ವರನಟ ಡಾ.ರಾಜ್ ಕುಮಾರ್ ಕಿಡ್ನಾಪ್ ಕೇಸ್: 9 ಆರೋಪಿಗಳು ಖುಲಾಸೆ

ಕಾಡುಗಳ್ಳ ವೀರಪ್ಪನ್ ವರನಟ ಡಾ. ರಾಜ್​ಕುಮಾರ್​ ಅವರನ್ನು​ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಿದ್ದು.
ಡಾ. ರಾಜ್ ಕುಮಾರ್ ಜೊತೆ ಕಾಡುಗಳ್ಳ ವೀರಪ್ಪನ್
ಡಾ. ರಾಜ್ ಕುಮಾರ್ ಜೊತೆ ಕಾಡುಗಳ್ಳ ವೀರಪ್ಪನ್
ಈರೋಡ್:  ಕಾಡುಗಳ್ಳ ವೀರಪ್ಪನ್ ವರನಟ ಡಾ. ರಾಜ್​ಕುಮಾರ್​ ಅವರನ್ನು​ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಿದ್ದು. ಎಲ್ಲಾ 9 ಆರೋಪಿಗಳನ್ನು ಖುಲಾಸೆಗೊಳಿಸಿ ಈರೋಡ್​ನ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 
ಆರೋಪ ಸಾಬೀತುಪಡಿಸವಲ್ಲಿ ಪ್ರಾಸಿಕ್ಯೂಷನ್​​ ವಿಫಲವಾದ ಕಾರಣ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್​ತೀರ್ಪು ಪ್ರಕಟಿಸಿದೆ.
2000 ಇಸವಿಯ ಜುಲೈ 30 ರಂದು, ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್ ಅವರನ್ನು, ವೀರಪ್ಪನ್ ​ಮತ್ತವರ ತಂಡ ಅಪಹರಿಸಿತ್ತು. 3 ತಿಂಗಳ ಕಾಲ ರಾಜ್​ ಅವರನ್ನು ಸತ್ಯಮಂಗಳಂ ಹಾಗೂ ಭವಾನಿ ಕಾಡಿನಲ್ಲಿ ಇರಿಸಿಕೊಳ್ಳಲಾಗಿತ್ತು.
ತಮಿಳು ಮ್ಯಾಗಜೀನ್​ನಕ್ಕೀರನ್​ನ ಪತ್ರಕರ್ತ ಆರ್​ಆರ್​​ ಗೋಪಾಲ್​ ನೇತೃತ್ವದಲ್ಲಿ 6 ಸುತ್ತುಗಳ ಮಾತುಕತೆಯ ಬಳಿಕ ಕೊನೆಗೂ 108 ದಿನಗಳ ಬಳಿಕ ರಾಜ್​ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಬಿಡುಗಡೆ ಮಾಡಿದ್ದ.
ಈ ಸೆನ್ಸೇಷನಲ್ ​​ಕೇಸ್​​ನಲ್ಲಿ ವೀರಪ್ಪನ್​ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ವೀರಪ್ಪನ್​, ಸೇತುಕುಡಿ ಗೋವಿಂದನ್​ ಹಾಗೂ ರಂಗಸಾಮಿ ವಿಚಾರಣೆ ವೇಳೆಯೇ ಸಾವನ್ನಪ್ಪಿದ್ದಾರೆ. 
ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಈ ಕುರಿತು ಇಂದು ತೀರ್ಪು ಪ್ರಕಟಿಸಿದ್ದು. ಐವರು ಆರೋಪಿಗಳಾದ ಗೋವಿಂದರಾಜ್​, ಅನಂತಿಲ್, ಪುಸವಣ್ಣ, ಕುಪ್ಪಸ್ವಾಮಿ ಮತ್ತಿತ್ತರನ್ನು ಖುಲಾಸೆಗೊಳಿಸಿ ಅಂತಿಮ ತೀರ್ಪು ನೀಡಿದೆ.
2000 ಜುಲೈ 30ರಂದು ಈರೋಡ್​ನ ದೊಡ್ಡಗಾಜನೂರಿನ ರಾಜ್​ಕುಮಾರ್​ ಅವರ ತೋಟದ ಮನೆಯಿಂದ ಹಣಕ್ಕಾಗಿ ಕಾಡುಗಳ್ಳ ವೀರಪ್ಪನ್​ ಅಪಹರಿಸಿದ್ದ. ಹಣದ ಬೇಡಿಕೆಯಿಟ್ಟು ಅವರನ್ನು 108 ದಿನಗಳ ಕಾಲ ಕಾಡಿನಲ್ಲಿಯೇ ​ ಕಾಲ ಕಳೆಯುವಂತೆ ಮಾಡಿದ್ದ. ಅಪರಹರಣದ ವೇಳೆ ರಾಜ್ ಕುಮಾರ್ ಅವರ ಜೊತೆ ಪತ್ನಿ ಪಾರ್ವತಮ್ಮ ಇದ್ದರು. 

ರಾಜ್ ಕುಮಾರ್ ಅವರನ್ನು ಕಿಡ್ನಾಪ್ ಮಾಡಿದ್ದ ವೀರಪ್ಪನ್ ಬೆಂಗಳೂರಿನಲ್ಲಿ ತಿರುವಲ್ಲೂವರ್ ಪ್ರತಿಮೆ ಸ್ಠಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ. ಈ ಸಂಬಂಧ ತಾಳವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 2004 ರಲ್ಲಿ ಧರ್ಮಪುರಿಯಲ್ಲಿ ಎಸ್ ಟಿ ಎಫ್  ತಂಡ  ವೀರಪ್ಪನ್ ನನ್ನು ಗುಂಡಿಟ್ಟು ಹತ್ಯೆ ಮಾಡಿತ್ತು.18 ವರ್ಷ 2 ತಿಂಗಳ ಬಳಿಕ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿದೆ,

7 ವರ್ಷಗಳ ಹಿಂದೆ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು , ಸುಮಾರು 10 ಮಂದಿ ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com