ನನ್ನ ಸಂಪಾದನೆ ಆರಂಭವಾದದ್ದು ಮೈಸೂರಿನಲ್ಲಿ: ಹಳೇಯ ಘಟನೆ ಮೆಲಕು ಹಾಕಿದ ಸಿಎಂ

ದಸರಾ ಪ್ರಯುಕ್ತ ನಡೆಯುತ್ತಿರುವ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ಕಲಾಮಂದಿರದಲ್ಲಿ ದೀಪ ಬೆಳಗುವ ...
ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ
Updated on
ಮೈಸೂರು: ದಸರಾ ಪ್ರಯುಕ್ತ ನಡೆಯುತ್ತಿರುವ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ಕಲಾಮಂದಿರದಲ್ಲಿ ದೀಪ ಬೆಳಗುವ ಮೂಲಕ ದಸರಾ ಚಲನಚಿತ್ರೋತ್ಸವನ್ನ ಕುಮಾರಸ್ವಾಮಿ ಉದ್ಘಾಟಿಸಿದರು.
ಈ ವೇಳೆ ತಾವು, ವಿತರಕರಾಗಿ, ಪ್ರದರ್ಶಕರಾಗಿ ಹಾಗೂ ನಿರ್ಮಾಪಕರಾದ ತಮ್ಮ ಜೀವನದ ಹಳೇಯ ಘಟನೆಗಳನ್ನು  ಸಿಎಂ ಕುಮಾರಸ್ವಾಮಿ ಸ್ಮರಿಸಿದರು,
ಮೈಸೂರಿಗ ಬರುವ ಪ್ರತಿ ವ್ಯಕ್ತಿಯೂ ದೊಡ್ಡದ್ದನ್ನು ಸಾಧಿಸಬೇಕು ಎಂದು ಬಯಸಿ ಬರುತ್ತಾನೆ, ನಾನು ಕೂಡ ಅರಮನೆ ನಗರಿ ಮೈಸೂರಿಗೆ ಸಿನಿಮಾ ಹಂಚಿಕೆಗಾಗಿ ಬಂದೆ, ಆದರೆ ಯಾವತ್ತೂ ನಾನು ಹಿಂತಿರುಗಿ ನೋಡಲೇ ಇಲ್ಲ.
ನಜರಾಬಾದ್ ಮ ಮಾದ್ವೇಶ ಕಾಂಪ್ಲೆಕ್ಸ್ ನಲ್ಲಿ ಚೆನ್ನಾಂಬಿಕಾ ಫಿಲ್ಮ್ ಆರಂಭಿಸಿ ಸಿನಿಮಾ ಹಂಚಿಕೆ ಪ್ರಾರಂಭಿಸಿದೆ. ನಾನು ಹಂಚಿಕೆ ಮಾಡಿದ ಮೊದಲು ಮೂರು ಚಿತ್ರಗಲ್ಲಿ ಅಂಬರೀಷ್ ನಟಿಸಿದ್ದರು,  ನಾನು ಮೈಸೂರು, ಮಂಡ್ಯ, ಕೂರ್ಗ್ (ಕೊಡಗು) ಮತ್ತು ಹಾಸನ ಜಿಲ್ಲೆಗಳಿಗೆ ಮಾತ್ರ ಹಂಚಿಕೆದಾರನಾಗಿದ್ದೆ, ನನ್ನ ಸಂಪಾದನೆ ಆರಂಭವಾದದ್ದು ಮೈಸೂರಿನಿಂದ ಎಂದು ಸಿಎಂ ಹೇಳಿದರು,. 
ಚಿತ್ರಗಳನ್ನ ನಿರ್ಮಾಣ ಮಾಡಬೇಕಾದರೇ ಸಮಾಜವನ್ನ ತಪ್ಪುದಾರಿಗೆ ತೆಗೆದುಕೊಂಡು ಹೋಗುವಂತಹ ಸಿನಿಮಾ ಮಾಡಬಾರದು' ಎಂದು ನಿರ್ಮಾಪಕ, ನಿರ್ದೇಶಕರಿಗೆ ಕಿವಿಮಾತು ಹೇಳಿದರು. 'ಜನರು ಯಾವ ದೃಶ್ಯಗಳನ್ನ, ಯಾವ ಚಿತ್ರಗಳನ್ನ ಇಷ್ಟಪಡ್ತಾರೆ ಎಂಬುದನ್ನ ನಾನು ಚಿತ್ರಮಂದಿರದಲ್ಲಿ ಕೂತು ನೋಡಿದ್ದೇನೆ. ಇದು ನಾನು ನನ್ನ ಉದ್ಯಮಕ್ಕೆ ಸಹಾಯವಾಗಿದೆ ಎಂದು  ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com