ಜಾತ್ಯಾತೀತ ಶಕ್ತಿಗಳು ಸರಿಯಾದ ಸಮಯದಲ್ಲಿ ಒಗ್ಗೂಡದ ಕಾರಣ ಮೋದಿ ಪ್ರಧಾನಿಯಾದರು: ಸಂದರ್ಶನದಲ್ಲಿ ಎಚ್.ಡಿ ದೇವೇಗೌಡ

ಮೂಲಭೂತವಾದಿಗಳನ್ನು ಅಧಿಕಾರದಿಂದ ಕಿತ್ತೊಗೆಯಬೇಕು 2019 ರ ಲೋಕಸಭೆ ಚುನಾವಣೆಯಲ್ಲಿ ಜ್ಯಾತ್ಯಾತೀತ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕು ಎಂದು ಜೆಡಿಎಸ್ ಸರ್ವೋಚ್ಚ ನಾಯಕ ಹಾಗೂ ಮಾಜಿ...
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬಳ್ಳಾರಿ: ಮೂಲಭೂತವಾದಿಗಳನ್ನು ಅಧಿಕಾರದಿಂದ ಕಿತ್ತೊಗೆಯಬೇಕು 2019 ರ ಲೋಕಸಭೆ ಚುನಾವಣೆಯಲ್ಲಿ ಜ್ಯಾತ್ಯಾತೀತ ಪ್ರಾದೇಶಿಕ ಪಕ್ಷಗಳು ಒಗ್ಗೂಡಬೇಕು ಎಂದು ಜೆಡಿಎಸ್ ಸರ್ವೋಚ್ಚ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಬಲವಾಗಿ ನಂಬಿದ್ದಾರೆ. ಜಾತ್ಯಾತೀತ ಶಕ್ತಿಗಳು ಸರಿಯಾದ ಸಮಯದಲ್ಲಿ ಒಗ್ಗೂಡದಿದ್ದ ಕಾರಣ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ದೇವೇಗೌಡರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಪ್ರ: ದಶಕದ ನಂತರ ನೀವು ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡಿದಿರಿ. ಈ ಪರಿವರ್ತನೆ ನಿಮಗೆ ಹೇಗೆ ಅನ್ನಿಸಿತು?
ಎಚ್.ಡಿ ದೇವೇಗೌಡ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಪ್ರಚಾರ ನಡೆಸುವುದು ಮುಖ್ಯವಲ್ಲ, ಜಾತ್ಯಾತೀತ ಶಕ್ತಿಗಳು ಒಗ್ಗೂಡಿ ಮೂಲಭೂತವಾದಿಗಳನ್ನು ಅಧಿಕಾರದಿಂದ ದೂರ ಇಡುವುದೇ ನಮ್ಮ ಧ್ಯೇಯ. ಅದೇ ಇವತ್ತಿಗೆ ನಮ್ಮ ಪ್ರಮುಖ ಉದ್ದೇಶ, ಉಗ್ರಪ್ಪ, ದೇವೇಗೌಡ, ಶಿವಕುಮಾರ್ ಯಾರೇ ಆಗಲಿ ನಮಗೆ ರಾಜ್ಯ ಮಾತ್ರ ಮುಖ್ಯ, ಜಾತ್ಯಾತೀತ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಇಲ್ಲಿ ಮಹತ್ವ ಪಡೆಯುವುದಿಲ್ಲ, ದೇಶ ಶಾಂತಿಯುತವಾಗಿ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು.

 ಪ್ರ: ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರ ದೇಶದ ಇತರೆ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳಿಗೆ ಮಾದರಿಯೇ?
ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಘರ್ಷಣೆ ಭಿನ್ನಾಭಿಪ್ರಾಯಗಳಿರುಬಹುದು, ಆದರೆ ಸೀಟು ಹಂಚಿಕೆ ಎಲ್ಲಾ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ಬರಲಾಗದು, ಆದರೆ ಚುನಾವಣೆ ನಂತರ ಜಾತ್ಯಾತೀತ ನಾಯಕರುಗಳಲ್ಲಿ ಯಾವುದೇ ರೀತಿಯ ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದರೂ ಎಲ್ಲವನ್ನು ಮರೆತು ಒಂದಾಗಲು ನಿರ್ಧರಿಸಿದ್ದು ಒಮ್ಮತದ ಪ್ರಧಾನ ಮಂತ್ರಿಯನ್ನು ಆರಿಸುತ್ತೇವೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಯಾರಿಗೆ ಹೆಚ್ಚು ಲಾಭ?
ಹೌದು ನಮ್ಮಲ್ಲಿ ಘರ್ಷಣೆ, ಅಸಮಾಧಾನ ಇದೆ, ಹಲವು ವರ್ಷಗಳಿಂದ ನಾವು ಪರಸ್ಪರ ಹೋರಾಟ ಮಾಡುತ್ತಿದ್ದೇವೆ, ಆದರೆ ಕೆಲ ತಿಂಗಳುಗಳ ಹಿಂದೆ ನಾಯಕತ್ವ ಮಟ್ಟದಲ್ಲಿ ಬದಲಾವಣೆಯಾಗಿ ಒಂದಾಗಿದ್ದೇವೆ, ಆದರೆ ಕಾರ್ಯಕರ್ತರ ಮಟ್ಟದಲ್ಲಿ ಇನ್ನೂ ಕೆಲ ಅಸಮಾಧಾನ ಘರ್ಷಣೆ ಮುಂದುವರಿದಿದೆ, ಆದರೆ 2019ರ ಲೋಕಸಭೆ ಚುನಾವಣೆ ಸಮಯಕ್ಕೆ ಈ ಎಲ್ಲಾ ಅಸಮಾಧಾನ ಭಿನ್ನಾಭಿಪ್ರಾಯ ಮರೆಯಾಗಿ ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ.

ಪ್ರ: ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ತನ್ನನ್ನು ತಾನು ಬಲಪಡಿಸಿಕೊಳ್ಳುತ್ತಿದೆಯೇ?
ಜೆಡಿಎಸ್ ಅಥವಾ ಕಾಂಗ್ರೆಸ್ ಬಲಗೊಳ್ಳುವ ವಿಷಯ ಅಲ್ಲ, 18 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವಿಲ್ಲ, ಪ್ರಾಮಾಣಿಕವಾಗಿ ಯೋಚಿಸಿ, ನೈಜ ವಾಸ್ತವದ ಬಗ್ಗೆ ಮಾತನಾಡಬೇಕು, ಅದರ ಅರ್ಥ 18 ರಾಜ್ಯಗಳು ಜಾತ್ಯಾತೀತ ನಾಯಕರನ್ನು ಹೊಂದಿವೆ ಎಂಬುದು ಇದರ ಅರ್ಥವಲ್ಲ, ಪ್ರತಿಯೊಂದು ರಾಜ್ಯದಲ್ಲೂ ಚಂದ್ರಬಾಬು ನಾಯ್ಡು ಅವರಂಥ ಪ್ರಾದೇಶಿಕ ಪಕ್ಷದ ನಾಯಕರಿದ್ದಾರೆ. ಎಲ್ಲಾ ಜಾತ್ಯಾತೀತ ನಾಯಕರು ಸಮಯಕ್ಕೆ ಸರಿಯಾಗಿ ಒಗ್ಗೂಡದ ಕಾರಣ ಮೋದಿ ಅವರಂತವರು ಪ್ರಧಾನ ಮಂತ್ರಿಯಾದರು. ನಾನು ಅವರನ್ನೆಲ್ಲಾ ಒಟ್ಟಿಗೆ ಕರೆತರಲು ಪ್ರಯತ್ನಿಸಿದೆ, ಆದರೆ ಕೆಲವು ನಾಯಕರು ಸಹಕಾರ ನೀಡಲಿಲ್ಲ, ಅವರೆಲ್ಲಾ ನನ್ನ ಸಲಹೆ ಪಡೆದಿದ್ದರೇ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು. ತೃತೀಯ ರಂಗದಿಂದ ಥರ್ಡ್ ಕ್ಲಾಸ್ ಅಭಿವೃದ್ಧಿ ಎಂದು ಮೋದಿ ಹೇಳಿದ್ದರು, ಅವರು ಹೇಳಿಕೆ ನೀಡಿದ ದಿನವೇ ಎಲ್ಲಾ ಪ್ರಾದೇಶಿಕ ಪಕ್ಷಗಳ ಮುಖಂಡರ ಜೊತೆ ನನ್ನ ಮನೆಯಲ್ಲಿ ಸಭೆ ನಡೆಸಿದೆ,

ಪ್ರ: ತೃತೀಯ ರಂಗದ ಪ್ರಧಾನ ಮಂತ್ರಿಯಾಗಿ ಯಾರು ಆಯ್ಕೆಯಾಗಲಿದ್ದಾರೆ? ಪ್ರಾದೇಶಿಕ ಪಕ್ಷದ ನಾಯಕರ ಹೆಸರು ಅಥವಾ ರಾಹುಲ್ ಗಾಂಧಿ ಹೆಸರನ್ನು ಶಿಫಾರಸು ಮಾಡುವಿರಾ?ಕಾಂಗ್ರೆಸ್ ಬಿಟ್ಟು ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ, ಹಾಗೆಯೇ ಕಾಂಗ್ರೆಸ್ ಜೊತೆಗಿದ್ದು ಸೂಕ್ತ ಅಭ್ಯರ್ಥಿಯನ್ನು ಆರಿಸಿಲು ನಿರ್ಧಾರ ತೆಗೆದುಕೊಳ್ಳಲಿದ್ದಾರೆ, ಕರ್ನಾಟಕದ ಮಟ್ಟಿಗೆ ಹೇಳುವುದಾದರೇ ನಾನು ಕಾಂಗ್ರೆಸ್ ಜೊತೆಗಿದ್ದೇನೆ, ಹೀಗಾಗಿ ಸ್ವಾಭಾವಿಕವಾಗಿಯೇ ನಾನು ರಾಹುಲ್ ಗಾಂಧಿ ಭವಿಷ್ಯದ ಪ್ರದಾನಮಂತ್ರಿಯಾಗಲು ಬೆಂಬಲ ನೀಡುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com