ಸ್ಮಶಾನ, ರಾಜಕಾಲುವೆ ಬಳಿ ನಿವೇಶನ ಹಂಚಿಕೆ: ಮತ್ತೆ ಯಡವಟ್ಟು ಮಾಡಿದ ಬಿಡಿಎ ವಿರುದ್ದ ಮಾಲೀಕರ ಆಕ್ರೋಶ

ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 4,970 ನಿವೇಶನ ನೀಡಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ, ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 4,970 ನಿವೇಶನ ನೀಡಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ, 
2ನೇ ಹಂತದಲ್ಲಿ ನಿವೇಶನ ಹಂಚಿರುವ ಬಿಡಿಎ ಹಲವು ಮಂದಿಗೆ ರಾಜಕಾಲುವೆ ಸಮೀಪ ನೀಡಿದ್ದು ರಾಷ್ಚ್ರೀಯ ಹಸಿರು ಮಂಡಳಿ ನೀತಿ ನಿಯಮಗಳಿಗೆ ವಿರುದ್ಧವಾಗಿದೆ.
ಸುಮಾರು ನಿವೇಶನಗಳನ್ನು ಸ್ಮಶಾನದ ಪಕ್ಕದಲ್ಲಿ ನೀಡಲಾಗಿದೆ, ಹೀಗಾಗಿ ಕೆಲವು ಮಾಲೀಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ಹೀಗಾಗಿ ಹಲವು ಮಂದಿ ಮುಂಗಡ ಹಣ ನೀಡಿರುವ ಮಾಲೀಕರು ನಿವೇಶನ ಖರೀದಿಸಬೇಕೆ ಬೇಡವೇ ಎಂಬ ಬಗ್ಗೆ ಮರು ಚಿಂತನೆ ನಡೆಸಿದ್ದಾರೆ, 
ಶೀಘ್ರವೇ ನೀವೇಶನ ಪಡೆದಿರುವವರ ಜೊತೆ 2 ಸಭೆ ನಡೆಸುವುದಾಗಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಹೇಳಿದ್ದಾರೆ,  ರಾಜಕಾಲುವೆಗೆ ಸಮೀಪ ಹಾಗೂ ಸ್ಮಶಾನಗಳಲ್ಲಿ ನಿವೇಶನ ಪಡೆದಿರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುಗು ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com