ಬಿಡದಿ ಸಮೀಪ 60 ಅಪಾರ್ಟ್ ಮೆಂಟ್ ಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೊಟೀಸ್

ಚರಂಡಿ ನೀರನ್ನು ಭೈರಮಂಗಳ ಕೆರೆಗೆ ಬಿಟ್ಟ ಬಿಡದಿ ಸಮೀಪದ ಸುಮಾರು 60ಕ್ಕೂ ಹೆಚ್ಚು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚರಂಡಿ ನೀರನ್ನು ಭೈರಮಂಗಳ ಕೆರೆಗೆ ಬಿಟ್ಟ ಬಿಡದಿ ಸಮೀಪದ ಸುಮಾರು 60ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೊಟೀಸ್ ಜಾರಿ ಮಾಡಿದೆ.

'ಬೆಂಗಳೂರು ತೀರಾ ಕೆಟ್ಟದ್ದು' ಎಂದು ಕಳೆದ ಆಗಸ್ಟ್ 23ರಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸರಣಿ ವರದಿಗಳನ್ನು ಪ್ರಕಟ ಮಾಡಿತ್ತು. ಬೆಂಗಳೂರಿನ ಕೊಳಕು ಮತ್ತು ವಿಷ ತ್ಯಾಜ್ಯ ಬಿಡದಿ ಕೆರೆಗೆ ಬಿಟ್ಟು ಅಲ್ಲಿನ ನೀರಿನ ರುಚಿ ಹಾಳಾಗಿ ಹೋಗಿದೆ ಎಂದು ಪ್ರಕಟಿಸಿತ್ತು. ಅಲ್ಲದೆ ರಾಮನಗರ ಜಿಲ್ಲೆಯ ಬಿಡದಿಯ ಬೈರಮಂಗಲ ಕೆರೆಯಲ್ಲಿ ನೊರೆ ತೇಲುತ್ತಿರುವುದರ ಕುರಿತು ವರದಿಯಲ್ಲಿ ವಿವರವಾಗಿ ಹೇಳಲಾಗಿತ್ತು.

ವೃಷಭಾವತಿ ನದಿ ಮೂಲಕ ಬೆಂಗಳೂರು ನಗರದ ತ್ಯಾಜ್ಯ ಮತ್ತು ವಿಷ ಕೆರೆಗೆ ಹೋಗುತ್ತದೆ ಇದರಿಂದ ಈ ನೀರನ್ನು ಮೀನು, ಹಣ್ಣು, ತರಕಾರಿಗಳಿಗೆ ಬಳಸುವ ರೈತರಿಗೆ ಆರೋಗ್ಯ ಸಮಸ್ಯೆಯಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಬೈರಮಂಗಲ ಕೆರೆಯ ಚಿಂತಾಜನಕ ಸ್ಥಿತಿಯನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿದ ನಂತರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತ್ಯಾಜ್ಯ ನಿರ್ವಹಣೆ ಘಟಕವನ್ನು ಸ್ಥಾಪಿಸಲು ವಿಸ್ತ್ರೃತ ವರದಿ ತಯಾರಿಸುವಂತೆ ರಾಮನಗರ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.

ಇದೀಗ ಕೆರೆಯನ್ನು ರಕ್ಷಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತೊಂದು ಕ್ರಮ ಕೈಗೊಂಡಿದೆ. ಈ ಬಗ್ಗೆ ತಿಳಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ, ಬಿಡದಿ ಸುತ್ತಮುತ್ತ ಸುಮಾರು 60 ಅಪಾರ್ಟ್ ಮೆಂಟ್ ಗಳಿಗೆ ಎಚ್ಚರಿಕೆ ನೀಡಿದ್ದೇವೆ. ಈ ಅಪಾರ್ಟ್ ಮೆಂಟ್ ಗಳಿಂದ ಕಲುಷಿತ ನೀರು ಭೈರಮಂಗಳ ಕೆರೆಗೆ ಹೋಗುತ್ತದೆ, ಮಾರ್ಗಸೂಚಿ ಪ್ರಕಾರ, ಈ ಅಪಾರ್ಟ್ ಮೆಂಟ್ ಗಳಲ್ಲಿ ಸ್ವಂತ ತ್ಯಾಜ್ಯ ನಿರ್ವಹಣಾ ಘಟಕವಿರಬೇಕು(ಎಸ್ ಟಿಪಿ). 15 ದಿನಗಳೊಳಗೆ ಎಸ್ ಟಿಪಿ ಸ್ಥಾಪಿಸುವ ಕುರಿತು ದಾಖಲೆಯಲ್ಲಿ ಬರೆದುಕೊಟ್ಟು ಮುಂದಿನ ಮೂರರಿಂದ 6 ತಿಂಗಳೊಳಗೆ ಸ್ಥಾಪಿಸಬೇಕು. ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸದಿದ್ದರೆ ಬೆಸ್ಕಾಂ ಮತ್ತು ಬಿಡಬ್ಲ್ಯುಎಸ್ಎಸ್ ಬಿಗೆ ನೀರು ಮತ್ತು ವಿದ್ಯುತ್ ಪೂರೈಕೆ ನಿಲ್ಲಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com