ತೋಂಟದಾರ್ಯ ಸ್ವಾಮೀಜಿ ಲಿಂಗೈಕ್ಯ: ನೂತನ ಪೀಠಾಧಿಪತಿಯಾಗಿ ನಾಗೂರು ಸಿದ್ದರಾಮ ಮಹಾಸ್ವಾಮಿ ನೇಮಕ
ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ನಿನ್ನೆ (ಶನಿವಾರ) ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಠಕ್ಕೆ ನೂತನ ಪೀಠಾಧಿಪತಿಗಳನ್ನಾಗಿ ನಾಗೂರು ಸಿದ್ದರಾಮ ಮಹಾಸ್ವಾಮಿಗಳನ್ನು ನೇಮಕ ಮಾಡಲಾಗಿದೆ.
ಗದಗ: ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ನಿನ್ನೆ (ಶನಿವಾರ) ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಠಕ್ಕೆ ನೂತನ ಪೀಠಾಧಿಪತಿಗಳನ್ನಾಗಿ ನಾಗೂರು ಸಿದ್ದರಾಮ ಮಹಾಸ್ವಾಮಿಗಳನ್ನು ನೇಮಕ ಮಾಡಲಾಗಿದೆ.
ಆನಂದಪುರ ಮಲ್ಲಿಕಾರ್ಜುನ ಸ್ವಾಮೀಜಿ ತೋಂಟದಾರ್ಯ ಮಠದ ಉತ್ತರಾಧಿಕಾರಿಯ ಘೋಷಣೆ ಮಾಡಿದ್ದಾರೆ.
ತೋಂಟದಾರ್ಯ ಸಿದ್ದಲಿಂಗ ಯತಿಗಳು ತಾವು ಜೀವಂತವಿದ್ದಾಗಲೇ ಉತ್ತರಾಧಿಕಾರಿ ಕುರಿತಂತೆ ಉಯಿಲು ಬರೆದಿದ್ದರು.ಸುಮಾರು ಹದಿನೈದು ವರ್ಷದ ಹಿಂದೆ ತಮ್ಮ 60ನೇ ವರ್ಷದಲ್ಲೇ ಅವರು ಉತರಾಧಿಕಾರಿ ಸಂಬಂಧ ವಿವರವಾಗಿ ಉಯಿಲು ಬರೆದಿದ್ದರೆನ್ನಲಾಗಿದೆ.
ನಾಗೂರು ಸಿದ್ದರಾಮ ಮಹಾಸ್ವಾಮಿಗಳು ಪ್ರಸ್ತುತ ರುದ್ರಾಕ್ಷಿ ಮಠದ ಪೀಠಾಧಿಪತಿಗಳಾಗಿದ್ದು ತೋಂಟದಾರ್ಯ ಮಥದ 20ನೇ ಪೀಠಾಧಿಪತಿಗಳಾಗಿ ನೇಮಕವಾಗಿದ್ದಾರೆ.
ಅಂತಿಮ ದರ್ಶನ
ಶ್ರೀಶೈಲ ಜಗದ್ಗುರುಗಳು, ಶಾಸಕ ಗೋವಿಂದ ಕಾರಜೋಳ, ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ರಾಜಕಾರಣಿಗಳು, ಮಠಾಧೀಶರು ಸೇರಿ ಸಾವಿರಾರು ಭಕ್ತರು ಲಿಂಗೈಕ್ಯರಾದ ತೋಂಟದಾರ್ಯ ಮಠ ಸಿದ್ದಲಿಂಗ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ.