ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕಾಯುವಿಕೆ ಅವಧಿ ತಗ್ಗಿಸಲು 'ಆರ್ಟ್ಸ್ ತಂತ್ರಜ್ಞಾನ'
ಬೆಂಗಳೂರು: ಭದ್ರತಾ ಕೇಂದ್ರದಲ್ಲಿ ಪ್ರಯಾಣಿಕರು ತಮ್ಮನ್ನು ಮತ್ತು ತಮ್ಮ ಲಗ್ಗೇಜುಗಳ ತಪಾಸಣೆಗೆ ಗಂಟೆಗಟ್ಟಲೆ ಕಾಯಬೇಕಾಗುವುದನ್ನು ತಪ್ಪಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 'ಸ್ವಯಂಚಾಲಿತ ಟ್ರೇ ರಿಟ್ರೀವಲ್ ಸಿಸ್ಟಮ್ಸ್ ಸ್ಮಾರ್ಟ್ ಸೆಕ್ಯುರಿಟಿ ಲ್ಯಾನ್ ಗಳು (ATRS) ಗಳನ್ನು ಸದ್ಯದಲ್ಲಿಯೇ ಅಳವಡಿಸಲಿದೆ. ಈ ತಂತ್ರಜ್ಞಾನ ಕಳೆದ ವರ್ಷ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗಿತ್ತು.
ಈ ತಂತ್ರಜ್ಞಾನವನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಇಂಗ್ಲೆಂಡ್ ಮೂಲದ ಎಲ್ 3 ಮೆಕ್ ಡೊನಾಲ್ಡ್ ಹಮ್ಪ್ಱೆ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಡೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ತಂತ್ರಜ್ಞಾನ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸುತ್ತದೆ. ಇನ್ನು ಮುಂದೆ ಪ್ರಯಾಣ ಹೋಗುವ ಒಂದು ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಒಬ್ಬೊಬ್ಬರೇ ನಿಂತು ಭದ್ರತಾ ತಪಾಸಣೆ ಮಾಡಿಸಿಕೊಳ್ಳಬೇಕಾಗಿಲ್ಲ. ಕುಟುಂಬ ಸದಸ್ಯರು ಒಟ್ಟಾಗಿ ನಿಂತು ತಮ್ಮ ಲಗ್ಗೇಜುಗಳೊಂದಿಗೆ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಸಂಪೂರ್ಣವಾಗಿ ಕಾರ್ಯನಿರ್ವಹಣೆ ಆರಂಭಿಸಿದರೆ ಪ್ರಯಾಣಿಕರ ತಪಾಸಣೆ ಮಾಡುವ ಸಾಮರ್ಥ್ಯ ಶೇಕಡಾ 50ರಷ್ಟು ಹೆಚ್ಚಾಗುತ್ತದೆ. ಈ ವರ್ಷದ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ