ಮುಂದುವರಿದ ಎಸಿಬಿ ತನಿಖೆ: ಸರ್ಕಾರಿ ಅಧಿಕಾರಿಗಳ ಲಾಕರ್, ಬ್ಯಾಂಕ್ ಖಾತೆ ಪರಿಶೀಲನೆ

ಕಳೆದ ವಾರ ಎಸಿಬಿ ತಂಡ ಕೆಐಎಡಿಬಿಯ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಹಾಗೂ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ.ಗೌಡಯ್ಯ ಅವರ ಇಬ್ಬರು
ಗೌಡಯ್ಯ ಮತ್ತು ಟಿ, ಆರ್ ಸ್ವಾಮಿ
ಗೌಡಯ್ಯ ಮತ್ತು ಟಿ, ಆರ್ ಸ್ವಾಮಿ
ಬೆಂಗಳೂರು: ಕಳೆದ ವಾರ ಎಸಿಬಿ ತಂಡ ಕೆಐಎಡಿಬಿಯ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಹಾಗೂ ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ.ಗೌಡಯ್ಯ ಮನೆ, ಕಚೇರಿ, ಕುಟುಂಬಸ್ಥರ ಮನೆಗಳ ಮೇಲೆ ದಾಳಿ ಮಾಡಿತ್ತು. ಈ ವೇಳೆ ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಪತ್ತೆಯಾಗಿತ್ತು.
ಇಬ್ಬರು ಅಧಿಕಾರಿಗಳಿಗೆ ಸೇರಿದ ಲಾಕರ್ , ಹಾಗೂ ಬ್ಯಾಂಕ್ ಗಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಟಿ.ಆರ್ ಸ್ವಾಮಿಗೆ ಸೇರಿದ ಆರು ಲಾಕರ್ ಗಳು ಪತ್ತೆಯಾಗಿವೆ. ಹಾಗೂ ಗೌಡಯ್ಯ ಗೆ ಸೇರಿದ 5 ಲಾಕರ್ ಗಳ ಪರಿಶೀಲನೆ ನಡೆಸಲಾಗಿದೆ,  ಬಿಡಿಎ ಕಚೇರಿಯಲ್ಲಿ ಗೌಡಯ್ಯ ಗೆ ಸೇರಿದ ದಾಖಲೆಗಳ ಪರಿಶೀಲನೆ ಕೂಡ ನಡೆದಿದೆ,
ಸ್ವಾಮಿ ಅವರ ಕುಟುಂಬಸ್ಥರ ಮತ್ತು ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಜಮೀನು, 1.6 ಕೆಜಿ ಚಿನ್ನ, 3 ಕಾರು, 4.52 ಕೋಟಿ ರೂ ಪತ್ತೆಯಾಗಿತ್ತು.
ಮಂಗಳವಾರ ಎಸಿಬಿ ಕಚೇರಿಯಲ್ಲಿ ಗೌಡಯ್ಯ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು, ಶೀಘ್ರವೇ ತನಿಖೆ ಮುಗಿಸಿ ಚಾರ್ಜ್ ಶೀಟ್ ಹಾಕಲಾಗುವುದು ಎಂದು ಐಜಿಪಿ ಚಂದ್ರಶೇಖರ್ ಹೇಳಿದ್ದಾರೆ.
ದಾಳಿಯಲ್ಲಿ ಜಪ್ತಿ ಮಾಡಿರುವ ಅನಧಿಕೃತ ಆಸ್ತಿ ಸಂಬಂಧಿತ ದಾಖಲೆಗಳನ್ನು ಒದಗಿಸಲು ಗೌಡಯ್ಯ ಸಮಯ ಕೋರಿದ್ದರು. ಗೌಡಯ್ಯ ಮತ್ತು ಆತನ ಪತ್ನಿ ಎಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಜಪ್ತಿಯಾದ ಅಸ್ತಿಯ ದಾಖಲೆಗಳನ್ನು ಸಲ್ಲಿಸಿದ್ದಾರೆ, ಇನ್ನೂ ದಾಳಿಯಾದಾಗಿನಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಟಿ,ಆರ್ ಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com