'ಆಯುಷ್ಮಾನ್ ಭಾರತ್ ಯೋಜನೆ' ಜೊತೆ 'ಆರೋಗ್ಯ ಕರ್ನಾಟಕ' ವಿಲೀನ?

ಆಯುಷ್ಮಾನ್ ಭಾರತ್ ಎಂಬ ಕೇಂದ್ರ ಸರ್ಕಾರದ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಯುಷ್ಮಾನ್ ಭಾರತ್ ಎಂಬ ಕೇಂದ್ರ ಸರ್ಕಾರದ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಕೇಂದ್ರ ಕರ್ನಾಟಕ ಸರ್ಕಾರ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಲ್ಲಿದೆ ಎಂದು ಆಯುಷ್ಮಾನ್ ಭಾರತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಹೇಳಿದ್ದಾರೆ.

ಸಿಇಒ ಇಂದು ಭೂಷನ್ ಪ್ರಕಾರ, ಆರೋಗ್ಯ ಕರ್ನಾಟಕ ಯೋಜನೆಯಡಿ ಆಯುಷ್ಮಾನ್ ಭಾರತ್ ಯೋಜನೆಯನ್ನು ತಂದು ಅವೆರಡನ್ನೂ ಹೊಂದಾಣಿಕೆ ಮಾಡಿ ಆರೋಗ್ಯ ಕರ್ನಾಟಕ ಮ್ತತು ಆಯುಷ್ಮಾನ್ ಭಾರತ್ ನಲ್ಲಿ ಯಾವುದರ ಅಡಿ ಆಸ್ಪತ್ರೆ ವೆಚ್ಚ ಕಡಿಮೆಯಾಗುತ್ತದೆಯೋ ಅದರಡಿ ನೀಡಬಹುದಾಗಿದೆ ಎಂದು ಹೇಳಿದರು.

ಸೆಪ್ಟೆಂಬರ್ 6 ಅಥವಾ 7ರಂದು ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಮಾಡುವ ನಿರೀಕ್ಷೆಯಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ಸುಮಾರು 360 ಕೋಟಿ ರೂಪಾಯಿ ನೀಡುತ್ತಿದೆ. ರಾಜ್ಯ ಸರ್ಕಾರ ಸುಮಾರು 760 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು ಆರೋಗ್ಯ ಕರ್ನಾಟಕ ಯೋಜನೆ ರಾಜ್ಯದ 1.43 ಕೋಟಿ ಕುಟುಂಬಗಳನ್ನು ಒಳಗೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com