ಗೋಕರ್ಣ ಮಹಾಬಲೇಶ್ವರ ದೇವಾಲಯ
ಗೋಕರ್ಣ ಮಹಾಬಲೇಶ್ವರ ದೇವಾಲಯ

ಗೋಕರ್ಣ ದೇವಸ್ಥಾನ ಹಸ್ತಾಂತರ ಪ್ರಕ್ರಿಯೆ ಸ್ಥಗಿತ: ರಾಜಕೀಯ ಒತ್ತಡವೇ ಕಾರಣ ಎಂದು ಮಠ ಆರೋಪ

ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ತನ್ನ ಮುಂದಿನ ಆದೇಶದವರೆಗೆ ರಾಮಚಂದ್ರಾಪುರ ಮಠಕ್ಕೇ ವಹಿಸಬೇಕೆನ್ನುವ ಸುಪ್ರೀಂ ಆದೇಶ....
Published on
ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ತನ್ನ ಮುಂದಿನ ಆದೇಶದವರೆಗೆ ರಾಮಚಂದ್ರಾಪುರ ಮಠಕ್ಕೇ ವಹಿಸಬೇಕೆನ್ನುವ ಸುಪ್ರೀಂ ಆದೇಶ ಫಾಲನೆಗೆ ರಾಜಕೀಯ ಒತ್ತಡಗಳಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ.
ಕುಮಟಾ ಹಾಯಕ ಕಮಿಷನರ್ (ಎಸಿ) ಹಸ್ತಾಂತರ ಪ್ರಕ್ರಿಯೆಯನ್ನು ಮುಗಿಸುವ ಮುನ್ನವೇ ರಾಜ್ಯಸರ್ಕಾರ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಸೂಚನೆ ನಿಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಅಂತಿಮ ತೀರ್ಪು ಬರುವವರೆಗೆ ದೇವಸ್ಥಾನವನ್ನು ಮಠಕ್ಕೆ ಒಪ್ಪಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ ಎಂದು ಉಲ್ಲೇಖಿಸ್ದ ಪತ್ರವನ್ನು ಮಠವು ಕಳೆದ ವಾರ ಸರ್ಕಾರಕ್ಕೆ ನೀಡಿದೆ.ನ್ಯಾಯಾಲಯದ ಆದೇಶದ ಪ್ರಕಾರ, ದೇವಸ್ಥಾನದ ಸಂಪೂರ್ಣ ಹೊಣೆಗಾರಿಕೆಯನ್ನು ಮಠಕ್ಕೆ ಒಪ್ಪಿಸುವಂತೆ ಜಿಲ್ಲಾಧಿಕಾರಿ ಎಸ್.ನಕುಲ್ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಮತ್ತು ಕುಮಟಾ ಎಸಿಗೆ ಪತ್ರ ಬರೆದು ತಿಳಿಸಿದ್ದಾರೆ.
ಇದರಂತೆ ಕುಮಟಾ ಎಸಿ ಪ್ರೀತಿ ಗೆಹ್ಲೋಟ್ ಮಂಗಳವಾರ ಗೋಕರ್ಣ ದೇವಸ್ಥಾನಕ್ಕೆ ತೆರಳಿ ಅಲ್ಲಿ ದೇವಸ್ಥಾನವನ್ನು ಮಠದ ಆಡಳಿತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿರುವಾಗಲೇ ರಾಜ್ಯ ಸರ್ಕಾರದ ಪ್ರತಿನಿಧಿಯಿಂದ ಕರೆ ಸ್ವೀಕರಿಸಿದ್ದಾರೆ. ಮತ್ತು ಆ ಕರೆ ಬಂದ ಬಳಿಕ ಹಸ್ತಾಂತರ ಪ್ರಕ್ರಿಯೆಯನ್ನು ಅಲ್ಲಿಗೇ ಬಿಟ್ಟು ಕುಮಟಾಗೆ ಹಿಂತಿರುಗಿದ್ದಾರೆ.
ಇದೀಗ ಜಿಲ್ಲಾಡಳಿತವು ದೇವಸ್ಥಾನ ಹಸ್ತಾಂತರಕ್ಕೆ ಸಿದ್ದವಿದ್ದರೂ ಸಹ ಜಿಲ್ಲಾಡಳಿತ ತಾನು ರಾಜ್ಯ ಸರ್ಕಾರದ ಆಡಿಟರ್ ಜನರಲ್ ಅವರನ್ನು ಸಲಹೆ ಕೇಳದೆ ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಲಾಗಿದೆ. ಮಂಗಳವಾರ ಗೆಹ್ಲೋಟ್ ಅವರಿಗೆ ಕರೆ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧುಇಕಾರಿಗಳು ದೇವಾಲಯ ಹಸ್ತಾಂತರ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಜಿಲ್ಲಾಡಳಿತ ದೇವಸ್ಥಾನ ಆಡಳಿತದ ಹಸ್ತಾಂತರಕ್ಕೆ ಸಿದ್ದವಿದ್ದರೂ ರಾಜ್ಯ ಸರ್ಕಾರದ ರಾಜಕೀಯ ಒತ್ತಡದ ಕಾರಣ ಈ ಪ್ರಕ್ರಿಯೆ ಸ್ಥಗಿತವಾಗಿದೆ ಎಂದು ರಾಮಚಂದ್ರಾಪುರ ಮಠ್ ಆರೋಪಿಸಿದೆ. ರಾಜಕೀಯ ಒಯ್ತ್ತಡ ಹೇರಿ ನ್ಯಾಯಾಲಯದ ಆದೇಶ ಪಾಲನೆಗೆ ಸರ್ಕಾರ ಅಡ್ಡಿ ಪಡಿಸುತ್ತಿದೆ ಎಂದು ಮಠದ ಅಧಿಕಾರಿಗಳು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ತಾನು ಅಂತಿಮ ಆದೇಶ ನಿಡುವವರೆಗೆ ದೇವಸ್ಥಾನ ಆಡಳಿತವನ್ನು ಮಠಕ್ಕೆ ವಹಿಸುವಂತೆ ಸ್ಪಷ್ಟವಾಗಿ ಹೇಳಿದ್ದರೂ ರಾಜಕಾರಣಿಗಳು ತಮ್ಮ ಪ್ರಭಾವದಿಂದ ರಾಜ್ಯ ಸರ್ಕಾರವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com