ದೇವೇಗೌಡ
ರಾಜ್ಯ
ಮುಂದುವರಿದ ದೈವಿಕ ಯಾತ್ರೆ: ಕಠ್ಮಂಡುವಿನ ಪಶುಪತಿನಾಥನ ಸನ್ನಿದಿಗೆ ದೇವೇಗೌಡರ ಕುಟುಂಬ!
: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಪಶುಪತಿನಾಥ ಮಂದಿರಕ್ಕೆ ತೆರಳಲು ಸಿದ್ಧರಾಗಿದ್ದಾರೆ. ದೇವೇಗೌಡರು ಗುರುವಾರ ಸಂಜೆ ನವದೆಹಲಿಯಿಂದ ನೇಪಾಳ ರಾಜಧಾನಿ ...
ಬೆಂಗಳೂರು: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಪಶುಪತಿನಾಥ ಮಂದಿರಕ್ಕೆ ತೆರಳಲು ಸಿದ್ಧರಾಗಿದ್ದಾರೆ. ದೇವೇಗೌಡರು ಗುರುವಾರ ಸಂಜೆ ನವದೆಹಲಿಯಿಂದ ನೇಪಾಳ ರಾಜಧಾನಿ ಕಟ್ಮಂಡುವಿಗೆ ತೆರಳಲಿದ್ದು ಶುಕ್ರವಾರ ಪಶುಪತಿನಾಥ ಮಂದಿರಕ್ಕೆ ತೆರಳಲಿದ್ದಾರೆ.
ದೆಹಲಿಯ ಜ್ಯೋತಿಷಿಯೊಬ್ಬರು ಪಶುಪತಿನಾಥನ ದರ್ಶನ ಪಡೆಯುವಂತೆ ಸಲಹೆ ನೀಡಿದ್ದರಿಂದ ದೇವೇಗೌಡರು ನೇಪಾಳಕ್ಕೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇವರ ದರ್ಶನದ ಬಳಿಕ ಪ್ರಧಾನಿ ಶನಿವಾರ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಪಾರ ದೈವಭಕ್ತರಾಗಿರುವ ದೇವೇಗೌಡರು ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಹೋಮ ಹವನ ನಡೆಸಿರುವುದಲ್ಲದೇ ಅವರ ಪುತ್ರ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಆಂಧ್ರಪ್ರದೇಶದ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನವನ್ನು ಪಡೆದಿದ್ದಾರೆ
ಇತ್ತೀಚೆಗಷ್ಟೆ ಕೇದಾರನಾಥ ದೇವಾಲಯಕ್ಕೆ ತೆರಳುವಂತೆ ನಿರ್ಧರಿಸಿದ್ದರು ಆದರೆ ಮಳೆಯಿಂದಾಗಿ ಮುಂದೂಡಿದ್ದರು.

