ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್ ಪಾಸ್! ಕೆಐಎನಲ್ಲಿ ಜಾರಿಯಾಗಲಿದೆ ನೂತನ ಬಯೋಮೆಟ್ರಿಕ್ ಯೋಜನೆ

ಮುಂಬರುವ ವರ್ಷದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಲ್ಲಿ ವಿಮಾನ ಏರುವವರುನಿಮ್ಮ ಬೋರ್ಡಿಂಗ್ ಪಾಸ್, ಪಾಸ್ ಪೋರ್ಟ್....
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ಮುಂಬರುವ ವರ್ಷದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಲ್ಲಿ ವಿಮಾನ ಏರುವವರು ನಿಮ್ಮ ಬೋರ್ಡಿಂಗ್ ಪಾಸ್, ಪಾಸ್ ಪೋರ್ಟ್ ಅಥವಾ ಇತರೆ ವೈಯುಕ್ತಿಕ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿಲ್ಲ.
ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಕ್ಯಾನ್ ಮಾಡಲಾದ ನಿಮ್ಮ ಮುಖವನ್ನೇ ನಿಮ್ಮ ಬೋರ್ಡಿಂಗ್ ಪಾಸ್ ಆಗಿ ಮಾಡುವ ವಿನೂತನ ಯೋಜನೆಯನ್ನು ಕೆಐಎ ನಲ್ಲಿ ಪರಿಚಯಿಸಲಾಗುತ್ತಿದೆ. ವಿಮಾನನಿಲ್ದಾಣದ ಮೂಲಕ ತಡೆರಹಿತ ಪ್ರಯಾಣವನ್ನು ಸುಲಭಗೊಳಿಸಲು ಈ ಯೋಜನೆ ಜಾರಿಯಾಗುತ್ತಿದ್ದು  ಸ್ಪೈಸ್ ಜೆಟ್, ಜೆಟ್ ಏರ್ವೇಸ್ ಮತ್ತು ಏರ್ ಏಷ್ಯಾ ವಿಮಾನದ ದೇಶೀಯ ಪ್ರಯಾಣಿಕರು ಪ್ರಾರಂಬದಲ್ಲಿ ಇದರ ಪ್ರಯೋಜನ ಹೊಂದಲಿದ್ದಾರೆ.
ಬೆಂಗಳೂರು ಇಂಟರ್ ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ನ ಸಿಇಒ ಹರಿ ಮರಾರ್ ಹಾಗು ಕೆಐಎಕಾರ್ಯನಿರ್ವಾಹಕ ಸಿಇಒ, ವಿಷನ್ ಬಾಕ್ಸ್ ನ ಸಿಇಒ ಮಿಗುಯೆಲ್ ಲಿಟ್ಮನ್  ನಡುವೆ ಗುರುವಾರ ಏರ್ಪಟ್ಟ ಒಪ್ಪಂದದಂತೆ ಎಲೆಕ್ಟ್ರಾನಿಕ್ ಐಡೆಂಟಿಟಿ ಸಿಸ್ಟಮ್ ಜಾರಿಗೆ ಬರಲಿದೆ.  ಪೋರ್ಚುಗೀಸ್ ಪ್ರಧಾನಿ ಆಂಟೋನಿಯೋ ಕೋಸ್ಟಾ ಮತ್ತು ಪೋರ್ಚುಗಲ್ ನ ಭಾರತೀಯ ರಾಯಭಾರಿ  ನಂದಿನಿ ಸಿಂಘಲಾ ಈ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಉಪಸ್ಥಿತರಿದ್ದರು.
"ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿ;ಲ್ದಾಣವು ಕಾಗದ ರಹಿತ ವಿಮಾನ ಯಾನ ಸೇವೆ ಹೊಂದುವ ದೇಶದ ಮೊದಲ ನಿಲ್ದಾಣವಾಗಲಿದೆ" ಪ್ರಕಟಣೆ ಹೇಳಿದೆ.
ಈ ಯೋಜನೆಯನ್ನು ಕೇಂದ್ರದ  ಡಿಜಿ ಯಾತ್ರಾ ಯೋಜನೆಯಲ್ಲಿ ಅಳವಡಿಸಲಾಗುವುದು  "ನಿಮ್ಮ ಮುಖವು ನಿಮ್ಮ ಬೋರ್ಡಿಂಗ್ ಪಾಸ್ ಆಗಿದೆ" ಎಂದು ಮರಾರ್ ಹೇಳುತ್ತಾರೆ."ವಿಷನ್ ಬಾಕ್ಸ್ ನ ಬಯೋಮೆಟ್ರಿಕ್ ತಂತ್ರಜ್ಞಾನವು ಪ್ರಯಾಣಿಕರು ಸರತಿಯಲ್ಲಿ ಗಂಟೆಗಳ ಕಾಲ ಕಾಯುವ ಪರಿಪಾಟಲನ್ನು ತಪ್ಪಿಸಲಿದೆ.
ಪ್ರಯಾಣಿಕರವರು ಏವಿಯೇಷನ್ ​​ಸಚಿವಾಲಯವು ನಡೆಸುತ್ತಿರುವ ಡಿಜಿ ಯಾತ್ರೆ ಪೋರ್ಟಲ್ ಪ್ರವೇಶಿಸಲು ಆಧಾರ್ ಮತ್ತು ಕೆಲವು ಇತರ ಸರ್ಕಾರಿ ಗುರುತಿನ ದಾಖಲೆಗಳನ್ನು ಒದಗಿಸಬೇಕು ಎಂದು ಬಿಎಎಎಲ್ ವಕ್ತಾರರು ಹೇಳಿದ್ದಾರೆ.ಪ್ರಯಾಣಿಕರ ಬಯೋಮೆಟ್ರಿಕ್ ಗೆ  ಲಿಂಕ್ ಮಾಡಲಾಗುವ ವಿಶಿಷ್ಟ ಐಡಿಯನ್ನು ರಚಿಸಲಾಗುವುದು, ಒಮ್ಮೆ ವಿಮಾನದ ಬುಕ್ಕಿಂಗ್ ಮಾಡಿದಾಗ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಖರೀದಿಸಲು ಈ ಐಡಿಯನ್ನು ಬಳಸಿಕೊಳ್ಳಬೇಕು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಪ್ರವೇಶಿಸುವಾಗಲೇ ಬಯೋಮೆಟ್ರಿಕ್  ಸ್ಕ್ಯಾನಿಂಗ್ ಯಂತ್ರವು ಅವನ/ಅವಳ ಮುಖವನ್ನು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡುತ್ತದೆ.ಅಲ್ಲದೆ ಯಾವುದೇ ಅಡೆತಡೆ ಇಲದೆ ಹೊದರೆ ನಿಲ್ದಾಣದ ಒಳ ಪ್ರವೇಶಿಸಲು ಅನುಮತಿ ಸಿಕ್ಕುತ್ತದೆ.ಒಬ್ಬರು ಒಮ್ಮೆ ಮಾತ್ರ ಐಡಿ ಸಂಖ್ಯೆ ಪಡೆಯಬೇಕಿದೆ.ಅದೇ ಐಡಿ ಸಂಖ್ಯೆಯಲ್ಲಿ ಪ್ರತಿ ಬಾರಿಯೂ ಪ್ರಯಾಣಿಸಲು ಅನುಕೂಲವಿದೆ ಎಂದು ವಕ್ತಾರರು ಹೇಳಿದ್ದಾರೆ.
ಆರಂಭದಲ್ಲಿ, ದೇಶೀಯ ಪ್ರಯಾಣಿಕರಿಗೆ ಮಾತ್ರ ಈ ತಂತ್ರಜ್ಞಾನದಿಂದ ಪ್ರಯೋಜನವಾಗಬಹುದು ಆದರೆ ವಲಸೆ ಇಲಾಖೆಯು ಅನುಮತಿಸಿದ ಬಳಿಕ ಅದನ್ನು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಹ ವಿಸ್ತರಿಸಲಾಗುತ್ತದೆ.
ನಿಖರವಾಗಿ ಅದು ಕಾರ್ಯರೂಪಕ್ಕೆ ಬರುವ ದುಇನವನ್ನು ನಾವೀಗಲೇ ಹೇಳಲು ಸಾಧ್ಯವಿಲ್ಲ.ಪ್ರಕ್ರಿಯೆ ಚಾಲನೆಯಲ್ಲಿದೆ.ಇದು 2019 ರ ಮೊದಲ ತ್ರೈಮಾಸಿಕದಲ್ಲಿ ಯಾವುದೇ ಸಮಯದಲ್ಲಿ ಚಾಲನೆಗೊಳ್ಳಬಹುದು.ತಂತ್ರಜ್ಞಾನ  ಕಾರ್ಯಾಚರಣೆ ಪ್ರಾರಂಬವಾಗುವವರೆಗೆ ಡಿಜಿಟಲ್ ಪ್ರಕ್ರಿಯೆಯ ಮೂಲಕ ಹೋಗಲು ಇಷ್ಟವಿಲ್ಲದ ಪ್ರಯಾಣಿಕರು  ನಿಯಮಿತ ಸೆಕ್ಯುರಿಟಿ ಕ್ಲಿಯರೆನ್ಸ್ ಚೆಕ್ ಅನ್ನು ಕೈಗೊಳ್ಳಬೇಕಾಗುವುದು. ಇನ್ನು ಪೋರ್ಟಲ್ ನಲ್ಲಿ ನೊಂದಣಿಯನ್ನು ಯಾರೂ ಎಲ್ಲಿಂದಲೂ ಮಾಡಿಕೊಳ್ಳಲು ಸಾಧ್ಯ.ಬಿಐಎ ಎಲ್ ತನ್ನ ಐದು ಕೌಂಟರ್ ಗಳ ಮೂಲಕ ಈ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com