ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಕೈಬಿಡಿ: ಪರಿಸರ ತಜ್ಞರು, ವನ್ಯಜೀವಿ ಕಾರ್ಯಕರ್ತರ ಒತ್ತಾಯ

ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ (ಎನ್ಬಿಡಬ್ಲ್ಯೂಎಲ್) ನ ಮುಂದೆ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ರಚನೆ ಕುರಿತ ಪರಿಶೀಲನೆ ಅರ್ಜಿ ಇರುವಾಗಲೇ ವನ್ಯಜೀವಿ ರಕ್ಷಣಾ ಕಾರ್ಯಕರ್ತರು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು:  ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ (ಎನ್ಬಿಡಬ್ಲ್ಯೂಎಲ್) ನ ಮುಂದೆ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ರಚನೆ ಕುರಿತ ಪರಿಶೀಲನೆ ಅರ್ಜಿ ಇರುವಾಗಲೇ ವನ್ಯಜೀವಿ ರಕ್ಷಣಾ ಕಾರ್ಯಕರ್ತರು, ಮತ್ತು ತಜ್ಞರು ರೈಲ್ವೆ ಮಾರ್ಗದ ಪ್ರಸ್ತಾವನೆಯನ್ನು ಕೈಬಿಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆಮನವಿ ಮಾಡಿದ್ದಾರೆ.
ಅರಣ್ಯನಾಶ, ಅಕ್ರಮ ಮರಳು ಗಣಿಗಾರಿಕೆ, ಅತಿಯಾದ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳ ಹೆಚ್ಚಳದ ಪ್ರಮುಖ ಕಾರಣಗಳಿಂದಾಗಿ ಕೊಡಗು ಮತ್ತು ಕೇರಳದಲ್ಲಿ ಇತ್ತೀಚೆಗೆ ಪ್ರಕೃತಿ ವಿಕೋಪಗಳು ಸಂಭವಿಸಿದೆ.ಎಂದು ತಜ್ಞರು ಮತ್ತು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲ್ವೆ ಮಾರ್ಗವನ್ನು ಅಂಗೀಕರಿಸಿದರೆ, ಅದು ಮುಂಬರುವ ವರ್ಷಗಳಲ್ಲಿ ಶಾಶ್ವತ ಪರಿಸರ ಹಾನಿಗೆ ಕಾರಣವಾಗಲಿದ್ದು ಇದು ಪರಿಸರ ಹಾಗೂ ಸಮಾಜದ ಮೇಲೆ ಹಾನಿಕಾರಕ ಪರಿಣಾಮ ಉಂಟು ಮಾಡಲಿದೆ.ಎಂದು ಅವರು ಹೇಳಿದರು.
168.28 ಕಿ.ಮೀ. ರೈಲು ಯೋಜನೆ ಯೋಜನೆಯು ಮೂಲತಃ ಕಾರವಾರ,ಯಲ್ಲಾಪುರ,  ಮತ್ತು ಧಾರವಾಡ ಅರಣ್ಯ ವಿಭಾಗಗಳಲ್ಲಿನ 595.64 ಹೆಕ್ಟೇರ್  ಅರಣ್ಯ ಪ್ರದೇಶಗಳನ್ನು ಎರಡು ಲಕ್ಷಕ್ಕೂ ಹೆಚ್ಚುಸ್ಥಳೀಯ ವಿಶೇಷ ಮತ್ತು ಅಪರೂಪದ ಮರಗಳ ನಾಶಕ್ಕೆ ಕಾರಣವಾಗಲಿದೆ.ಇದಲ್ಲದೆ, ಮೂರು ಆನೆ ಕಾರಿಡಾರ್ ಗಳು, ಹುಲಿ ಸಂರಕ್ಷಣೆ ಮೀಸಲು ಅರಣ್ಯ, ವನ್ಯಜೀವಿ ಅಭಯಾರಣ್ಯವನ್ನು ಒಳಗೊಂಡಿರುವ ಪಶ್ಚಿಮ ಘಟ್ಟಗಳ ದಟ್ಟವಾದ ಕಾಡಿನ ಪ್ರದೇಶದಲ್ಲಿ ಈ ರೈಲ್ವೆ ಮಾರ್ಗ ಹಾದು ಹೋಗಲಿದೆ.
ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ  ಗಿರಿಧರ್ ಕುಲಕರ್ಣಿ ಅವರು, "ಈ ಯೋಜನೆಯು ಭೂ ಬಳಕೆಯಿಂದ ಮರಗಳು / ಕಾಡುಗಳ ನಷ್ಟ, ಕಾಡು ಪ್ರಾಣಿಗಳ ಆವಾಸಸ್ಥಾನದ ನಷ್ಟವಾಗುವ ಅಪಾಯವಿದೆ.ಈ ಯೋಜನೆ ಜೀವವೈವಿಧ್ಯ ಪ್ರದೇಶವಾದ ಪಶ್ಚಿಮ ಘಟ್ಟಗಳ ಪಾಲಿಗೆ ಮಾರಕವಾಗಿದೆ ಎಂದು  ಮೌಲ್ಯಮಾಪನ ವರದಿ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಇದರಿಂದ ಭೂಕುಸಿತ, ಮಣ್ಣು ಕುಸಿತವಾಗಲಿದೆ, , ಮರದ ಕಳ್ಳಸಾಗಣೆ ಮತ್ತು ಅರಣ್ಯ ಸರಕುಗಳು, ಮತ್ತು ಭೂಮಿ ಮತ್ತು ನೀರನ್ನು ಮಾಲಿನ್ಯಗೊಳಿಸಲು ಇದು ಕಾರಣವಾಗಲಿದೆ" ಎಂದಿದ್ದಾರೆ
ಸದ್ಯ ಇದನ್ನು ಕಾನೂನು ಸಮಸ್ಯೆ ಕುರಿತ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಯೋಜನೆ ಸಂಬಂಧ ಕರ್ನಾಟಕ ಸ್ಟೇಟ್ ಬೋರ್ಡ್ ಫಾರ್ ವೈಲ್ಡ್ ಲೈಫ್ ಇದುವರೆಗೆ ಯಾವುದೇ ಅನುಮೋದನೆ ನಿಡಿಲ್ಲ.ಅಸ್ತಿತ್ವದಲ್ಲಿರುವ ನಿಯಮಗಳು / ಮಾರ್ಗಸೂಚಿಗಳ ಪ್ರಕಾರ, ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು, ಸಂರಕ್ಷಿತ ಮೀಸಲು ಅಥವಾ ಅಂತಹಾ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸಲು ಸಂಬಂಧಿತ ಸಚಿವಾಲಯದ ಒಪ್ಪಿಗೆ ಅಗತ್ಯವಾಗಿದೆ. ಎನ್ಬಿಡಬ್ಲ್ಯೂಎಲ್ ನ ಮುಂದೆ ನಿಂತಿರುವ ಸಮಿತಿ ಅಂತಹ ಎಲ್ಲಾ ಪ್ರಸ್ತಾಪಗಳಿಗೆ ರಾಜ್ಯ ಒಪ್ಪಿಗೆ ಸೂಚಿಸಬೇಕೆಂದು ಒತ್ತಾಯಿಸಿದೆ.
ಆದರೆ ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ (ಲಾಫಾರ್ಜ್ ತೀರ್ಪು ಉಲ್ಲೇಖಿಸಿ)ಇಂತಹಾ ಅನುಮೋದನೆಗಳಿಗೆ ಉತ್ತೇಜನ ನಿಡುವಂತಿಲ್ಲ.ಹೀಗಾಗಿ ಎನ್ಬಿಡಬ್ಲ್ಯೂಎಲ್ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಬಾರದು ಎಂದು  ಕುಲಕರ್ಣಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com