ಬೆಂಗಳೂರು ವಿವಿ ಗಾಂಧಿ ಅಧ್ಯಯನ ಕೇಂದ್ರ: ಮೂರು ವರ್ಷದಿಂದ ಒಬ್ಬ ವಿದ್ಯಾರ್ಥಿಯೂ ಇಲ್ಲ!

ಮಂಗಳವಾರ (ಅಕ್ಟೋಬರ್ 2) ಮಹಾತ್ಮಾ ಗಾಂಧಿಯವರ 150 ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರವು ಸಂಭ್ರಮದಿಂದ ಆಚರಿಸುತ್ತಿದೆ. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯದ ...
ಮಹಾತ್ಮಾ ಗಾಂಧಿ
ಮಹಾತ್ಮಾ ಗಾಂಧಿ
ಬೆಂಗಳೂರು: ಮಂಗಳವಾರ (ಅಕ್ಟೋಬರ್ 2) ಮಹಾತ್ಮಾ ಗಾಂಧಿಯವರ 150 ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರವು ಸಂಭ್ರಮದಿಂದ ಆಚರಿಸುತ್ತಿದೆ. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಗಾಂಧಿ ಸ್ಟಡೀಸ್  ಮಾತ್ರ ಯಾವುದೇ ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿದೆ.
1969 ರಲ್ಲಿ ಪ್ರಾರಂಭವಾದ ಈ ಅಧ್ಯಯನ ಕೇಂದ್ರದಲ್ಲಿ ಮಹಾತ್ಮರ ಜೀವನ ವಿಚಾರ ಸಂಶೋಧನೆಗಾಗಿ ವಿಶೇಷ ಸೌಲಭ್ಯವಿದೆ. ಆದರೆ ಕಳೆದ ಮೂರು ವರ್ಷಗಳಿಂದ ಮಹಾತ್ಮ ಗಾಂಧಿ ಜೀವನ ಕುರಿತ ವಿಷಯ ಅದ್ಯಯನಕಾಗಿ ಯಾವೊಬ್ಬ ವಿದ್ಯಾರ್ಥಿಯೂ ಆಸಕ್ತಿ ತೋರಿಸಿಲ್ಲ. ಅದ್ಯಯನ ಕೇಂದ್ರ ಪ್ರಾರಂಭವಾದಾಗ ವರ್ಷಕ್ಕೆ ಕನಿಷ್ಟ 20 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಗುರಿ ಹೊಂದಲಾಗಿತ್ತು.
ಕೇಂದ್ರದಲ್ಲಿ ಮಹಾತ್ಮ ಗಾಂಧಿ ಕುರಿತಂತೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಗಳು ನಿಯಮಿತವಾಗಿ ನಡೆಯುತ್ತದೆ.ಇದು ಜ್ಞಾನ ಭಾರತಿ ಆವರಣದಲ್ಲಿದೆ ಮತ್ತು ಆರು ತಿಂಗಳ ಮತ್ತು ಒಂದು ವರ್ಷ ಅವಧಿಯ ವಿವಿಧ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್  ಕೋರ್ಸುಗಳನ್ನು ಮಾಡಲು ಅವಕಾಶ ಕಲ್ಪಿಸುತ್ತದೆ,. ಹೀಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಇಂತಹಾ ಕೋರ್ಸ್ ಗಳ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಆಗಮಿಸುತ್ತಿಲ್ಲ.
ಪ್ರಾರಂಭದಲ್ಲಿ ಗಾಂಧಿ ಜೀವನ ಸಾಧನೆ ಕುರಿತ ಕಡಿಮೆ ಅವಧಿಯ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ ಇತ್ತು. ಆದರೆ ಇತ್ತೀಚೆಗೆ ಈ ಬೇಡಿಕೆಯಲ್ಲಿ ಭಾರೀ ಇಳಿಮುಖವಾಗಿದೆ."ಕ್ರಮೇಣ, ಬೇಡಿಕೆ ಕಡಿಮೆಯಾಗುತ್ತಿದೆ ಮತ್ತು ಕಳೆದ ಮೂರು ವರ್ಷಗಳಿಂದ ಯಾವುದೇ  ವಿದ್ಯಾರ್ಥಿ ಈ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಹಾಕಿಲ್ಲ" ವಿಶ್ವವಿದ್ಯಾನಿಲಯದ  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ನಿಯಮಾವಳಿ ಪ್ರಕಾರ ಕೋರ್ಸ್ ಒಂದಕ್ಕೆ ಕನಿಷ್ಟ 20 ವಿದ್ಯಾರ್ಥಿಗಳು ಅಗತ್ಯ."ಅತ್ಯಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಕೋರ್ಸ್ ಗಳನ್ನು ನಡೆಸುವುದು  ವಿಶ್ವವಿದ್ಯಾಲಯದ ಮೇಲೆ ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ. ಎಂದು ಅವರು ಹೇಳಿದ್ದಾರೆ.
ಸೆಂಟರ್ ಫಾರ್ ಗಾಂಧಿ ಸ್ಟಡೀಸ್ ಎನ್ನುವುದು ಬೆಂಗಳೂರು ವಿಶ್ವವಿದ್ಯಾನಿಲಯದ ಅತಿ ಹಳೆಯ ವಿಭಾಗಗಳಲ್ಲಿ ಒಂದಾಗಿದೆ., ಡಿಸೆಂಬರ್ 8, 1965 ರಂದು ಆಗಿನ ರಾಷ್ಟ್ರಪತಿ  ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಂದ ಈ ಕೇಂದ್ರವು ಸ್ಥಾಪಿಸಲ್ಪಟ್ಟಿದೆ. ಪ್ರಸ್ತುತ ಕಟ್ಟಡವನ್ನು ಅಕ್ಟೋಬರ್ 2, 1969 ರಂದು ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ.ಗಾಂಧಿ ಭವನ ಬೆಂಗಳೂರಿನ ಅತಿದೊಡ್ಡ 'ಹಿತ್ತಾಳೆಯ ಚರಕ ಇಲ್ಲಿದೆ.ಕಟ್ಟಡದ ಇನ್ನೊಂದು ವಿಶಿಷ್ಟ ಲಕ್ಷಣವೆಂದರೆ 'ಸಬರಮತಿ ಓಪನ್ ಏರ್ ಥಿಯೇಟರ್' ಎಂಬ ಆಂಫಿಥಿಯೇಟರ್. ಸಹ ಇದೆ. ಅಲ್ಬರ್ಟ್ ಐನ್ಸ್ಟೈನ್-ಚಾರ್ಲಿ ಚಾಪ್ಲಿನ್ ಸಿಟ್-ಔಟ್ ಮತ್ತು ಮಾತೃ ದೇವತೆಗಳ ಶಿಲ್ಪಗಳು ಈ ಆವರಣದಲ್ಲಿರುವುದುಅನ್ನು ಕಾಣಬಹುದು.ಈ ಕಟ್ಟಡವು ಮೆಡಿಟೇಷನ್ ಹಾಲ್ ಅನ್ನು ಸಹ ಹೊಂದಿದ್ದು ಇದರಲ್ಲಿ ಸುಮಾರು 300 ಜನರಿಗೆ ಮೆಡಿಟೇಷನ್ ಗೆ ಅವಕಾಶ ಕಲ್ಪಿಸಬಹುದಾಗಿದೆ.ಸೆಂಟರ್ ನಲ್ಲಿರುವ ಗ್ರಂಥಾಲಯದಲ್ಲಿ  2,000 ಕ್ಕಿಂತಲೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com