ಗದಗದ ಲಕ್ಷ್ಮೇಶ್ವರದಲ್ಲಿ ರಂಭಾಪುರಿ ಶ್ರೀಗಳ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, 2018ರ ರಾಜ್ಯ ವಿಧಾನ ಸಭೆಗೂ ಮುನ್ನ ಕೇಳಿ ಬಂದಿದ್ದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ನೀಡಲು ಈ ಹಿಂದಿನ ಕಾಂಗ್ರೆಸ್ಸರ್ಕಾರ ಮುಂದಾಗಿತ್ತು. ಆದರೆ ಸರ್ಕಾರ, ರಾಜಕಾರಣಿಗಳು ಧರ್ಮದ ವಿಚಾರಕ್ಕೆ ಕೈ ಹಾಕಬಾರದು ಎಂಬುದು ನಂತರ ನಮಗೆ ತಿಳಿಯಿತು. ಈ ವಿಚಾರದಲ್ಲಿ ನಾವು ಎಡವಿದೆವು. ನಮ್ಮ ಸರ್ಕಾರದಿಂದ ದೊಡ್ಡ ತಪ್ಪಾಯಿತು ಎಂದು ಕ್ಷಮಾಪಣೆ ಕೇಳಿದ್ದಾರೆ.