ಬೆಂಗಳೂರು: ಜೂನ್ ನಲ್ಲಿ ಮೊದಲ ಬಾರಿಗೆ ಆರು ಕೋಚ್ ಗಳುಳ್ಳ ಮೆಟ್ರೋ ರೈಲು ಬಿಡುಗಡೆ ಮಾಡಿದ್ದು, ಇದಕ್ಕೆ ವ್ಯಾಪಕ ಬೆಂಬಲ ದೊರೆತಿತ್ತು, ಹೀಗಾಗಿ ಒಂದು ತಿಂಗಳಲ್ಲ ಮತ್ತೊಂದು ಆರು ಬೋಗಿಗಳುಳ್ಳ ರೈಲನ್ನು ಸಂಚಾರಕ್ಕೆ ಬಿಡಲು ಬಿಎಂಆರ್ ಸಿ ಎಲ್ ಸಿದ್ಧವಾಗುತ್ತಿದೆ.
ಸೆಪ್ಟಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಹಳಿ ಮೇಲೆ ಆರು ಕೋಚ್ ಗಳುಳ್ಳ ಮೆಟ್ರೋ ಸಂಚಾರಕ್ಕೆ ಮುಕ್ತವಾಗಲಿದೆ. ಸದ್ಯ ಇರುವ ಎಲ್ಲಾ ಮೆಟ್ರೋ ರೈಲುಗಳನ್ನು ಆರು ಬೋಗಿಗಳಿಗೆ ಮೇಲ್ದರ್ಜೆಗೇರಿಸುವ ಕಾರ್ಯದಲ್ಲಿ ಬಿಎಂ ಆರ್ ಸಿ ಎಲ್ ನಿರತವಾಗಿದೆ.
ಸೆಪ್ಚಂಬರ್ 11 ರಂದು 4,36 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿ ದಾಖಲೆಯಾಗಿತ್ತು,. ಇನ್ನೂ ಆರು ಕೋಚ್ ಗಳುಳ್ಳ ಮೆಟ್ರೋದಲ್ಲೂ ಕೂಡ ಜನಸಂದಣಿ ಹೆಚ್ಚಿದ್ದು ಉಸಿರಾಡಲು ಕಷ್ಟ ಎನ್ನವಷ್ಟು ಪ್ರಯಾಣಿಕರು ತುಂಬಿದ್ದರು.
ಸೆಪ್ಟಂಬರ್ ತಿಂಗಳ ಅಂತ್ಯದೊಳಗೆ ಕೆಲಸ ಪೂರ್ಣಗೊಳಿಸಬೇಕೆಂಬುದು ನಮ್ಮ ಗುರಿಯಾಗಿದೆ. ಆದರೆ ಉದ್ಘಾಟನೆಯಾಗುವವರಗೊ ನಿರ್ಧಿಷ್ಟ ದಿನಾಂಕ ಯಾವುದು ಎಂದು ಹೇಳಲು ಸಾಧ್ಯವಿಲ್ಲ.
ಈಗ ಸದ್ಯ ಸಂಚರಿಸುತ್ತಿರುವ ಎಲ್ಲಾ 50 ಮೆಟ್ರೋ ರೈಲುಗಳನ್ನು ಆರು ಬೋಗಿಗಳ ಮೆಟ್ರೋ ಆಗಿ ಪರಿವರ್ತಿಸುವುದು ನಮ್ಮ ಉದ್ದೇಶ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.