ಮಾನವೀಯತೆಯ ಮತ್ತೊಂದು ಮುಖ: ಸ್ನೇಹಿತನ ಶಸ್ತ್ರಚಿಕಿತ್ಸೆಗಾಗಿ ಜಮೀನನ್ನೇ ಮಾರಿದ ಗೆಳೆಯ!

: ಇವರಿಬ್ಬರ 35 ವರ್ಷಗಳ ಸ್ನೇಹಕ್ಕೆ ಯಾವುದೂ ಅಡ್ಡ ಬರಲಿಲ್ಲ, ಬೆಳಗಾವಿಯ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಲಿವರ್ ಪ್ಲಾಂಟೇಶನ್ ಗಾಗಿ ತನ್ನ ಜಮೀನನ್ನೇ ಮಾರಾಟ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ: ಇವರಿಬ್ಬರ 35 ವರ್ಷಗಳ ಸ್ನೇಹಕ್ಕೆ ಯಾವುದೂ ಅಡ್ಡ ಬರಲಿಲ್ಲ,  ಬೆಳಗಾವಿಯ ವ್ಯಕ್ತಿಯೊಬ್ಬ  ತನ್ನ ಸ್ನೇಹಿತನ ಲಿವರ್ ಪ್ಲಾಂಟೇಶನ್ ಗಾಗಿ ತನ್ನ ಜಮೀನನ್ನೇ ಮಾರಾಟ ಮಾಡಿ ಹಣ ನೀಡಿದ್ದಾನೆ. 
ಬೆಳಗಾವಿಯ ಸಂದೀಪ್ ಮುಚಂಡಿ ಯಕೃತ್ತಿನ ಸಂಬಂಧದ ಕಾಯಿಲೆಯಿಂದ ಬಳಲುತ್ತಿದ್ದರು, ಹೀಗಾಗಿ ಶಸ್ತ್ರಚಿಕಿತ್ಸೆಗೊಳಪಡುವಂತೆ ಸಲಹೆ ನೀಡಿದ್ದರು. ಆದರೆ ತುಂಬಾ ಬಡತನದ ಹಿನ್ನೆಲೆಯಿಂದ ಬಂದ ಸಂದೀಪ್ ಅಷ್ಟು ಹಣ ಹೊಂದಿಸಲು ಸಾಧ್ಯವಾಗಲಿಲ್ಲ.
ಆದರೆ ಆತನಿಗೆ ಯಾರು ಹಣ ನೀಡಲು ಬರಲಿಲ್ಲ, ಆದರೆ ಈ ವೇಳೆ ಸಂದೀಪ್ ಸ್ನೇಹಿತ  ವಿಷ್ಣುಗಲ್ಲಿಯ ಬಾಬುಲಾಲ್ ಪಠಾಣ್ ತನ್ನ 1.5 ಗುಂಟೆ ಜಮೀನನ್ನು 22 ಲಕ್ಷ ಹಣಕ್ಕೆ ಮಾರಿ ಹಣ ನೀಡಿದ್ದಾನೆ, ಉಳಿದ 6 ಲಕ್ಷ ಹಣವನ್ನು ಕುಟುಂಬದ ಸದಸ್ಯರು ಅಡ್ಜಸ್ಟ್  ಮಾಡಿದ್ದಾರೆ, ಕಳೆದ ತಿಂಗಳು ಮುಂಬಯಿಯ ಅಪೊಲೋ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟ್ ಸರ್ಜರಿ ಮಾಡಿಸಿದ್ದಾರೆ.
ಸಂದೀಪ್ ಗೆ ಸಹಾಯ ಮಾಡಲು ಯಾವ ಮಟ್ಟಕ್ಕೆ ನಾನು ಹೋಗಲು ಸಿದ್ಧ, ಆತನನ್ನು ರಕ್ಷಿಸುವುದಷ್ಟೇ ನನ್ನ ಗುರಿಯಾಗಿತ್ತು, ತನ್ನ ಸ್ನೇಹಿತನಿಗಾಗಿ ಕಿಡ್ನಿ ದಾನ ಮಾಡುವಂತೆ ಮಗನಿಗೆ ಕೇಳಬೇಕೆಂಬ ಯೋಚನೆ ಬಂದಿತ್ತು ಆದರೆ ವೈದ್ಯರು ಅಂಗ ಮ್ಯಾಚ್ ಆಗುವುದಿಲ್ಲ ಎಂದು ವೈದ್ಯರು ಹೇಳಿದಾಗ ಅದರ ಬದಲು ಹಣ ಹೊಂದಿಸಿದೆ ಎಂದು ಹೇಳಿದ್ದಾರೆ.
ವಿಷ್ಣುಗಲ್ಲಿಯ ನಿವಾಸಿ ಬಾಬುಲಾಲ್ ಪಠಾಣ್ ಮುಂಬಯಿಯ ವೈದ್ಯರ ಜೊತೆ  ಮಾತನಾಡಿ, ಹಣ ಹೊಂದಿಸಲು ಹೋರಾಟ ಮಾಡಿರುವುದಾಗಿ ಹೇಳಿದೆ, ಆಗ ವೈದ್ಯರು ಬಿಲ್ ನಲ್ಲಿ 4 ಲಕ್ಷ ಹಣ ಕಡಿಮೆ ಮಾಡಿದರು ಎಂದು ತಿಳಿಸಿದರು. 
ಬಾಬುಲಾಲ್  ಸಂದೀಪ್ ಮತ್ತು ಅವರ ಕುಟುಂಬದವರಿಗಾಗಿ ಸಂಪೂರ್ಣ ಬೆಂಬಲ ನೀಡಿದ್ದು, ಹಣ ಹೊಂದಿಸಲು ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ.
ಸಂದೀಪ್ ಈಗ ಚೇತರಿಸಿಕೊಳ್ಳುತ್ತಿದ್ದು, ಅವರ ಪರಿಸ್ಥಿತಿ ನಾರ್ಮಲ್ ಆಗಿದೆ, ಸದ್ಯ ಸಂದೀಪ್ ಮುಂಬಯಿಯಲ್ಲಿದ್ದು, ನಿಯಮಿತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com