ಮೈಸೂರು: ವಿಶಿಷ್ಟ ಕೃಷಿ ಮಾಡಿ ಹೊಸ ಬದುಕು ಕಟ್ಟಿಕೊಂಡು ರೈತ ಕುಟುಂಬ ಇತರರಿಗೂ ಮಾದರಿ!

ರಾಜ್ಯಾದ್ಯಂತ ಹಲವು ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಮೈಸೂರಿನ ತಾಳೂರು ಗ್ರಾಮದ ರೈತ ಕುಟುಂಬವೊಂದು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮೈಸೂರು: ರಾಜ್ಯಾದ್ಯಂತ ಹಲವು ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಮೈಸೂರಿನ ತಾಳೂರು ಗ್ರಾಮದ ರೈತ ಕುಟುಂಬವೊಂದು ಅಪಾರ ಪ್ರಮಾಣದಲ್ಲಿ ಹಣ ಗಳಿಸುತ್ತಿದೆ.
ವಿದೇಶಿ ಬೆಳೆಗಳನ್ನು ಬೆಳೆಸಿ ರಫ್ತಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ  ಲಿಂಗಣ್ಣ ಮತ್ತು ಅವರ ಇಬ್ಬರು ಸಹೋದರರು  ಧನ್ಯವಾದ ಹೇಳಿದ್ದಾರೆ. ಹೊಸ ಬದುಕು ಕಟ್ಟಿಕೊಂಡಿದ್ದಾರೆ, ಇದು ಮತ್ತೊಬ್ಬರಿಗೆ ಉದಾಹರಣೆಯಾಗಿದೆ .ತಮ್ಮ ತೋಟದಿಂದ ಬೆಳೆಯುವ ಉತ್ಪನ್ನಗಳನ್ನು ಮಾರಾಟ ಮಾಡಲು ಅಂಗಡಿ ತೆರೆದಿದ್ದಾರೆ, ವಿದೇಶಿ ತರಕಾರಿ ಬೆಳೆಗಾರರು ಎಂಬ ಹೆಸರಿನಡಿ ರೈತ ದಸರಾದಲ್ಲಿ ಆಯೋಜಿಸಲಾಗಿದೆ, ಇದು ಬೇರೆ ರೈತರಿಗೆ ಮಾದರಿಯಾಗಲಿದೆ.
ವಿದೇಶಿ ಬೆಳೆಗಳಿಗೆ ಉತ್ತಮ ಬೆಲೆಯಿದ್ದು ಅದನ್ನು ಕೊಳ್ಳಲು ಹೆಚ್ಚಿನ  ಗ್ರಾಹಕರು ಬರುತ್ತಿದ್ದಾರೆ, ಸಾಂಪ್ರಾದಾಯಿಕ ಬೆಳೆಗಳಿಂದ ಇಷ್ಟು ಹಣ ನಮಗೆ ಬರುವುದಿಲ್ಲ ಎಂದು ಲಿಂಗಣ್ಣ ಅವರ ಪುತ್ರ ಕುಮಾರಸ್ವಾಮಿ ತಿಳಿಸಿದ್ದಾರೆ,
ತಮ್ಮ ಐದು ಎಕರೆ ಜಮೀನನಲ್ಲಿ ಚೈನೀಸ್ ಕ್ಯಾಬೇಜ್ ಬೆಳೆದರು, ಇದರಿಂದ 10 ಟನ್ ಬೆಳೆ ಬಂತು, ನಾವು ಹೂಡಿದ ಬಂಡವಾಳ ನಮಗೆ ವಾಪಸ್ ಸಿಕ್ಕಿತು ಎಂದು ಹೇಳಿದ್ದಾರೆ.
ನಮ್ಮಿಂದ ಸುಮಾರು 20 ರೈತರು ಪ್ರೇರೇಪಿತರಾಗಿ, ಈ ಕೃಷಿ ಮಾಡುತ್ತಿದ್ದಾರೆ, ನಾವೆಲ್ಲಾ ಒಂದೇ ರೀತಿಯ ಮನಸ್ಥಿತಿ ಉಳ್ಳ ರೈತರು ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಹಿಂದೆ ರಾಜರು ಬಳಸುತ್ತಿದ್ದ ಪ್ರಸಿದ್ಧ ರಾಜಮುಡಿ ಅಕ್ಕಿ ಬೆಳೆದಿರುವುದು ಲಹೆಚ್ಚಿನ ಲಾಭ ತಂದು ಕೊಡುತ್ತಿದೆ, ಮೈಸೂರು, ಮಂಡ್ಯ, ಕೊಡಗು ಮತ್ತು ಹಾಸನದಲ್ಲಿ ಈ ಬೆಳೆ  ಬೆಳೆಯಲು ಯೋಗ್ಯವಾಗಿದೆ ಎಂದು ಭೌಗೋಳಿಕ ಸೂಚಕ ತಿಳಿಸಿದೆ, ಇದನ್ನು ಇತ್ತೀಚೆಗೆ  ಒಡಿಸ್ಸಾದ ಕಟಕ್ ನಲ್ಲಿರುವ ರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ತನ್ನ ಜರ್ನಲ್  ಓರ್ಜ್ಯಾದಲ್ಲಿ ಪ್ರಕಟಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com