ಮೈಸೂರು: ಸಂಸ್ಕೃತಿ ಮೇಲೆ ಬೆಳಕು ಚೆಲ್ಲುತ್ತಿವೆ ಪಾರಂಪರಿಕ ಕಟ್ಟಡಗಳ ನವರಾತ್ರಿ ದೀಪಾಲಂಕಾರ!

ಮೈಸೂರಿನ ಸಾಂಸ್ಕೃತಿಕ ಕಟ್ಟಡಗಳಿಗೆ ಮಾಡಿರುವ ನವರಾತ್ರಿ ದೀಪಾಲಂಕಾರ ಮೈಸೂರಿನ ದಸರಾ ಸೌಂದರ್ಯ ಹೆಚ್ಚಿಸಿವೆ, ಅರಮನೆಗಳ ನಗರ ಎಂದೇ ...
ಮೈಸೂರಿನ ಕಟ್ಟಡಗಳಿಗೆ ದೀಪಾಲಂಕಾರ
ಮೈಸೂರಿನ ಕಟ್ಟಡಗಳಿಗೆ ದೀಪಾಲಂಕಾರ
ಮೈಸೂರು:  ಮೈಸೂರಿನ ಸಾಂಸ್ಕೃತಿಕ ಕಟ್ಟಡಗಳಿಗೆ ಮಾಡಿರುವ ನವರಾತ್ರಿ ದೀಪಾಲಂಕಾರ ಮೈಸೂರಿನ ದಸರಾ ಸೌಂದರ್ಯ ಹೆಚ್ಚಿಸಿವೆ, ಅರಮನೆಗಳ ನಗರ ಎಂದೇ ಪ್ರಸಿದ್ದವಾಗಿರುವ ಮೈಸೂರಿನಲ್ಲಿರುವ ಹಲವು ಪಾರಂಪರಿಕಾ ಕಟ್ಟಡಗಳು ದಸರೆ ಮೆರುಗನ್ನು ಮತ್ತಷ್ಟು  ಹೆಚ್ಚಿಸಿವೆ.
ಲೆಪ್ಟಿನೆಂಟ್ ಡೆಪ್ಯುಟಿ ಕಮಿಷನರ್ ಕಚೇರಿ,  ನೀರಾವರಿ ಕಚೇರಿ, ಕ್ರಾಫರ್ಡ್ ಹಾಲ್ ಮೈಸೂರು ನಗರಪಾಲಿಕೆ ಕಚೇರಿ, ರೈಲ್ವೇ ಆಫೀಸ್, ಕೆ.ಆರ್ ಆಸ್ಪತ್ರೆ, ಕಾವಾ ಕಟ್ಟಡ, ಜಲದರ್ಶಿನಿ ಮತ್ತು ಚಾಮುಂಡಿ ಅತಿಥಿ ಗೃಹ ಸೇರಿದಂತೆ ನಗರದಲ್ಲಿರುವ 200 ಕಟ್ಟಡಗಳು ನವ ವಧುವಿನಂತೆ ಕಂಗೊಳಿಸುತ್ತಿವೆ.
ಟಾಂಗಾ ಮತ್ತು ಟ್ರಿನ್ ಟ್ರಿನ್ ಬೈಸಿಕಲ್  ಅಥವಾ ಬಸ್ ನ ತೆರೆದ ಟಾಪ್ ಮೇಲೆ ಕುಳಿತು ಮೈಸೂರಿನ ಕಟ್ಟಡಗಳ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಬಸ್ ಗಳಿಗೆ ಹೆಚ್ಚಿನ ಬೇಡಿಕೆ ಹರಿದು ಬಂದ ಹಿನ್ನೆಲೆಯಲ್ಲಿ ಬಸ್ ಬುಕ್ಕಿಂಗ್ ಕ್ಲೋಸ್ ಆಗಿದೆ,
ಈ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡುವ ಪದ್ಧತಿ ಎಸ್.ಎಂ ಕೃಷ್ಣ ಸರ್ಕಾರದದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ  ಎ.ಎಚ್ ವಿಶ್ವನಾಥ್ ಮೈಸೂರಿನ ಕಲೆ ಮತ್ತು ಸಂಸ್ಕೃತಿಯ ಸೊಬಗನ್ನು ಹೆಚ್ಚಿಸಲು ಈ ಕ್ರಮ ಜಾರಿಗೆ ತಂದರು. ಆ ನಂತರ ದಸರಾ ಆಚರಣೆಯಲ್ಲಿ  ನಿಯಮಿತವಾಗಿ ಜಾರಿಗೆ ಬಂದಿತು.
ನಂತರ ಸರ್ಕಾರದ  ವ್ಯವಹಾರಗಳಲ್ಲಿ ಈ ಆಚರಣೆ ಕಡ್ಡಾಯವಾಗಿ ಜಾರಿಗೆ ಬಂತು, ಕುದುರೆ ಗಾಡಿಗಳಲ್ಲಿ ಮೈಸೂರು ಪ್ರವಾಸಕ್ಕೆ 400 ರೂ ವರೆಗೆ ಚಾರ್ಜ್ ಮಾಡಲಾಗುತ್ತದೆ. ಅದರಲ್ಲಿ ಕರೆದುಕೊಂಡು ಹೋಗಿ ಅಲ್ಲಿನ ಕಟ್ಟಡಗಳ ಇತಿಹಾಸದ ಬಗ್ಗೆ ಪ್ರವಾಸಿಗರಿಗೆ ತಿಳಿಸಲಾಗುತ್ತದೆ. ನಗರದ 52 ಕಿಮೀ ರಸ್ತೆಗಳಲ್ಲಿ ವರ್ಣರಂಜಿತ ದೀಪಾಲಂಕಾರ ಮಾಡಲಾಗಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com