ಶಬರಿಮಲೆ ವಿವಾದವನ್ನು ಮತ ಬ್ಯಾಂಕ್ ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ: ರಾಮಚಂದ್ರ ಗುಹಾ

ಭಾರತದಲ್ಲಿ ಪ್ರಾರಂಭವಾಗಿರುವ "ಮೀಟೂ" ಚಳವಳಿಯನ್ನು ನಾನು ಸಂಪೂರ್ಣವಾಗಿ ಬೆಂಬಾಲಿಸುತ್ತೇನೆ. ಪುರುಷ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಮಹಿಳೆಯರು ಎದುರಿಸುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಭಾರತದಲ್ಲಿ ಪ್ರಾರಂಭವಾಗಿರುವ "ಮೀಟೂ" ಚಳವಳಿಯನ್ನು ನಾನು ಸಂಪೂರ್ಣವಾಗಿ ಬೆಂಬಾಲಿಸುತ್ತೇನೆ. ಪುರುಷ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಮಹಿಳೆಯರು ಎದುರಿಸುವ ಹಿಂಸೆಯನ್ನು ಕುರಿತು ಧೈರ್ಯವಾಗಿ ಮಾತನಾಡಿದ ಮಹಿಳೆಯರನ್ನುನಾನು ಗೌರವಿಸುವೆ." ಖ್ಯಾತ ಇತಿಹಾಸಸಂಶೋಧಕ ರಾಮಚಂದ್ರ ಗುಹಾ ಹೇಳಿದ್ದಾರೆ.
ಭಾರತದಲ್ಲಿ ಲಿಂಗ ಮತ್ತು ಜಾತಿ ಅಸಮಾನತೆಯ ವಿವಾದಾಂಶಗಳ ಬಗ್ಗೆ  ಮಾತನಾಡಿದ ಗುಹಾ "ಸುಧಾರಣೆಗಳು ಮೇಲಿನ ಸ್ತರದಲ್ಲಲ್ಲ, ಕೆಳಗಿನಿಂದ ಪ್ರಾರಂಬವಾಗಬೇಕು.ಮೇಲ್ಜಾತಿ ಹಿಂದುಗಳು ಮತ್ತು ಪುರುಷರು ಕೂಡ ಜಾತಿ ಮತ್ತು ಲಿಂಗ ಸಮಾನತೆಯ ಹೋರಾಟವನ್ನು ಗುರುತಿಸಬೇಕು" ಶನಿವಾರ ಪ್ರಾರಂಭವಾದ ಬೆಂಗಳೂರು ಸಾಹಿತ್ಯೋತ್ಸವದ ಏಳನೇ ಆವೃತ್ತಿಯಲ್ಲಿ ಅವರು ಮಾತನಾಡಿದ್ದಾರೆ.
ಕಾನೂನಿನ ದೃಷ್ಟಿಯಲ್ಲಿ ಸಮಾನತೆಯು ಭಾರತೀಯ ಸಂವಿಧಾನದಿಂದ ಸಾಧಿಸಲ್ಪಟ್ಟಿದ್ದರೂ ಸಹ ಕೆಲ ಪ್ರದೇಶ, ವಲಯಗಳಲ್ಲಿ ಮಹಿಳೆಯರಿಗೆ ಸಮಾನ ಗೌರವ ಸಿಗುತ್ತಿಲ್ಲ ಎಂದು ಗುಹಾ ಹೇಳಿದ್ದಾರೆ. 
ಶಬರಿಮಲೆ ವಿವಾದದ ಸಂಬಂಧ ಮಾತನಾಡಿದ ಗುಹಾ ಶಬರಿಮಲದಲ್ಲಿ ಮಹಿಳಾ ಪ್ರವೇಶ ನಿಷೇಧ ಎನ್ನುವುಉದ್ ಸಂಪ್ರದಾಯ ಎಂದು ವಾದಿಸಲಾಗುತದೆ. ಆದರೆ ತೊಂಬತ್ತು ವರ್ಷಗಳ ಹಿಂದೆ, ಉನ್ನತ-ಜಾತಿ ಹಿಂದೂಗಳ 99% ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಿದ್ದರು.ಶೇಕಡಾ 80 ರಷ್ಟು ಹಿಂದೂಗಳು ಅಸ್ಪೃಶ್ಯತೆ, ಸತಿ ಮತ್ತು ಬಾಲ್ಯ ವಿವಾಹವನ್ನು ಶ್ರೇಷ್ಠ ಆಚರಣೆ ಎಂದ್ ಭಾವಿಸಿದ್ದರು.ಯಾರೊಬ್ಬರೂ ಧರ್ಮ, ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎನ್ನುವುದು ಅಸಂಬ್ವದ್ದವಾದ ವಿಚಾರ" ಎದರು.
"ಹಿಂಸೆಗೆ ಇಳಿಯದೆ ನಿಧಾನವಾಗಿ ಮನವೊಲಿಕೆ ಕಾರ್ಯದಲ್ಲಿ ನೀವು ತೊಡಗಿಸಿಕೊಳ್ಳಬೇಕಿದೆ.ಸಮಕಾಲೀನ ಭಾರತದಲ್ಲಿ ಎಲ್ಲಾ ವಿಚಾರಗಳೂ ಮತಬ್ಯಾಂಕ್ ರಾಜಕೀಯಕ್ಕೆ ತಳಕು ಹಾಕಿಕೊಂಡಿದೆ. ಶಬರಿಮಲೆಯಲ್ಲಿ ಸಹ ಏನು ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿದಿದೆ. ಕೇರಳದಲ್ಲಿ ಬಿಜೆಪಿ ಭದ್ರ ನೆಲೆ ಕಂಡುಕೊಳ್ಳಲು ಈ ವಿವಾದವನ್ನು ಬೆಳೆಸುತಿದೆ"ಗುಹಾ ಹೇಳಿದ್ದಾರೆ.
‘Is There an Indian Road to Equality?’ ಎನ್ನುವ ವಿಚಾರದ ಕುರಿತು ಮಾತನಾಡಿದ ಗುಹಾ 2018 ರಲ್ಲಿ ಮಹಿಳೆ ಹಾಗೂ ದಲಿತರು ನಮ್ಮ ಸಂವಿಧಾನ ರಚನೆಕಾರರು ಮತ್ತು ಅಂಬೇಡ್ಕರ್, ಗಾಂಧಿ, ಗೋಖಲೆ ಮತ್ತಿತರ ದೇಶಪ್ರೇಮಿಗಳು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಮಟ್ಟದಲ್ಲಿ ಗೌರವ ಪಡೆದುಕೊಳ್ಳುತ್ತಿದ್ದಾರೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ."ದಲಿತ ಚಳವಳಿ ರಾಷ್ಟ್ರದಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿದರೂ ಮಹಿಳಾ ಸಮಾನತೆ ಚಳವಳಿ ಇನ್ನೂ ಹಿಂದೆ ಬಿದ್ದಿದೆ. ನೀವು ಶಬರಿಮಲ ವಿವಾದವನ್ನು ವೈಕೊಮ್ ಸತ್ಯಾಗ್ರಹದೊಂದಿಗೆ ಹೋಲಿಸಿ ನೋಡಬೇಕು, ಇದು 1920 ರ ದಶಕದ ಮಧ್ಯಭಾಗದಲ್ಲಿ ಕೇರಳದಲ್ಲಿ ಸಂಭವಿಸಿತು. ದೇವಸ್ಥಾನಗಳಲ್ಲಿ ಕೆಳ-ಜಾತಿ ಜನರನ್ನು ಅನುಮತಿಸಲಾಗಲಿಲ್ಲ. ಆಗ ಬ್ರಾಹ್ಮಣರು ದೇವಾಲಯ ಪ್ರವೇಶಿಸಿದ್ದ ಒಬಿಸಿ ಹಾಗೂ ದಲಿತ ಜಾತಿಗಳ ಜನರಿಗೆ ಹಿಂಸೆ ನೀಡಿದ್ದರು. ಆದರೆ ಅಂತಿಮವಾಗಿ ದಲಿತರು ದೇವಾಲಯ ಪ್ರವೇಶ ಮಾಡುವುದನ್ನು ತಡೆಯಲು ಸಾಧ್ಯವಾಗಿಲ್ಲ.
ಮಹಿಳೆಯರನ್ನು ದ್ವರ ಆರಾಧನಾ ಸ್ಥಳಗಳಿಗೆ ಪ್ರವೇಶಿಸುವಂತೆ ಮಾಡಲು ಅವರನ್ನು ಅರ್ಚಕರು, ಬಿಷಪ್ ಗಳು, ಮುಲ್ಲಾಗಳನ್ನಾಗಿ ನೇಮಕ ಮಾಡಬೇಕಿದೆ ಎಂದು ಗುಹಾ ಅಭಿಪ್ರಾಯಪಟ್ಟರು.
"ದಲಿತ ಸಮಾನತೆಯನ್ನು ದೈನಂದಿನ ಸಾಮಾಜಿಕ ಜೀವನದಲ್ಲಿ ಇನ್ನೂ ಸಾಧಿಸಬೇಕಾಗಿದೆ. ನಗರಗಳು ಜಾತಿ ತಾರತಮ್ಯದಿಂದ ಮುಕ್ತವಾಗಿದ್ದವು ಎಂದು ನಾನು ಯೋಚಿಸಿದ್ದೆ. ಆದರೆ ರೋಹಿತ್ ವೇಮುಲಾ ಘಟನೆ ಪರಿಗಣಿಸಿದಾಗ ನಗರದಲ್ಲಿನ ಜಾತಿ ತಾರತಮ್ಯ ಮತ್ತು ಅವಮಾನತೆ ಪ್ರತಿಷ್ಠಿತ ಕಾಲೇಜಿನಲ್ಲಿ ಆತ ಜೀವ ಕಳೆದುಕೊಳ್ಳುವಂತೆ ಮಾಡಿದೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com