ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಅನಾವರಣಗೊಳಿಸಿದ ಆಕರ್ಷಕ ಸ್ತಬ್ದಚಿತ್ರಗಳು !

ವಿಶ್ವ ವಿಖ್ಯಾತ ಮೈಸೂರು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿದ ಆಕರ್ಷಕ ಸ್ತಬ್ದ ಚಿತ್ರಗಳು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸಿದವು.
ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೈಭವ ಸ್ತಬ್ದ  ಚಿತ್ರ
ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೈಭವ ಸ್ತಬ್ದ ಚಿತ್ರ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿದ ಆಕರ್ಷಕ ಸ್ತಬ್ದ ಚಿತ್ರಗಳು  ನಾಡಿನ ಕಲೆ, ಸಾಹಿತ್ಯ,  ಸಂಸ್ಕೃತಿಯನ್ನು  ಅನಾವರಣಗೊಳಿಸಿದವು.

ಚಾಮರಾಜನಗರ ಜಿಲ್ಲೆಯ  ಅರಣ್ಯ ಸಂಪತ್ತಿನೊಳಗಿನ ಆಧ್ಯಾತ್ಮಿಕ ಕ್ಷೇತ್ರಗಳು ಸ್ತಬ್ಧಚಿತ್ರ, ಚಿಕ್ಕಮಗಳೂರು- ಭೂತಾಯಿ ಕಾಫಿ ಕನ್ಯೆ , ಚಿಕ್ಕಬಳ್ಳಾಪುರ- ವಿದುರಾಶ್ವತ್ಥ , ಗದಗ್ - ಮರಗಳ ಮರು ನೆಡುವಿಕೆ,  ಕಲಬುರಗಿ- ವಿಮಾನ ನಿಲ್ದಾಣ,  ಧಾರಾವಾಡ- ದ. ರಾ. ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ, ಕೋಲಾರ- ಜಿಲ್ಲಾ ಪಂಚಾಯತ್ ನಡೆ ಅಭಿವೃದ್ದಿ ಕಡೆಗೆ , ವಿಜಯಪುರ- ಗೋಲ್ ಗುಂಬಜ್. ಚಿತ್ರದುರ್ಗ- ಶ್ರೀಗುರು  ತಿಪ್ಪೆರುದ್ರ ಸ್ವಾಮಿಗಳು ನಾಯಕನಹಟ್ಟಿ ಪುಣ್ಯಕ್ಷೇತ್ರ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ಕರ್ನಾಟಕದ ನವರತ್ನಗಳು, ಮಂಡ್ಯ- ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು, ರಾಯಚೂರು - ಯರಮರಸ್ ಶಾಖೋತ್ಪನ್ನ ಕೇಂದ್ರ ,ಬೆಳಗಾವಿ- ಕಿತ್ತೂರು ಚೆನ್ನಮ್ಮ ವೈಭವ ಮತ್ತಿತರ 42 ಸ್ತಬ್ದಚಿತ್ರಗಳು ಜಂಬೂ ಸವಾರಿ ಮೆರವಣೆಗೆ ಮೆರುಗನ್ನು ಹೆಚ್ಚಿಸಿದವು.
ಹಗಲುವೇಷ, ದಾಲಪಟ, ಗೊಂಬೆ ಕುಣಿತ , ಚಂಡೆಮದ್ದಳೆ, ಗೊರವರ ಕುಣಿತ  ಮತ್ತಿತರ  ಜಾನಪದ ಕಲಾತಂಡಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮನ ರಂಜಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com