲ. ನನಗೆ ಗಂಟಲು ಕ್ಯಾನ್ಸರ್ ಇದ್ದು, ವೈದ್ಯರು ಮೂರು ಲಕ್ಷ ರೂಪಾಯಿ ಹಣ ಬೇಕೆಂದು ಹೇಳಿದ್ದಾರೆ. ನಾಲ್ಕು ವರ್ಷದಿಂದ ಬರಗಾಲ ಬಂದು ಜೀವನ ನಡೆಸುವುದೇ ಕಷ್ಟವಾಗಿದೆ. ನಮ್ಮ ಕುಟುಂಬಕ್ಕೆ ಸಹಾಯಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.
ವಿಷಯ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮುಖ್ಯಮಂತ್ರಿ ಕುಮಾರಸ್ವಾಮಿ ಬರುವವರೆಗೂ ಸ್ಥಳದಿಂದ ಮೃತದೇಹವನ್ನು ಎತ್ತುವುದಿಲ್ಲವೆಂದು ಸ್ಥಳದಲ್ಲೇ ಪಟ್ಟು ಹಿಡಿದು ಕುಳಿತ್ತಿದ್ದಾರೆ. ಅಲ್ಲದೇ ಸಿಎಂ ಅವರು ಸಂಚರಿಸುವ ಮಾರ್ಗದ ಸಮೀಪವೇ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ಥಳಕ್ಕೆ ತೆರಳಿದ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com