ವಿಜ್ಞಾನಿ ಕೆ. ಚಂದ್ರಶೇಖರ್
ವಿಜ್ಞಾನಿ ಕೆ. ಚಂದ್ರಶೇಖರ್

ಬೇಹು ಪ್ರಕರಣ: ನಿರಪರಾಧಿ ಎಂಬ ತೀರ್ಪು ಬರುವ ಮುನ್ನವೇ ಕೊನೆಯುಸಿರೆಳೆದ ಇಸ್ರೋ ವಿಜ್ಞಾನಿ!

ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಸಿಕ್ಕು ಸುಮಾರು ಎರಡು ದಶಕಗಳ ಕಾಲ ಕಾನೂನು ಹೋರಾಟ ನಡೆಸಿಸಿ ’ತಾನು ನಿರಪರಾಧಿ’ ಎಂದು ನ್ಯಾಯಾಲಯ ನೀಡುವ ತೀರ್ಪಿನ.....
Published on
ಬೆಂಗಳೂರು: ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಸಿಕ್ಕು ಸುಮಾರು ಎರಡು ದಶಕಗಳ ಕಾಲ ಕಾನೂನು ಹೋರಾಟ ನಡೆಸಿ ’ತಾನು ನಿರಪರಾಧಿ’ ಎಂದು ನ್ಯಾಯಾಲಯ ನೀಡುವ ತೀರ್ಪಿನ ನಿರೀಕ್ಷೆಯಲ್ಲಿದ್ದ ಇಸ್ರೋ ಮಾಜಿ ಬಾಹ್ಯಾಕಾಶ ವಿಜ್ಞಾನಿ ಕೆ. ಚಂದ್ರಶೇಖರ್ ಕಡೆಗೂ ಆ ಸುದ್ದಿ ಕೇಳುವ ಕೆಲ ಗಂಟೆಗಳ ಮುನ್ನವೇ ಕೊನೆಯುಸಿರೆಳೆದಿದ್ದಾರೆ.
ಶುಕ್ರವಾರ ಸುಪ್ರೀಂ ತೀರ್ಪು ಪ್ರಕಟಿಸುವ ಕೆಲ ಗಂಟೆಗಳ ಮುನ್ನವಷ್ಟೇ ಅವರು ಕೋಮಾಗೆ ಜಾರಿದ್ದರು.
1994 ರ ಬೇಹುಗಾರಿಕೆ ಪ್ರಕರಣದಲ್ಲಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ನಂಬಿ ನಾರಾಯಣನ್ ಅವರು "ಅನಗತ್ಯವಾಗಿ, ಕಿರುಕುಳ ಮತ್ತು ಮಾನಸಿಕ ಕ್ರೌರ್ಯಕ್ಕೆ ಒಳಗಾಗಿದ್ದಾರೆ" ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 
ಪ್ರಕರಣದಲ್ಲಿ ಮಾನಸಿಕ ಕ್ರೌರ್ಯಕ್ಕೆ ಒಳಗಾಗಿರುವ 76 ವರ್ಷ ವಯಸ್ಸಿನ ನಾರಾಯಣನ್ ಅವರಿಗೆ  50 ಲಕ್ಷ ರೂ ಪರಿಹಾರ ನೀಡಬೇಕೆಂದು ಸುಪ್ರೀಂ ಆದೇಶಿಸಿದೆ. ಪ್ರಕರಣದಲ್ಲಿ ಆರೋಪಿಗಳಾಗಿ ಗುರುತಿಸಿದ್ದ ಆರು ಮಂದಿಯಲ್ಲಿ ಚಂದ್ರಶೇಖರ್ ಸಹ ಒಬ್ಬರಾಗಿದ್ದರು.ಆದರೆ ಮೊನ್ನೆ ಸುಪ್ರೀಂ ಕೋರ್ಟ್ ಈ ಸಂಬಂಧ ತೀರ್ಪು ಪ್ರಕಟಿಸಿ ಚಂದ್ರಶೇಖರ್ ಸಹ ಇತರರ ಜೊತೆಗೆ ಖುಲಾಸೆ ಆಗಿದ್ದರು
ಶುಕ್ರವಾರ ಬೆಳಗ್ಗೆ 7.15 ಕ್ಕೆ ಅವರು ಕೊಮಾಗೆ ಜಾರಿದ್ದು ಭಾನುವಾರ  8.40 ಕ್ಕೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ನಿಧನರಾದರು ಅವರು ಹಲವು ವರ್ಷಗಳಿಂದ ಈ ತೀರ್ಪಿನ ನಿರೀಕ್ಷೆಯಲ್ಲಿದ್ದರು ಎಂದು ಚಂದ್ರಶೇಖರ್ ಪತ್ನಿ  ಕೆ.ಜೆ. ವಿಜಯಮ್ಮ ಹೇಳಿದ್ದಾರೆ.
1992ರಿ<ದ ರಷ್ಯಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಗ್ಲೌದ್ ಕೋಸ್ ಮೋಸ್ ನಲ್ಲಿ ಭಾರತೀಯ ಪ್ರತಿನಿಧಿಯಾಗಿ ಚಂದ್ರಶೇಖರ್ ಸೇವೆ ಸಲ್ಲಿಸುತ್ತಿದ್ದರು..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com