ಗೌರಿ ಲಂಕೇಶ್ ಹತ್ಯೆ: ಆರೋಪಿಯಿಂದ ಖಾಲಿ ಪತ್ರಗಳಿಗೆ ಸಹಿ ಪಡೆದ ತನಿಖಾಧಿಕಾರಿಗಳು, ಸುಳ್ಳು ಎಂದ ಎಸ್ಐಟಿ

ಗೌರಿ ಲಂಕೇಶ್ ಹತ್ಯೆ ಪ್ರಕರಣದ 17ನೇ ಆರೋಪಿಯಾದ ವಾಸುದೇವ್ ಸೂರ್ಯವಂಶಿ, ತಾನು ಪೋಲೀಸ್ ಕಸ್ಟಡಿಯಲ್ಲಿದ್ದ ವೇಳೆ ವಿಶೇಷ ತನಿಖಾ ತಂಡ (ಎಸ್ಐಟಿ) ಹಲವು ಕಾಲಿ ಕಾಗದ....
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ 17ನೇ ಆರೋಪಿಯಾದ ವಾಸುದೇವ್ ಸೂರ್ಯವಂಶಿ, ತಾನು ಪೋಲೀಸ್ ಕಸ್ಟಡಿಯಲ್ಲಿದ್ದ ವೇಳೆ ವಿಶೇಷ ತನಿಖಾ ತಂಡ(ಎಸ್ಐಟಿ) ಹಲವು ಕಾಲಿ ಕಾಗದಗಳಿಗೆ ಸಹಿ ಹಾಕುವಂತೆ ಬಲವಂತಪಡಿಸಿದೆ ಎಂದು ಆರೋಪಿಸಿದ್ದಾರೆ.
ಸೂರ್ಯವಂಶಿ ನ್ಯಾಯಾಂಗ ಬಂಧನ ಅವಧಿ ಗುರುವಾರ ಪೂರ್ಣಗೊಂಡಿದ್ದು ಎಸ್ಐಟಿ ಅಧಿಕಾರಿಗಳು ಆತನನ್ನು ಕೆಸಿಒಸಿಎ ಪ್ರಕರಣಗಳಿಗೆ ಮೀಸಲಾದ ವಿಶೇಷ ನ್ಯಾಯಾಲಯದೆದುರು ಹಾಜರು ಪಡಿಸಿದ್ದಾರೆ. ಆ ವೇಳೆ ಸೂರ್ಯವಂಶಿ ತನಗೆ ಇಚ್ಚೆ ಇಲ್ಲದಿದ್ದರೂ ಅಧಿಕಾರಿಗಳು ನನ್ನಿಂದ ಹಲವು ಖಾಲಿ ಕಾಗದ ಪತ್ರಗಳಿಗೆ ಸಹಿ ಪಡೆದಿದ್ದರು ಎಂದು ಆರೋಪಿಸಿದ್ದಾನೆ.
ಇದಕ್ಕೆ ಮುನ್ನ ಈ ವಿಚಾರವಾಗಿ ಸ್ವತಂತ್ರ ದೂರನ್ನು ಸಲ್ಲಿಸಿದ ನಾಗೇಶ್ ಜೋಶಿ, ಆರೋಪಿಯು ತಾನು ಈ ಮುನ್ನ ಪೋಲೀಸರಿಗೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು.
"ಆರೋಪಿಯು ಶಾಲೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದವನಲ್ಲ, ಅವನಿಗೆ ಮಾತೃಭಾಷೆ ಬಿಟ್ಟರೆ ಬೇರೆ ಭಾಷೆಗಳ ಜ್ಞಾನವನ್ನು ಹೊಂದಿಲ್ಲ ಅಲ್ಲದೆ ಆತ ತನ್ನ ಮೂಲಭೂತ ಹಕ್ಕಿನ ಕುರಿತಂತೆ ಸಹ ಯಾವ ಅರಿವನ್ನೂ ಹೊಂದಿಲ್ಲ.ಯಾವಾಗ ಆರೋಪಿ ಅವನ ವಕೀಲರೊಡನೆ ಮಾತನಾಡಿದ್ದನೋ ಆಗ ಮಾತ್ರ ಅವನಿಗೆ ತನ್ನ ಸಹಿಯನ್ನು ತನ್ನ ವಿರುದ್ಧವೇ ಬಳಸುವ ಪಿತೂರಿಯ ಅರಿವಾಗಿದೆ." ವಕೀಲರು ಹೇಳಿದ್ದಾರೆ,
"ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ ವೇಳೆ ಅದೊಮ್ಮೆ ಪೊಲೀಸ್ ಅಧಿಕಾರಿಗಳು ಕೆಲ ಹಿರಿಯ ಶ್ರೇಣಿಯ ಅಧಿಕಾರಿಗಳ ಚಿತ್ರ ಹಾಗೂ ಸಹಿ ತೋರಿಸಿ ಈ ಸಹಿಯನ್ನು ನೀನು ಮಾಡಿದ್ದೀಯೆ ಎಂದು ಕೇಳಿದ್ದಾರೆ. ಆದರೆ ಈ ಒಂದು ಸಾಲಿನ ಸಂಭಾಷಣೆ ಬಳಿಕ ಆರೋಪಿ ಹಾಗೂ ತನಿಕಾಧಿಕಾರಿಗಳ ನಡುವೆ ಯಾವ ಬಗೆಯ ಮಾತುಕತೆ ನಡೆಇದಿಲ್ಲ.ಅಲ್ಲದೆ ಸೂರ್ಯವಂಶಿಯನ್ನು ಅಲ್ಲಿಂದ ದೂರ ಕಳಿಸಲಾಗಿದೆ.ಅಲ್ಲದೆ ಈ ಕಾಗದ ಪತ್ರಗಳಲ್ಲಿ ಏನಿದೆ ಎನ್ನುವುದನ್ನು ಸಹ ಅವನಿಗೆ ತಿಳಿಸಿಲ್ಲ" ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಎಸ್ಐಟಿ ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು ಆರೋಪಿ ಸೂರ್ಯವಂಶಿ ಪರ ವಕೀಲರ ಆರೋಪ ನಿರಾಧಾರವಾದದ್ದು. ಸಂಪೂರ್ಣ ಸುಳ್ಳು ಎಂದು ಹೇಳಿದೆ. "ಕೆ.ಸಿ.ಒ.ಸಿ.ಎ.ಎ ನಿಬಂಧನೆಗಳ ಕಟ್ಟುನಿಟ್ಟಾದ ಅನುಷ್ಠಾನ ಮಾಡಲಾಗಿದ್ದು ಯಾವುದೇ ಅಕ್ರಮ ನಡೆದಿಲ್ಲ.ಸ್ಐಟಿಯ ಭಾಗವಾಗಿಲ್ಲದ ಎಸ್ಪಿ ಶ್ರೇಣಿಯ ಅಧಿಕಾರಿಗಳು ಅವನಿಂದ ಹೇಳಿಕೆ ಪಡೆದಿದ್ದಾರೀ ನ್ನುವುದು ಸುಳ್ಳು.ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತಿದ್ದಂತೆ ಸೂರ್ಯವಶಿಯನ್ನು ಅಧಿಕೃತ ನ್ಯಾಯಾಲಯದ ನ್ಯಾಯಮೂರ್ತಿಗಳ ಬಳಿ ಹಾಜರುಪಡಿಸಲಾಗಿತ್ತು.ಅಲ್ಲಿ ಆರೋಪಿಯು ಖಾಲಿ  ಪತ್ರಗಳಿಗೆ ಸಹಿ, ಹಾಕಿಸಿರುವ ಯಾವ ಆರೋಪ ಮಾಡಿಲ್ಲ.ಹೇಳಿಕೆಗಳನ್ನು ಅರ್ಥಮಾಡಿಕೊಳ್ಳದೆ, ಹೇಳಿಕೆಗಳನ್ನು ಓದದೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿ ಎಲ್ಲಿಯೂ ಹೇಳಿಲ್ಲ.
"ಅಲ್ಲದೆ ನ್ಯಾಯಾಧೀಶರ ಮುಂದೆ ಹಾಜರಾಗುವ ಮುನ್ನ ಆರೋಪಿಯು ಸ್ವಯಂಪ್ರೇರಿತ ತಪ್ಪೊಪ್ಪಿಗೆಯ ಹೇಳಿಕೆಗೆ ಸಹಿ ಮಾಡಿದ್ದಾನೆ.ಇದನ್ನು ಸಹ ನ್ಯಾಯಾಧೀಶರ ಮುಂದೆ ಇರಿಸಲಾಗಿದೆ.ಹೀಗಾಗಿ ಕಾನೂನುಬದ್ದ ರೀತಿಯಲ್ಲಿ ಎಲ್ಲ ನಡೆದಿದ್ದು ನ್ಯಾಯಾಲಯದ ಆದೇಶದಂತೆ ಮುಂದೆ ಕ್ರಮ ಜರುಗಿಸಲಾಗುತ್ತದೆ"ತನಿಖಾ ತಂಡ ಹೇಳಿದೆ.
ಮೋಹನ್ ನಾಯಕ್ ಗೆ ಜಾಮೀನಿಲ್ಲ
ಗೌರಿ ಹತ್ಯೆ ಪ್ರಕರಣದಲ್ಲಿ ನಂ .7ನೇ ಆರೋಪಿಯಾದ ಮೋಹನ್ ನಾಯಕ್ಸಲ್ಲಿಸಿದ್ದ ಜಾಮೀನು ಅರ್ಜಿ ನ್ಯಾಯಾಲಯ ತಿರಸ್ಕರಿಸಿದೆ. ಹತ್ಯೆಯ ಮುನ್ನ ಹಾಗೂ ನಂತರ ಕುಂಬಳಗೋಡಿನ ತನ್ನ ಮನೆಯಲ್ಲಿ ಅರೋಪಿಗಳಿಗೆ ಆಶ್ರಯ ನೀಡಿದ್ದನೆಂದು ಮೋಹನ್ ನಾಯಾಕ್ ಮೇಲೆ ಆರೋಪ ಹೊರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com