ಸಿವಿ ರಾಮನ್ ನಗರ: ಬಿಜೆಪಿ ಕಾರ್ಪೊರೇಟರ್ ಅರುಣಾ ರವಿ ಮತ್ತು ಆಕೆಯ ಪತ್ನಿ ವಿರುದ್ದ ಎಫ್ ಐ ಆರ್

ಸಿ.ವಿ ರಾಮನ್ ನಗರ ಬಿಜೆಪಿ ಕಾರ್ಪೋರೇಟರ್ ಅರುಣಾ ರವಿ ಮತ್ತು ಆಕೆಯ ಪತಿ ವಿರುದ್ದ 82 ವರ್ಷದ ವೃದ್ದರೊಬ್ಬರು ದೂರು ದಾಖಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿ.ವಿ ರಾಮನ್ ನಗರ ಬಿಜೆಪಿ ಕಾರ್ಪೋರೇಟರ್ ಅರುಣಾ ರವಿ ಮತ್ತು ಆಕೆಯ ಪತಿ ವಿರುದ್ದ 82 ವರ್ಷದ ವೃದ್ದರೊಬ್ಬರು ದೂರು ದಾಖಲಿಸಿದ್ದಾರೆ. 
ಶಾಲಾ ಕಟ್ಟಡದ ಕಾಂಪೌಂಡ್ ಧ್ವಂಸ ಗೊಳಿಸಿದ್ದರೆಂದು ಆರೋಪಿಸಿರುವ ವ್ಯಕ್ತಿ ಅವರು 15 ಲಕ್ಷ ರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ. ಈ ಸಂಬಂಧ ಬೈಯ್ಯಪ್ಪನಹಳ್ಳಿ  ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. 10ನೇ ಮೆಟ್ರೋಪಾಲಿಟನ್ ಮ್ಯಾಡಿಸ್ಟ್ರೇಟ್ ಕೋರ್ಟ್ ನಿರ್ದೇಶನಂತೆ ಎಫ್ ಐ ಆರ್ ದಾಖಲಾಗಿದೆ,
ರಾಮಯ್ಯ ಎಂಬುವರು ಕಗ್ಗದಾಸಪುರ ಕೆರೆಯ ಬಳಿ ಶಾಲೆ ನಡೆಸುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ರಾಮಯ್ಯ ಅವರು ಕೆರೆ ಒತ್ತುವರಿ ಮಾಡಿದ್ದಾರೆಂದು ಆರೋಪಿಸಿದ್ದರು, ಅದಕ್ಕಾಗಿ ರಾಮಯ್ಯ ಕೋರ್ಟ್ ಮೊರೆ ಹೋಗಿದ್ದರು, ರಾಮಯ್ಯ ಪರವಾಗಿ ತೀರ್ಪು ನೀಡಿದ್ದ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬಾರದೆಂದು ಬಿಬಿಎಂಪಿ  ಸೂಚಿಸಿತ್ತು.
ಆದರೆ ಜುಲೈ1 ರಂದು ಸ್ಥಳಕ್ಕೆ ಬಂದ ಕಾರ್ಪೋರೇಟರ್ ಅರುಣ ರವಿ, ತಮ್ಮ ಸಹಚರರ ಜೊತೆ ಬಂದು ದೂರುದಾರರು ಮತ್ತು ಶಾಲಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಕಾರ್ಪೋರೇಟರ್ ಪತಿ ರವಿ 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ, ರಾಮಯ್ಯ ಅವರ ದೂರಿನ ಆಧಾರದ ಮೇಲೆ ಅರುಣಾ ರವಿ ಮತ್ತು ಅವರ ಪತಿ ರವಿ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ.
ಕಗ್ಗದಾಸಪುರ ಕೆರೆ ರಕ್ಷಿಸಲು 2 ವರ್ಷಗಳಿಂದ ನಾವು ಹೋರಾಟ ನಡೆಸಿದ್ದೇವೆ,   ಘಟನೆ ನಡೆದ ದಿನ ಬಿಬಿಎಂಪಿ ಅಧಿಕಾರಿಗಳು ಇದ್ದರು, ಕಾನೂನು ಪ್ರಕಾರವಾಗಿಯೇ ಕಂಪೌಂಡ್ ದ್ವಂಸ ಮಾಡಿದ್ದೇವೆ,ಎಂದು ಅರುಣಾ ರವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com