
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪಿನ ಸದಸ್ಯರಿಗೆ ಇರುವ ವಿಮಾ ಯೋಜನೆ ಪ್ರಗತಿ ರಕ್ಷಾ ಕವಚವನ್ನು ಕೇಂದ್ರ ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು.
ಯೋಜನೆಯನ್ನು ಶ್ಲಾಘಿಸಿದ ಸಚಿವೆ, ಜನರು ಆರ್ಥಿಕ ಸಂಕಷ್ಟದಿಂದ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ತಡೆಯುತ್ತದೆ. ಪ್ರಗತಿ ರಕ್ಷಾ ಕವಚ ಸ್ವಸಹಾಯ ಗುಂಪುಗಳ ಸದಸ್ಯರು ಸಾಲ ತೆಗೆದುಕೊಂಡವರಿಗೆ ಸಹ ವಿಮಾ ಸೌಲಭ್ಯವನ್ನು ನೀಡುತ್ತದೆ ಎಂದರು.
ಸಾಲ ತೆಗೆದುಕೊಂಡ ಸದಸ್ಯರಿಗೆ 5 ಲಕ್ಷದವರೆಗೆ ವಿಮೆ ನೀಡಲಾಗುತ್ತದೆ. ಅದು 60 ವರ್ಷದವರೆಗೆ ಇರುತ್ತದೆ. ಸಾಲ ತೆಗೆದುಕೊಂಡವರು ಅಥವಾ ಅವರ ಪತ್ನಿ 60 ವರ್ಷದೊಳಗೆ ಮೃತಪಟ್ಟರೆ ಸಾಲದ ಮೊತ್ತವನ್ನು ವಿಮೆ ಭರಿಸುತ್ತದಂ ಮತ್ತು ಉಳಿದ ಹಣವನ್ನು ನಾಮಿನಿಗೆ ನೀಡಲಾಗುತ್ತದೆ. ಇದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಮತ್ತು ಎಲ್ಐಸಿಯ ಜಂಟಿ ಕಾರ್ಯಕ್ರಮವಾಗಿದೆ.
ಅಗತ್ಯವಿರುವವರಿಗೆ ಸಾಲ ನೀಡಿದರೆ ಸಾಲದು, ಸದಸ್ಯರಿಗೆ ಸಾಲದ ಸೌಲಭ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
Advertisement