ಕಾಡುತ್ತಿರುವ ಶಿರಾಡಿ ಘಾಟ್ ಪ್ರಯಾಣ ಪ್ರಯಾಣಿಕರಿಗೆ ದುಃಸ್ವಪ್ನ

ಬೆಂಗಳೂರು-ಮಗಳೂರು ನಡುವೆ ಶಿರಾಡಿ ಘಾಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಪ್ರಯಾಣ ಜನರಿಗೆ ...
ಶಿರಾಡಿ ಘಾಟ್ ನ ಹಾಸನ ಭಾಗದಲ್ಲಿ ತಾತ್ಕಾಲಿಕ ತಡೆಗೋಡೆ
ಶಿರಾಡಿ ಘಾಟ್ ನ ಹಾಸನ ಭಾಗದಲ್ಲಿ ತಾತ್ಕಾಲಿಕ ತಡೆಗೋಡೆ

ಹಾಸನ: ಬೆಂಗಳೂರು-ಮಗಳೂರು ನಡುವೆ ಶಿರಾಡಿ ಘಾಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಪ್ರಯಾಣ ಜನರಿಗೆ ದುಸ್ವಪ್ನದಂತೆ ಕಾಡುತ್ತಿದೆ. ಭೂ ಕುಸಿತಕ್ಕೆ ಒಳಗಾಗಿ ಹಾನಿಗೀಡಾದ ಆಳದ ತಿರುವಿನಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಕ್ಷಣಾ ಗೋಡೆ ಪಕ್ಕ ಯಾವ ಕ್ಷಣದಲ್ಲಿಯಾದರೂ ಅಪಘಾತವಾಗುವ ಸಾಧ್ಯತೆಯಿದೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆಯು(ಎನ್ಎಚ್ ಎಐ) ಭೂ ಕುಸಿತವಾದ ಕಡೆಗಳಲ್ಲಿ ಶಾಶ್ವತ ರಕ್ಷಣಾ ಗೋಡೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಕುತೂಹಲಕರ ಸಂಗತಿಯೆಂದರೆ ಜಿಲ್ಲಾಡಳಿತ ಕಳೆದ ಗುರುವಾರ ಆದೇಶ ಹೊರಡಿಸಿ ಲಘು ವಾಹನ ಸಂಚರಿಸಲು ಮಾತ್ರ ಅನುಮತಿ ನೀಡಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಗಳು ಮತ್ತು ಪೊಲೀಸರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿದೆ. ಭಾರೀ ವಾಹನಗಳು ಸಂಚರಿಸದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸುವಂತೆ ಮತ್ತು ಎನ್ಎಚ್ಎಐ ಸಿಬ್ಬಂದಿ ನೇಮಿಸುವಂತೆ ಸೂಚಿಸಲಾಗಿದೆ.

ಭೂ ಕುಸಿತವುಂಟಾದ ತಾತ್ಕಾಲಿಕ ತಡೆಗೋಡೆಗಳನ್ನು 16 ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಚಾಲಕರಿಗೆ ಎಚ್ಚರಿಕೆ ನೀಡಲು ಲೋಹದ ಹಾಳೆಗಳನ್ನು ಉರುವಲು ಕಂಬಗಳಿಗೆ ಹೊಡೆಯಲಾಗಿದ್ದು ಮತ್ತು ತೂತುಗಳ ನಡುವೆ ಪ್ಲಾಸ್ಟಿಕ್ ಟೇಪ್ ಗಳನ್ನು ಕಟ್ಟಲಾಗಿದೆ.

ಶಿರಾಡಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜೀವ್ ಶೆಟ್ಟಿ ಅವರು ಹೇಳುವ ಪ್ರಕಾರ, ಹಾಸನ ಮತ್ತು ಮಂಗಳೂರು ಜಿಲ್ಲಾಡಳಿತ ಎನ್ಎಚ್ಎಐ ಜಿಲ್ಲಾ ಎಂಜಿನಿಯರ್ ಗಳಿಗೆ ಆದೇಶ ನೀಡಿ ಎಂಜಿನಿಯರ್ ಗಳ ಸಲಹೆಯಂತೆ ಟ್ರಾಫಿಕ್ ಆಧಾರಿತ ಮೌಖಿಕ ಸಲಹೆಗಳನ್ನು ಆರಂಭಿಸಲು ಹೇಳಿದೆ ಎನ್ನುತ್ತಾರೆ. ಇಲಾಖೆ ಶಾಶ್ವತ ಕಟ್ಟಡಗಳನ್ನು ನಿರ್ಮಿಸಿಲ್ಲ. ಶಾಶ್ವತ ರಕ್ಷಣಾ ಗೋಡೆಗಳನ್ನು ನಿರ್ಮಿಸಿದ ನಂತರ ಮತ್ತು ಸೂಚನಾ ಫಲಕಗಳನ್ನು ಹಾಕಿದ ನಂತರವೇ ವಾಹನಗಳ ಸಂಚಾರಕ್ಕೆ ಬಿಡಬೇಕಾಗಿತ್ತು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com