ಭಾಷಾ ತೊಡಕು: ಕೇಂದ್ರ ಸಚಿವರ ವಿಡಿಯೋ ಕಾನ್ಫರೆನ್ಸ್ ಸ್ಕಿಪ್ ಮಾಡಿದ ಜಿ.ಟಿ ದೇವೇಗೌಡ

ಇಂಗ್ಲೀಷ್ ಭಾಷೆಯ ತೊಡಕಿನಿಂದಾಗಿ ಉನ್ನತ ಶಿಕ್ಷಣ ಸಚಿವ ಜಿ,ಟಿ ದೇವೇಗೌಡ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಜೊತೆಗಿನ ...
ಜಿ.ಟಿ ದೇವೇಗೌಡ
ಜಿ.ಟಿ ದೇವೇಗೌಡ
ಬೆಂಗಳೂರು: ಇಂಗ್ಲೀಷ್ ಭಾಷೆಯ ತೊಡಕಿನಿಂದಾಗಿ ಉನ್ನತ ಶಿಕ್ಷಣ ಸಚಿವ ಜಿ,ಟಿ ದೇವೇಗೌಡ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಜೊತೆಗಿನ ವಿಡಿಯೋ ಸಂವಾದ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.
ವಿಡಿಯೋ ಸಂವಾದದಲ್ಲಿ ಭಾಗವಹಿಸುವ  ಮಾಹಿತಿಯನ್ನು ಎಲ್ಲ ಮಾಧ್ಯಮಗಳಿಗೂ ಉನ್ನತ ಶಿಕ್ಷಣ ಸಚಿವರ ಕಚೇರಿಯಿಂದ ಕಳುಹಿಸಲಾಗಿತ್ತು.  ವಿಕಾಸಸೌಧದ 118ರಲ್ಲಿ ವಿಡಿಯೋ ಸಂವಾದ ಏರ್ಪಡಿಸಲಾಗಿತ್ತು.
ಕರ್ನಾಟಕ ಸೇರಿ ಪ್ರಮುಖ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಜೊತೆ ವಿಡಿಯೋ ಸಂವಾದ ನಿಗದಿ ಆಗಿತ್ತು, ಅಕ್ಟೋಬರ್ 2 ಕ್ಕೆ ನಡೆಯಲಿರುವ ಮಹಾತ್ಮಗಾಂಧಿಯವರ 150ನೇ ಜನ್ಮ ದಿನಾಚರಣೆ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ನಿಗದಿಯಾಗಿತ್ತು.
ಆರಂಭದಲ್ಲಿ ವಿಡಿಯೋ ಸಂವಾದದಲ್ಲಿ ಭಾಗವಹಿಸಲು ಜಿ.ಟಿ ದೇವೇಗೌಡ ಒಪ್ಪಿದ್ದರು. ಆದರೆ ಸಚಿವರ ಆಪ್ತರೊಬ್ಬರು ಇಂಗ್ಲೀಷ್ ಸಮಸ್ಯೆ ಇರುವುದರಿಂದ ಬೇಡ ಎಂದು ಸಲಹೆ ನೀಡಿದ್ದರು. ಇದರಿಂದ ತಮ್ಮ ನಿರ್ಧಾರವನ್ನು ಬದಲಿಸಿದರು ಎಂದು ಮೂಲಗಳು ತಿಳಿಸಿವೆ.
ಇದೇ ಮೊದಲಲ್ಲಿ, ಈ ಹಿಂದೆಯೂ ಕೂಡ ವಿದೇಶಿ ವಿವಿ ನಿಯೋಗ ಅವರನ್ನು ಭೇಟಿ ಮಾಡಲು ಬಂದಾಗ ಇದೇ ರೀತಿಯಾಗಿತ್ತು, ಆ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟ್ರೊಲ್ ಗೊಳಗಾಗಿತ್ತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ ಸಿದ್ದರಾಮಯ್ಯ, ಜಿಟಿ ದೇವೇಗೌಡ ಅವರ ಆತ್ನ ವಿಶ್ವಾಸದಿಂದ ಸಂಹವನ ನಡೆಸಬೇಕುಸ ಒಂದು ವೇಳೆ ಕೇಂದ್ರ ಸಚಿವರು ಅರ್ಥಮಾಡಿಕೊಳ್ಳ ಬೇಕೆಂದರೇ ಅವರಿಗೆ ಭಾಷಾಂತರ ಮಾಡಿಕೊಳ್ಳುತ್ತಿದ್ದರು. ಈ ಸಂಬಂಧ ಹಲವು ಕಾಲ್, ಮೆಸೇಜ್ ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com