ಮಂಡ್ಯ ಬಸ್ ದುರಂತ: ಒಂದೇ ಕುಟುಂಬದ ಐವರ ದುರ್ಮರಣ, ಸಾವಿನ ಸಂಖ್ಯೆ 30ಕ್ಕೆ ಏರಿಕೆ!

ಮಂಡ್ಯ ಜಿಲ್ಲೆ ಪಾಂಡವಪುರದ ಕನಗನಮರಡಿ ಗ್ರಾಮದ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಮಂಡ್ಯ ಬಸ್ ದುರಂತ
ಮಂಡ್ಯ ಬಸ್ ದುರಂತ
ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರದ ಕನಗನಮರಡಿ ಗ್ರಾಮದ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಇನ್ನು ದುರಂತದಲ್ಲಿ ಒಟ್ಟಾರೆ ಮೃತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ಪಾಂಡವಪುರದಿಂದ ಮಂಡ್ಯಗೆ ತೆರಳುತ್ತಿದ್ದ ನಸ್ ಚಾಲಕನ ನಿಯಂತ್ರಣ ತಪ್ಪಿ 12 ಅಡಿ ಆಳದ ನಾಲೆಗೆ ಉರುಳಿದ್ದು ಅಪಘಾತದಲ್ಲಿ ಡಾಮನಹಳ್ಳಿ ಗ್ರಾಮದ ನಾಗರಾಜ್ ಎನ್ನುವವರ ಪತ್ನಿ ಮಂಜುಳ(52), ಮೊಮ್ಮಗಳು ಪ್ರೇಕ್ಷ (2), ಅನುಷಾ (17), ತಮ್ಮನ ಮಗಳಾದ ರಾಧಾ (26) ಹಾಗೂ ದೊಡ್ಡಪ್ಪನ ಮಗಳಾದ ಕಮಲಮ್ಮ (48) ಸಾವನ್ನಪ್ಪಿದ್ದಾರೆ. ಇವರೆಲ್ಲರೂ ವರಸಮುದ್ರದಲ್ಲಿ ನಡೆಯಲಿದ್ದ ಶನಿಕಥೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು ಎನ್ನಲಾಗಿದೆ.
ಬಸ್ ನಾಲೆಗೆ ಉರುಳಿ ಸಂಪೂರ್ಣವಾಗಿ ಮುಳುಗಿದ ಪರಿಣಾಮ ಮೃತರ ಸಂಖ್ಯೆಯಲ್ಲಿ ಹೆಚಳವಾಗಿದೆ. ಒಟ್ಟಾರೆ ನಾಲ್ವರು ಮಕ್ಕಳು ಸೇರಿದಂತೆ 30 ಮಂದಿ ದುರ್ಮರಣಕ್ಕಿಡಾಗಿದ್ದಾರೆ.
ಇದಾಗಲೇ ಬಹುತೇಕ ಮೃತದೇಹವನ್ನು ಹೊರತೆಗೆದಿದ್ದು ಎಲ್ಲರ ದೇಅಹವನ್ನೂ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.  ಇನ್ನು ಅಪಘಾತದಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ
ದುರಂತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ವಿವರ ಹೀಗಿದೆ- ಪವಿತ್ರ, ಈರಯ್ಯ, ಕಲ್ಪನಾ, ದೇವರಾಜ್, ಸಿದ್ದಯ್ಯ, ಚಿಕ್ಕಯ್ಯ, ಪ್ರೀತಿ, ಜಯಲಕ್ಷೀ, ಶಶಿಕಲಾ, ಪಾಪಯ್ಯ, ಸಾವಿತ್ರಮ್ಮ, ಮಂಜುಳ, ಅನುಷಾ, ಕಮಲಮ್ಮ, ಸುಮಾ, ಯಶೋಧಾ, ರತ್ನಮ್ಮ, ಸೌಮ್ಯ, ಪ್ರಶಾಂತ್, ಕೆಂಪಯ್ಯ, ನಿಂಗಮ್ಮ, ಮಣಿ, ಮತ್ತು ಪ್ರೇಕ್ಷಾ 
ಆರ್‌ಟಿಓ  ಅಧಿಕಾರಿ ಅಮಾನತು
ದುರಸ್ತಿಗೊಳಗಾಗಿದ್ದ ಬಸ್ ಅನ್ನೇ ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅನುಮತಿಸಿದ್ದ ಮಂಡ್ಯ ತಾಲೂಕ್ಕು ಆರ್‌ಟಿಓ  ಅಧಿಕಾರಿಯನ್ನು ಅಮಾನತು ಗೊಳಿಸಲಾಗಿದೆ. 
ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮುಂದೂಡಿಕೆ
ಮಂಡ್ಯ ಬಸ್ ದುರಂತದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ನಡೆಯಬೇಕಿದ್ದ 017ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಿ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನ ಜಿಕೆವಿಕೆ ಆವರಣದ ಬಾಬುರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com