ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಆಂಬ್ಯುಲೆನ್ಸ್ ಸೇವೆ ಆರಂಭ

ನಮ್ಮ ಮೆಟ್ರೊ ಸವಾರರಿಗೆ ತುರ್ತು ಆರೋಗ್ಯ ಸೇವೆಯನ್ನು ನೀಡಲು ಕೊನೆಗೂ ಕೆಂಪೇಗೌಡ ಮೆಟ್ರೊ ...
ಕೆಂಪೇಗೌಡ ಮೆಟ್ರೊ ನಿಲ್ದಾಣ
ಕೆಂಪೇಗೌಡ ಮೆಟ್ರೊ ನಿಲ್ದಾಣ

ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣಿಕರಿಗೆ ತುರ್ತು ಆರೋಗ್ಯ ಸೇವೆಯನ್ನು ನೀಡಲು ಕೊನೆಗೂ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಜಾರಿಗೆ ತರಲಾಗಿದೆ.

ಅಕ್ಟೋಬರ್ 1ರಂದು ಕೆಂಪೇಗೌಡ ಮೆಟ್ರೊ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ವ್ಯಾನ್ ಮತ್ತು ಬೈಕ್ ಆಂಬ್ಯುಲೆನ್ಸ್ ನ್ನು ನೀಡಲಾಯಿತು. ದಿನನಿತ್ಯ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಕಾಲಿಡುವ ಕೆಂಪೇಗೌಡ ಮೆಟ್ರೊ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಸೇವೆ ಅನಿವಾರ್ಯವಾಗಿತ್ತು ಎಂದು ಮೆಟ್ರೊ ನಿಗಮದ ಉನ್ನತ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಅನಾರೋಗ್ಯದಿಂದ ಈ ಮೆಟ್ರೊ ನಿಲ್ದಾಣದಲ್ಲಿ ಪ್ರಾಯಾಣಿಕರು ಕುಸಿದು ಬೀಳುವ ಪ್ರಕರಣಗಳು ನಡೆಯುತ್ತಿರುತ್ತವೆ. ಬೆಳಗಿನ ಉಪಾಹಾರ ಸೇವಿಸದೆ, ನಿಲ್ದಾಣದೊಳಗೆ ಬಿದ್ದು ಕೈ ಕಾಲು ಮುರಿಯುವುದು, ಹೃದಯಾಘಾತವಾಗುವುದು ಇತ್ಯಾದಿ ನಡೆಯುತ್ತಿರುತ್ತದೆ. ಪ್ರಯಾಣಿಕರಿಗೆ ತುರ್ತು ಆರೋಗ್ಯ ಸೇವೆ ನೀಡಲು ಆಂಬ್ಯುಲೆನ್ಸ್ ಸೇವೆ ಅನಿವಾರ್ಯವಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.

ಕೆಂಪೇಗೌಡ ನಿಲ್ದಾಣದ ಭದ್ರತಾ ಸಿಬ್ಬಂದಿಯೊಬ್ಬರು ಕಳೆದ ಸೆಪ್ಟೆಂಬರ್ 26ರಂದು ನಡೆದ ಘಟನೆಯನ್ನು ವಿವರಿಸುತ್ತಾರೆ. 22 ವರ್ಷದ ದೀಪಾ ಎನ್ನುವವರು ಕೆ ಆರ್ ಮಾರುಕಟ್ಟೆ ನಿಲ್ದಾಣಕ್ಕೆ ಪ್ರಯಾಣಿಸಲು ನಸುಕಿನ ಜಾವ 4.45ಕ್ಕೆ ಟಿಕೆಟ್ ಕೌಂಟರ್ ಗೆ ಬಂದಿದ್ದರು. ಟಿಕೆಟ್ ಪಡೆದು ಹಿಂತಿರುಗುವಾಗ ಅಲ್ಲಿಯೇ ಕುಸಿದು ಬಿದ್ದರು. ನಾವು 108 ಆಂಬ್ಯುಲೆನ್ಸ್ ಗೆ ಕರೆ ಮಾಡಬೇಕಾಯಿತು, ಅದು ಬರಲು ಅರ್ಧ ಗಂಟೆಯಾಯಿತು ಎನ್ನುತ್ತಾರೆ.

ಇನ್ನೊಬ್ಬ ವಯೋವೃದ್ಧೆ ಚಿಕ್ಕಪೇಟೆ ಮೆಟ್ರೊ ನಿಲ್ದಾಣದಲ್ಲಿ ಸಂಜೆ ಹೊತ್ತು ಕುಸಿದು ಬಿದ್ದಿದ್ದರು 45 ನಿಮಿಷವಾದರೂ ಆಂಬ್ಯುಲೆನ್ಸ್ ಬರಲಿಲ್ಲ. ಕೊನೆಗೆ ನಾವು ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದೆವು, ಅಲ್ಲಿ ಅವರು ನಿಧನರಾದರು ಎಂದು ತಿಳಿಯಿತು ಎನ್ನುತ್ತಾರೆ ನಿಲ್ದಾಣದ  ಸಿಬ್ಬಂದಿ.

ಮೆಟ್ರೊ ನಿಲ್ದಾಣದೊಳಗಿರುವ ಆಂಬ್ಯುಲೆನ್ಸ್  ಮೂಲಕ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಪ್ರಯಾಣಿಕರನ್ನು ಕೂಡ ಕರೆದೊಯ್ಯಲಾಗುತ್ತದೆಯಾದರೂ ಮೆಟ್ರೊ ಪ್ರಯಾಣಿಕರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com