ಕೆಎಸ್ಒಯುನಲ್ಲಿ ಯುಜಿ, ಪಿಜಿ ಪ್ರವೇಶಕ್ಕೆ ವಯಸ್ಸು ಆಧರಿತ ಪ್ರವೇಶ ರದ್ದು

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ದ ಪರಿಷ್ಕೃತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ದ ಪರಿಷ್ಕೃತ ನಿಯಮಗಳ ಪ್ರಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಮಾನದಂಡವಾಗಿರುತ್ತದೆಯೇ ಹೊರತು ವಯಸ್ಸು ಅಲ್ಲ ಎಂದು ಹೇಳಿದೆ.

ಈ ಹಿಂದೆ ಕೆಎಸ್ಒಯುದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಪ್ರವೇಶಕ್ಕೆ ವಯಸ್ಸು ಮುಖ್ಯ ಮಾನದಂಡವಾಗಿರುತ್ತಿತ್ತು. ಆದರೆ ಇನ್ನು ಮುಂದೆ ಪದವಿ ಕೋರ್ಸ್ ಗಳಿಗೆ 10+2 ತರಗತಿ ತೇರ್ಗಡೆ ಹೊಂದಿರುವ ಯಾವುದೇ ಅಭ್ಯರ್ಥಿಗಳು ಪದವಿಗೆ ಮತ್ತು ಮೂರು ವರ್ಷಗಳ ಪದವಿ ಗಳಿಸಿರುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಗೆ ಪ್ರವೇಶ ಗಿಟ್ಟಿಸಿಕೊಳ್ಳಬಹುದು.

2018-19ನೇ ಸಾಲಿನ ಯುಜಿ ಮತ್ತು ಪಿಜಿ ಕೋರ್ಸ್ ಗಳಿಗೆ ಕೆಎಸ್ಒಯು ಅರ್ಜಿಗಳನ್ನು ಆಹ್ವಾನಿಸಿದ್ದು ಅಧಿಸೂಚನೆಗೆ ಅಷ್ಟೊಂದು ಅರ್ಜಿಗಳು ಬಾರದಿರುವ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವಂತೆ ಕೆಎಸ್ಒಯು ಅಧಿಕಾರಿಗಳು ಯುಜಿಸಿಯಿಂದ ಅನುಮತಿ ಕೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಡಿ ಶಿವಲಿಂಗಯ್ಯ, ಈ ಹಿಂದೆ ಅಭ್ಯರ್ಥಿಗಳ ಪ್ರವೇಶ ವಯಸ್ಸನ್ನು ಆಧರಿಸಿ ಇರುತ್ತಿತ್ತು. ಇದೀಗ ಯುಜಿಸಿ ಪರಿಷ್ಕೃತ ನಿಯಮಗಳನ್ನು ಜಾರಿಗೆ ತಂದಿದೆ. ಬದಲಾದ ನಿಯಮಕ್ಕೆ ಅಷ್ಟೊಂದು ಅರ್ಜಿಗಳು ಬಂದಿಲ್ಲ, ಹೀಗಾಗಿ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com