ಕರ್ನಾಟಕ: ಎಸ್ಕಾಂ, ಕೆಪಿಟಿಸಿಎಲ್ ನಿಂದಲೇ ವಿದ್ಯುತ್ ನಿಗಮಕ್ಕೆ 15 ಸಾವಿರ ಕೋಟಿ ಬಾಕಿ!

ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಲು 5 ಲಕ್ಷ ಟನ್ ಕಲ್ಲಿದ್ದಲು ಖರೀದಿಸಲು ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಕೆಪಿಸಿಎಲ್) ಜಾಗತಿಕ ಟೆಂಡರ್ ಗಳನ್ನು ಆಹ್ವಾನಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರಾಯಚೂರು: ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಲು 5 ಲಕ್ಷ ಟನ್ ಕಲ್ಲಿದ್ದಲು ಖರೀದಿಸಲು ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಕೆಪಿಸಿಎಲ್) ಜಾಗತಿಕ ಟೆಂಡರ್ ಗಳನ್ನು ಆಹ್ವಾನಿಸುತ್ತಿದೆ. ಆದರೆ ಈ ನಡುವೆ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ),  ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಕಳೆದ ಹಲವು ವರ್ಷಗಳಿಂದ ಖರೀದಿಸಿದ ವಿದ್ಯುತ್ ಗೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಈ ಬಾಕಿ ಮೊತ್ತ ಸುಮಾರು 15,000 ಕೋಟಿ ರೂ ಅಷ್ಟಿದೆ.
ಕನ್ನಡಪ್ರಭ.ಕಾಂಗೆ ದೊರೆತ ಅಂಕಿ ಅಂಶಗಳ ಅನುಸಾರ ಎಲ್ಲಾ ಸರಬರಾಜು ಕಂಪೆನಿಗಳು ಹಾಗೂ ಕೆಪಿಟಿಸಿಎಲ್ ಸೇರಿ 15,464.77 ಕೋಟಿ ರೂ ಬಾಕಿ ಪಾವತಿಸಬೇಕಿದೆ. ಇದು ದೀರ್ಘಾವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಉಷ್ಣ ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆ ಮೇಲೆ ಪ್ರೈಣಾಮ ಬೀರಲಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಅತಿ ಹೆಚ್ಚು ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿದ್ದು  1,607.89 ಕೋಟಿ ರೂ. ಬಡ್ಡಿ ಸೇರಿದಂತೆ  6,610.95 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.ಈ ಅಂಕಿ ಅಂಶಗಳು  2018 ರ ಅಕ್ಟೋಬರ್ 20ರವರೆಗಿನ ಮಾಹಿತಿಯನ್ನು ಆಧರಿಸಿದ್ದಾಗಿದೆ.
ಕಲಬುರ್ಗಿಯ ಜೆಸ್ಕಾಂ ಘಟಕ ಎರಡನೇ ದೊಡ್ಡ ಬಾಕಿದಾರನಾಗಿದ್ದು ರೂ 2,334.64 ಕೋಟಿ ಬಾಕಿ ಪಾವತಿ ಮಾಡಬೇಕಿದೆ.ನಿಗಮಗಳು ಬಾಕಿ ಉಳಿಸಿಕೊಳ್ಳುವ ಕಾರಣ ವಿದ್ಯುತ್ ದರ ಹೆಚಳವಾಗುತ್ತದೆ ಎಂದು ಜೆಸ್ಕಾಂ ಮೂಲಗಳು ಹೇಳಿದೆ.ಅಲ್ಲದೆ, ರೈತರಿಗೆ ಸೇರಬೇಕಾಗಿದ್ದ ಸರ್ಕಾರದ ಸನ್ಸಿಡಿ ಹಣ ಸಹ ರಾಜ್ಯ ಸರ್ಕಾರ ಇನ್ನೂ ಪಾವತಿಸಿಲ್ಲ.
 ಮೈಸೂರು ಚಾಮುಂಡೇಶ್ವರಿ ಎಲೆಕ್ಟ್ರಿಕ್ ಸಪ್ಲೈ ಕಾರ್ಪೊರೇಶನ್ ಲಿಮಿಟೆಡ್ ಸಹ ಪಟ್ಟಿಯಲ್ಲಿದ್ದು , ಇದು ರೂ 2,174.17 ಕೋಟಿಗಳನ್ನು ಪಾವತಿಸಬೇಕಾಗಿದೆ, ಇದರಲ್ಲಿ 859.27 ಕೋಟಿ ರೂ ಬಡ್ಡಿ ಮೊತ್ತ ಸಹ ಇದೆ.ಇನ್ನು ಹುಬ್ಬಳ್ಳಿ ವಲಯದ ಹೆಸ್ಕಾಂ ಹಾಗೂ ಮಂಗಳೂರು ವಲಯದ ಮೆಸ್ಕಾಂ ಗಳು ಸಹ ಬಿಲ್ ಬಾಕಿ ಹಾಗೇ ಉಳಿಸಿಕೊಂಡಿದ್ದು ಹೆಸ್ಕಾಂ 1,914.35 ಕೋಟಿ ರೂ. ಹಾಗೂ ಮೆಸ್ಕಾಂ 1,729.60 ಕೋಟಿ ರೂ.ಬಾಕಿ ಮೊತ್ತ ಪಾವತಿ ಮಾಡಬೇಕಿದೆ.
ಇನ್ನು ಕೆಪಿಟಿಸಿಎಲ್ ತಾನು ಕೆಪಿಸಿಎಲ್ ಗೆ  701.06 ಕೋಟಿ ರೂ. ಪಾವತಿಸಬೇಕಿದೆ.ವಿಳಂಬದ ಕಾರಣದಿಂದ ಆದ ಹೆಚ್ಚುವರಿ ಬಡ್ಡಿ ಸುಮಾರು  650 ಕೋಟಿ ರೂ.ಇದೆ.ಎಲ್ಲಾ ಎಸ್ಕಾಂಗಳು, ಹಾಗೂ ಕೆಪಿಟಿಸಿಎಲ್ ಬಾಕಿ ಉಳಿಸಿಕೊಂಡಿರುವ ಒಟ್ಟು ಮೊತ್ತ  10,111.66 ಕೋಟಿ ರೂ ಆಗಿದ್ದು ಇದರಲ್ಲಿ  5,353.11 ಕೋಟಿ ರೂ ಬಡ್ಡಿ ಸೇರಿ , ಒಟ್ಟು 15,464.77 ಕೋಟಿ ರೂ ಆಗಲಿದೆ.
ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮಾತನಾಡಿ ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳು ಬಾಕಿ ಪಾವತಿಸದೆ ಇರುವುದು ಕೆಪಿಸಿಎಲ್ ಕಾರ್ಯಾಚರಣೆಯ ದಕ್ಷತೆಯ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.ಇದುಸರ್ಕಾರೇತರ ವಿಷಯವಾಗಿದೆ ಮತ್ತು ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. "ಕೆಪಿಸಿಎಲ್ ರಾಜ್ಯ ಮತ್ತು ಇನ್ನಿತರ ಸಂಸ್ಥೆಗಳಿಂದ ಎರವಲು ಪಡೆಯಲಿದೆ ಮತ್ತು ರಾಜ್ಯವು ಯಾವುದೇ ಸಮಸ್ಯೆಗಳಿಲ್ಲದೆ ಇರಲಿದೆ " ಅವರು ಹೇಳಿದ್ದಾರೆ.
ರಾಜ್ಯಕ್ಕೆ  5 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಖರೀದಿಸಲು ಕೆಪಿಸಿಎಲ್ ಗೆ 20 ಕೋಟಿ ರೂ. ಅಗತ್ಯವಿದೆ.
ಇನ್ನು ಹೆಸರು ಹೇಳಲು ಇಚ್ಚಿಸಿದ ಇಂಧನ ಕ್ಷೇತ್ರದ ಪರಿಣಿತರೊಬ್ಬರು ಹೇಳಿದಂತೆ  ಕೆಪಿಸಿಎಲ್ ಈಗಾಗಲೇ ಆದಾಯ ಕೊರ್ವತೆಯನ್ನು ಎದುರಿಸುತ್ತಿದೆ.ಹೀಗಾಗಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿದೆ. ಕೆಪಿಸಿಎಲ್ ರಾಜ್ಯ ಸರ್ಕಾರದ ಅಧೀನದಲ್ಲಿದ್ದು ರಾಜ್ಯ ಅದರ ಸುಗಮ ಕಾರ್ಯಾಚರಣೆಗೆ ಅನುಕೂಲ ಕಲ್ಪಿಸಿದ್ದರೂ ಸಹ ಇಂದು ಅದು ಭಾರೀ ದೊಡ್ಡ ಹೊರೆಯನ್ನು ಹೊತ್ತಿರಬೇಕಾಗಿದೆ.ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com