ಆಗುಂಬೆ ಬಳಿ ರೇವ್ ಪಾರ್ಟಿ, ಹೋಮ್ ಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಆಗುಂಬೆ ದಟ್ಟಕಾನನದಲ್ಲಿ ಹೋಮ್ ಸ್ಟೇಯೊಂದರ ಬಳಿ ಇದೇ ತಿಂಗಳ 17ರಂದು ಮಧ್ಯರಾತ್ರಿಯಲ್ಲಿ ಕಾನೂನುಬಾಹಿರವಾಗಿ ರೇವ್ ಪಾರ್ಟಿ ಆಯೋಜಿಸಿದ್ದ ಮಾಲೀಕರ ವಿರುದ್ಧ ವರದಿ ಸಲ್ಲಿಸುವಂತೆ ಗೃಹ ಸಚಿವರ ಕಾರ್ಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಆಗುಂಬೆ ದಟ್ಟಕಾನನದಲ್ಲಿ  ಹೋಮ್ ಸ್ಟೇಯೊಂದರ ಬಳಿ ಇದೇ ತಿಂಗಳ 17ರಂದು ಮಧ್ಯರಾತ್ರಿಯಲ್ಲಿ  ಕಾನೂನುಬಾಹಿರವಾಗಿ  ರೇವ್ ಪಾರ್ಟಿ ಆಯೋಜಿಸಿದ್ದ ಮಾಲೀಕರ ವಿರುದ್ಧ ವರದಿ ಸಲ್ಲಿಸುವಂತೆ ಗೃಹ ಸಚಿವರ ಕಾರ್ಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.

ಯೂನೆಸ್ಕೂ ವಿಶ್ವ ಪಾರಂಪರಿಕ ಪ್ರದೇಶವೆಂದು  ಗುರುತಿಸಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಅಬ್ಬರದ ಸಂಗೀತ, ಲೇಸರ್ ಬೆಳಕು ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಬಾರದೆಂದು ವನ್ಯಜೀವಿ ಹೋರಾಟಗಾರರು ಆಗ್ರಹಿಸಿದ್ದಾರೆ.

ನವೆಂಬರ್ 17 ಮತ್ತು 18 ರಂದು ಗುಡ್ಡೇಕೆರೆಯಲ್ಲಿ ಡಿಜೆ ಸೌಂಡಿನೊಂದಿಗೆ ಸುಮಾರು 200 ಮಂದಿ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದಾರೆ ಎಂದು ಆರೋಪಿಸಿ ವಿಧಾನಸಭಾ ಸಚಿವಾಲಯ ಅಧೀನ ಕಾರ್ಯದರ್ಶಿ ಜಿ. ಆರ್. ಸತ್ಯಮೂರ್ತಿ  ನೀಡಿದ ದೂರಿನ ವಿರುದ್ಧ ಗೃಹ ಸಚಿವರು ಕ್ರಮ ಕೈಗೊಂಡಿದ್ದಾರೆ.

ಹೆಚ್ಚಿನ ಮಂದಿ ದಂಪತಿಗಳು ಆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಸುಮಾರು 150 ಟೆಂಟ್  ಗಳನ್ನು ತೆರವುಗೊಳಿಸಲಾಗಿದೆ. ಇದಕ್ಕೆ ಆಕ್ಷೇಪಿಸಿದಾಗ ಹೋಮ್ ಸ್ಟೇ ಮಾಲೀಕ ಜಯರಾಮ್ ಹೆಗಡೆ ತಮಗೆ ಬೆದರಿಕೆ ಹಾಕಿದ್ದರು ಎಂದು ಸತ್ಯಮೂರ್ತಿ ಹೇಳಿದ್ದಾರೆ.

ಆದಾಗ್ಯೂ, ಇದು ಸಾಂಸ್ಕೃತಿಕ ಹಬ್ಬವಾಗಿತ್ತು. ಅಲ್ಲಿ ಯಾವುದೇ ರೇವ್ ಪಾರ್ಟಿ ಆಯೋಜಿಸಿರಲಿಲ್ಲ ಎಂದು ಹೆಗಡೆ ಮಗ ಶಶಾಂಕ್ ಹೇಳಿದ್ದಾರೆ.  ಈ ಘಟನೆ ಸಂಬಂಧ ಪೊಲೀಸರು ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಕಾನೂನು ಉಲ್ಲಂಘನೆಯಾಗಿದ್ದಲಿ ಕ್ರಮ ಕೈಗೊಳ್ಳುವುದಾಗಿ ಉಪ ಆಯುಕ್ತ ಕೆ.ಎ. ದಯಾನಂದ್ ಹೇಳಿದ್ದಾರೆ.

ಸತ್ಯಮೂರ್ತಿ ಗುಡ್ಡೆಕೇರಿಗೆ ಪ್ರವಾಸ ಕೈಗೊಂಡಿದ್ದಾಗ ನವೆಂಬರ್ 17 ರಂದು ಈ ಪಾರ್ಟಿ ಆಯೋಜಿಸಲಾಗಿತ್ತು. ಮಧ್ಯರಾತ್ರಿಯಲ್ಲಿ ಸುಮಾರು 200 ಹೆಚ್ಚು ಮಂದಿ ಮೋಜು ಮಸ್ತಿ ಮಾಡುತ್ತಿರುವುದನ್ನು ಅವರು ಪತ್ತೆ ಆಗಿತ್ತು. ನಂತರ ಹೋಮ್ ಸ್ಟೇ ಮಾಲೀಕರಿಗೆ ಪೋನ್  ಮಾಡಿ  ಶಬ್ದ ಕಡಿಮೆ ಮಾಡುವಂತೆ ಕೇಳಿದ್ದಾಗ ಅವರಿಗೆ ಬೆದರಿಕೆವೊಡ್ಡಲಾಗಿತ್ತು . ಇದಕ್ಕೆ ಪೊಲೀಸರು ಅನುಮತಿ ನೀಡದಂತೆ ಮನವಿ ಮಾಡಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com