ಆಯುಷ್ಮಾನ್ ಭಾರತ್ ಜೊತೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ; ಸಂಪುಟ ಅಸ್ತು

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಭಾನುವಾರ ಪ್ರಧಾನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರ್ಖಂಡ್ ನಲ್ಲಿ ಉದ್ಘಾಟಿಸಲಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಆರೋಗ್ಯ ಕರ್ನಾಟಕ ಯೋಜನೆ ಜೊತೆ ವಿಲೀನಗೊಳಿಸಲು ಮುಂದಾಗಿದೆ. ಇದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ಕೂಡ ನೀಡಿದೆ.

ಈ ಕುರಿತ ನಿಲುವಳಿ ಸೂಚನೆ ಒಪ್ಪಂದವನ್ನು ಕೇಂದ್ರ ಸರ್ಕಾರಕ್ಕೆ ಸಹಿ ಹಾಕಲು ಕಳುಹಿಸಲಾಗಿದ್ದು ಕೇಂದ್ರದಿಂದ ಸಹಿಯಾಗಿ ಬಂದ ನಂತರ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಯೋಜನೆ ಜಾರಿಯ ಉಸ್ತುವಾರಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವಹಿಸಿದೆ.

ಆರೋಗ್ಯ ಕರ್ನಾಟಕ ಯೋಜನೆಗೆ 1,516 ವಿಧಾನಗಳಿದ್ದು ಆಯುಷ್ಮಾನ್ ಭಾರತ್ ನಲ್ಲಿ 1,349 ಚಿಕಿತ್ಸಾ ವಿಧಾನಗಳಿವೆ. ಇವುಗಳನ್ನು ಸೇರಿಸುವುದರಿಂದ ಒಟ್ಟು 1,628 ಚಿಕಿತ್ಸಾ ವಿಧಾನಗಳು ಒಳಗೊಳ್ಳುತ್ತದೆ. ಸಂಯೋಜಿತ ಯೋಜನೆಯಲ್ಲಿ, ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಆರ್ಥಿಕ ನೆರವನ್ನು ಪ್ರತಿ ಕುಟುಂಬಕ್ಕೆ 2 ಲಕ್ಷದಿಂದ 5 ಲಕ್ಷದವರೆಗೆ ನೀಡಲಾಗುತ್ತದೆ. ಮತ್ತು ಎಪಿಎಲ್ ಕುಟುಂಬದವರಿಗೆ 1.50 ಲಕ್ಷ ಪ್ರತಿವರ್ಷ ನೀಡಲಾಗುತ್ತದೆ.

ಇದಕ್ಕಾಗಿ ಬಜೆಟ್ ನಲ್ಲಿ ಸುಮಾರು ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಅವುಗಳಲ್ಲಿ ಭಾರತ ಸರ್ಕಾರದಿಂದ 286 ಕೋಟಿ ರೂಪಾಯಿ ರಾಜ್ಯಕ್ಕೆ ಸಿಗಲಿದೆ. ಉಳಿದ 782 ಕೋಟಿ ರೂಪಾಯಿ ರಾಜ್ಯ ಸರ್ಕಾರ ಭರಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com