ಜೈಲಿನ ವೈದ್ಯರಿಗೆ ಹೊಡೆದ ವಿಚಾರಣಾಧೀನ ಕೈದಿ; ಹಿಂಡಲಗಾ ಜೈಲಿಗೆ ವರ್ಗಾವಣೆ

ಜಿಲ್ಲಾಸ್ಪತ್ರೆಗೆ ವರ್ಗಾಯಿಸಲು ಜೈಲು ಅಧಿಕಾರಿಗಳಿಗೆ ಶಿಫಾರಸು ಮಾಡಲು ....
ಶಿವಮೊಗ್ಗದ ಕೇಂದ್ರ ಕಾರಾಗೃಹ
ಶಿವಮೊಗ್ಗದ ಕೇಂದ್ರ ಕಾರಾಗೃಹ
Updated on

ಶಿವಮೊಗ್ಗ: ಜಿಲ್ಲಾಸ್ಪತ್ರೆಗೆ ವರ್ಗಾಯಿಸಲು ಜೈಲು ಅಧಿಕಾರಿಗಳಿಗೆ ಶಿಫಾರಸು ಮಾಡಲು ನಿರಾಕರಿಸಿದ್ದಕ್ಕೆ ಜೈಲಿನ ವೈದ್ಯರಿಗೆ ವಿಚಾರಣಾಧೀನ ಕೈದಿ ಹೊಡೆದ ಘಟನೆ ಶಿವಮೊಗ್ಗದ ಹೊರವಲಯದಲ್ಲಿ ನಡೆದಿದೆ. ನಂತರ ಕೈದಿಯನ್ನು ಬೆಳಗಾವಿಯ ಹಿಂಡಲಗ ಜೈಲಿಗೆ ಆತನ ಮೂವರು ಸಹಚರರೊಂದಿಗೆ ಕಳುಹಿಸಲಾಯಿತು.

ಕಳೆದ ಗುರುವಾರ ಅಪರಾಹ್ನ ಒಟಿಗಟ್ಟಾ ಜೈಲಿನಲ್ಲಿ ಈ ಘಟನೆ ನಡೆದಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರ್ಬಾಜ್ ವಿರುದ್ಧ ಕೊಲೆ ಕೇಸು ದಾಖಲಾಗಿತ್ತು. ಈತ ಕಳೆದ 13 ವರ್ಷಗಳಿಂದ ಜೈಲಿನ ವೈದ್ಯಾಧಿಕಾರಿಯಾಗಿರುವ ಡಾ ರಘು ಪ್ರಸಾದ್ ವಿರುದ್ಧ ಹಲ್ಲೆ ನಡೆಸಿದವನಾಗಿದ್ದಾನೆ.

ಗಾಂಜಾ ಹೊಂದಿದ್ದ ಆರೋಪದ ಮೇಲೆ ಅರ್ಬಾಜ್ ನನ್ನು ಜೈಲಿನ ವಿಶೇಷ ಕೇಂದ್ರದಲ್ಲಿರಿಸಲಾಗಿತ್ತು. 24 ಗಂಟೆಗಳಿಂದ ಆತ ಆ ಕೋಣೆಯಲ್ಲಿದ್ದ. ಇದ್ದಕ್ಕಿದ್ದಂತೆ ಜೈಲಿನ ಸಿಬ್ಬಂದಿ ಮೇಲೆ ಅರ್ಬಾಜ್ ಕಿರುಚಲು ಆರಂಭಿಸಿದ. ಒಂದು ಹಂತದಲ್ಲಿ ಟ್ಯೂಬ್ ಲೈಟ್ ನಲ್ಲಿ ತನ್ನ ಮೇಲೆ ತಾನೇ ಹಲ್ಲೆ ಮಾಡಲು ಯತ್ನಿಸಿದ್ದ ಕೂಡ.

ಗಾಯಗೊಂಡ ಅರ್ಬಾಸ್ ಗೆ ಚಿಕಿತ್ಸೆ ನೀಡಲು ವೈದ್ಯರನ್ನು ಕರೆದಿದ್ದಾರೆ. ಈ ವೇಳೆ ಮೆಕ್ಗಾನ್ ಆಸ್ಪತ್ರೆಗೆ ವರ್ಗಾಯಿಸುವಂತೆ ಅರ್ಬಾಸ್ ವೈದ್ಯರನ್ನು ಕೇಳಿಕೊಂಡ. ಆದರೆ ಗಾಯ ದೊಡ್ಡದಾಗಿಲ್ಲ ಹೀಗಾಗಿ ಪ್ರಾಥಮಿಕ ಚಿಕಿತ್ಸೆ ಸಾಕು ಎಂದು ವೈದ್ಯರು ಹೇಳಿದರು. ಅರ್ಬಾಸ್ ಹೆಚ್ಚಿನ ಚಿಕಿತ್ಸೆ ನೀಡುವಂತೆ ಗಲಾಟೆ ಮಾಡಲಾರಂಭಿಸಿದನು. ಆದರೆ ವೈದ್ಯರು ಒಪ್ಪಲಿಲ್ಲ, ಆಗ ಅರ್ಬಾಸ್ ವೈದ್ಯರಿಗೆ ಹೊಡೆದನು ಎಂದು ಜೈಲಿನ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com