ಗೌರಿ ಲಂಕೇಶ್ ಹತ್ಯೆ: ಶಿವಸೇನಾ ಮಾಜಿ ಕಾರ್ಪೋರೇಟರ್ 12 ದಿನ ಎಸ್ಐಟಿ ವಶಕ್ಕೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ...
ಶಿವಸೇನಾ ಮಾಜಿ ಕಾರ್ಪೋರೇಟರ್
ಶಿವಸೇನಾ ಮಾಜಿ ಕಾರ್ಪೋರೇಟರ್
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಮಾಜಿ ಕಾರ್ಪೋರೇಟರ್ ಶ್ರೀಕಾಂತ್ ಪನ್ಗಾರ್ಕರ್ ನ್ನು 12 ದಿನ ಎಸ್ ಐಟಿ ವಶಕ್ಕೆ ನೀಡಲಾಗಿದೆ. 
ಗೌರಿ ಲಂಕೇಶ್ ಹತ್ಯೆಗೆ ಸಹಾಯ ಮಾಡಿದ ಆರೋಪದ ಮೇಲೆ ಶಿವಸೇನಾ ಮಾಜಿ ಕಾರ್ಪೋರೇಟರ್ ಶ್ರೀಕಾಂತ್ ಪನ್ಗಾರ್ಕರ್ ನ್ನು ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು.
ಮುಂಬೈ ಜೈಲಿನಲ್ಲಿದ್ದ ಶ್ರೀಕಾಂತ್ ನನ್ನು ಬಾಡಿ ವಾರೆಂಟ್ ಮೂಲಕ ಇಂದು ಬೆಂಗಳೂರಿಗೆ ಕರೆತಂದಿದ್ದ ಎಸ್‍ಐಟಿ ಅಧಿಕಾರಿಗಳು, ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 12 ದಿನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಇದೇ ಎಸ್‍ಐಟಿ ತಂಡ ಸುಧಾನ್ವ ಗೊಂಡೇಲ್ಕರ್ ಎಂಬಾತನನ್ನು ಬಂಧಿಸಿತ್ತು. ಆತ ನೀಡಿದ ಮಾಹಿತಿ ಆಧಾರದ ಮೇಲೆ ಶ್ರೀಕಾಂತ್ ಪಂಗರ್ಕರ್‍ನನ್ನು ಬಂಧಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಶಿವಸೇನೆಯ ಮಾಜಿ ಕಾರ್ಪೊರೇಟರ್ ಆಗಿದ್ದ ಈತ ಗೌರಿ ಲಂಕೇಶ್ ಹಾಗೂ ಸಾಹಿತಿ ಎಂ.ಎಂ.ಕಲ್ಬುರ್ಗಿ ಅವರನ್ನು ಹತ್ಯೆಗೈಯಲು ಆರೋಪಿಗಳಿಗೆ ಹಣಕಾಸು ನೀಡುವುದರ ಜೊತೆಗೆ 7.6 ಎಂಎಂ ಸ್ವದೇಶಿ ನಿರ್ಮಿತ ಪಿಸ್ತೂಲ್‍ಗಳನ್ನು ಸರಬರಾಜು ಮಾಡಿದ್ದ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com