ಮಾಲೀಕರಿಗೆ ಪ್ರತಿಷ್ಠೆಯ ಸ್ಪರ್ಧೆಯಾಗಿರುವ ಕಂಬಳ ಕ್ರೀಡೆ

ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಕಂಬಳ ಕ್ರೀಡೆ ಆರಂಭಗೊಂಡಿದೆ. ಕೋಣಗಳ ಮಾಲೀಕರು ಪಂದ್ಯಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಕರಾವಳಿ, ಉಡುಪಿ ಜಿಲ್ಲೆಗಳಲ್ಲಿ ಪ್ರತಿಷ್ಠಿತ ಕಂಬಳ ಕ್ರೀಡೆ ಆರಂಭಗೊಂಡಿದೆ. ಕೋಣಗಳ ಮಾಲೀಕರು ಪಂದ್ಯಕ್ಕೆ ಕೊನೆಯ ಹಂತದ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪಾಲಿನ ಸೊತ್ತು ಎಂದು ನಂಬಿಕೊಂಡು ಜತನದಿಂದ ಕೋಣಗಳನ್ನು ಕಾಪಾಡಿಕೊಂಡು ಬರುವ ಮಾಲೀಕರು ಕಂಬಳದಲ್ಲಿ ಗೆದ್ದು ಬರಬೇಕೆಂಬ ಆಸೆ ಹೊತ್ತಿರುತ್ತಾರೆ.

ಮಣಿಪಾಲದ ಸಮೀಪ ಹೀರೆಬೆಟ್ಟು ಗ್ರಾಮದ ಕಂಚಿನಬೈಲುನಲ್ಲಿ ಕೃಷಿಕ ಹಾಗೂ ಹೊಟೇಲ್ ಉದ್ಯಮ ನಡೆಸುತ್ತಿರುವ ಶ್ರೀಕಾಂತ್ ಭಟ್ ಅವರು ಕಂಬಳ ಕ್ರೀಡೆಯ ಅಪಾರ ಪ್ರಿಯರು. ತಮ್ಮ 15 ಎಕರೆ ಜಮೀನಿನಲ್ಲಿ ಕೋಣಗಳಿಗೆ ಸೂಕ್ತ ಗಾಳಿ, ಬೆಳಕು ವ್ಯವಸ್ಥೆಯಿರುವ ಕೊಟ್ಟಿಗೆಯನ್ನು ನಿರ್ಮಿಸಿ 7 ಕಂಬಳ ಕೋಣಗಳನ್ನು ಸಾಕುತ್ತಿದ್ದಾರೆ. ಪ್ರತಿದಿನ ಈ ಕೋಣಗಳಿಗೆ 5 ಕೆಜಿ ಹುರುಳಿ, ಹುಲ್ಲು, ಅರ್ಧ ಕೆಜಿ ಬೆಲ್ಲ, 150 ಎಂಎಲ್ ಸಾಸಿವೆ ಮತ್ತು ವಾರಕ್ಕೊಂದು ದಿನ ತೆಂಗಿನ ಎಣ್ಣೆ ಕುಡಿಸುತ್ತಾರೆ.

ಭಟ್ಟರ ಕೋಣಗಳನ್ನು ನೋಡಿಕೊಳ್ಳುತ್ತಿರುವ ಸಚಿನ್ ಎಸ್ ಕೋಟಿಯಾನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಪ್ರಾಣಿಗಳೆಂದರೆ ಭಟ್ಟರಿಗೆ ತಮ್ಮ ಕುಟುಂಬ ಸದಸ್ಯರಿದ್ದಂತೆ. ಭಟ್ಟರು ಕೊಟ್ಟಿಗೆಗೆ ಬಂದಾಗ ಕೋಣಗಳು ಎದ್ದು ನಿಲ್ಲುತ್ತವೆ. ಕಿವಿಗಳನ್ನು ಆಡಿಸುತ್ತವೆ. ಹೀಗೆ ಅವುಗಳ ಪ್ರೀತಿ, ವಾತ್ಸಲ್ಯವನ್ನು ತೋರಿಸುತ್ತವೆ ಎನ್ನುತ್ತಾರೆ.

ಪ್ರಾಣಿಗಳಿಗೆ ಪ್ರತಿದಿನ ತೈಲ ಅಭ್ಯಂಜನ ಮಾಡಿಸಲಾಗುತ್ತದೆ. ಭಟ್ಟರಲ್ಲಿದ್ದ ರಾಕೆಟ್ ಮೋದ ಎಂಬ 20 ವರ್ಷದ ಕೋಣ ಇತ್ತೀಚೆಗೆ ತೀರಿಕೊಂಡಿತ್ತು. ಇದು 2014ರಲ್ಲಿ 114 ಮೀಟರ್ ದೂರವನ್ನು 13.40 ಸೆಕೆಂಡ್ ಗಳಲ್ಲಿ ಓಡಿ ದಾಖಲೆ ನಿರ್ಮಿಸಿತ್ತು ಎನ್ನುತ್ತಾರೆ ಸಚಿನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com