ಚಿತ್ರದುರ್ಗ: 22 ದಿನಗಳಲ್ಲಿ 153 ಪ್ರಕರಣಗಳಿಗೆ ತೀರ್ಪು ನೀಡಿದ ನ್ಯಾಯಮೂರ್ತಿ ಎಸ್ ಬಿ ವಸ್ತ್ರಮಠ್

ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶ ಎಸ್ ಬಿ ವಸ್ತ್ರಮಠ್ ಮತ್ತೆ ತ್ವರಿತಗತಿಲ್ಲಿ ಪ್ರಕರಣಗಳ ಇತ್ಯರ್ಥ ಮಾಡಿ ತೀರ್ಪು ನೀಡಿದ್ದಾರೆ, ಸೆಪ್ಟಂಬರ್ ತಿಂಗಳ 22 ದಿನಗಳಲ್ಲಿ ...
ಎಸ್.ಬಿ ವಸ್ತ್ರಮಠ್
ಎಸ್.ಬಿ ವಸ್ತ್ರಮಠ್
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ  ನ್ಯಾಯಾಧೀಶ ಎಸ್ ಬಿ ವಸ್ತ್ರಮಠ್ ಮತ್ತೆ ತ್ವರಿತಗತಿಲ್ಲಿ ಪ್ರಕರಣಗಳ ಇತ್ಯರ್ಥ ಮಾಡಿ ತೀರ್ಪು ನೀಡಿದ್ದಾರೆ, ಸೆಪ್ಟಂಬರ್ ತಿಂಗಳ 22 ದಿನಗಳಲ್ಲಿ ಬರೋಬ್ಬರಿ 153 ಪ್ರಕರಣಗಳಿಗೆ ತೀರ್ಪು ಕೊಟ್ಟಿದ್ದಾರೆ., ಇದರಲ್ಲಿ ಕಳ್ಳತನ, ಚೆಕ್ ಬೌನ್ಸ್ ಸೇರಿದಂತೆ ಹಲವು ಸಣ್ಣಪುಟ್ಟ ಪ್ರಕರಣಗಳು ಸೇರಿದ್ದವು.
ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವುದರ ಮೂಲಕ 54 ವರ್ಷದ ನ್ಯಾಯಾಧೀಶರು ಎಲ್ಲರ ಹೃದಯ ಗೆದ್ದಿದ್ದಾರೆ, ಜುಲೈ ತಿಂಗಳಲ್ಲಿ ಕೂಡ 11 ದಿನಗಳಲ್ಲಿ ಹಲವು ಪ್ರಕರಣಗಳ ತೀರ್ಪು ನೀಡಿದ್ದರು. ಸೆಪ್ಟಂಬರ್ ತಿಂಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ,ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ನೀಡಿದ್ದಾರೆ,
ಮೊಳಕಾಲ್ಮೂರು ವಿಭಾಗದಲ್ಲಿ  ತಿಂಗಳ ಸಿಂಗಲ್ ಕ್ಯಾಲೆಂಡರ್ ನಲ್ಲಿ 10 ಪಾಯಿಂಟ್ ಗಳಿಗೆ ಗರಿಷ್ಠ 70 ಪಾಯಿಂಟ್ ಗಳಿಸಿದ್ದಾರೆ, ಪ್ರತಿ ಜಡ್ಜ್ ಮೆಂಟ್ ಗೆ 10 ಪಾಯಿಂಟ್ ನೀಡಲಾಗುತ್ತದೆ. 
ಜುಲೈ ತಿಂಗಳ 7ನೇ ತಾರೀಖಿನಂದು ನ್ಯಾಯಾಧೀಶರು. ತನ್ನ ಪತ್ನಿಯನ್ನೇ ಕೊಂದಿದ್ದ ಪರಮೇಶ್ವರ್ ಸ್ವಾಮಿ ಎಂಬಾತನಿಗೆ 11 ದಿನದದ್ದೇ ಜೀವಾವಧಿ ಶಿಕ್ಷೆ ವಿಧಿಸಿದ್ದರು, ಮತ್ತೊಂದು ಪ್ರಕಣರಣದಲ್ಲಿ ಹೆಂಡತಿಯನ್ನು ಕೊಂದಿದ್ದ  ಶ್ರೀಧರ್ ಎಂಬ ವ್ಯಕ್ತಿಗೆ ಅಪರಾಧ ನಡೆದ 13 ದಿನಗಳಲ್ಲೇ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. 
ಕೃಷಿಕ ಮನೆತನದಿಂದ ಬಂದಿರುವ ವಸ್ತ್ರಮಠ್ ಹಾವೇರಿಯ ಸಿದ್ದಾಪುರ ಗ್ರಾಮದವರು, ತಮ್ಮ ಪಿಯುಸಿ ಯನ್ನು ಹಾವೇರಿಯಲ್ಲಿ ಮುಗಿಸಿ, ಧಾರಾವಾಡದ ಮೃತ್ಯುಂಜಯ ಕಾಮರ್ಸ್ ಕಾಲೇಜಿನಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡಿದ್ದಾರೆ, 1989 ರಲ್ಲಿ ಕಾನೂನು ಪದವಿ ಪೂರೈಸಿದ ನಂತರ ಜ್ಯೂಡಿಷಿಯಲ್ ಸರ್ವೀಸ್ ಪರೀಕ್ಷೆ ಬರೆದು ಮ್ಯಾಜಿಸ್ಟ್ರೇಟ್ ಆಗಿ ನೇಮಕವಾದರು.
2017 ರಲ್ಲಿ ಮೊಳಕಾಲ್ಮೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ  ಮೃತಪಟ್ಟ ಕುಟುಂಬಸ್ಥರಿಗೂ 1.14 ಕೋಟಿ ರು ಪರಿಹಾರ ಹಣವನ್ನು 18 ದಿನಗಳಲ್ಲಿ ಕೊಡಿಸಿದ ದಾಖಲೆ ವಸ್ತ್ರಮಟ್ ಅವರದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com