ಕೋಲಾರ: ಪರ ಪುರುಷನೊಂದಿಗೆ ಸಂಬಂಧ ಶಂಕೆ; ಪ್ರೇಯಸಿಯ ರುಂಡ ಕತ್ತರಿಸಿ ಪ್ರಿಯತಮ ಪೊಲೀಸರಿಗೆ ಶರಣು

ಎಂದಿನಂತೆ ಕರ್ತವ್ಯನಿರತರಾಗಿದ್ದ ಕೋಲಾರದ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸರಿಗೆ ನಿನ್ನೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಎಂದಿನಂತೆ ಕರ್ತವ್ಯನಿರತರಾಗಿದ್ದ ಕೋಲಾರದ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸರಿಗೆ ನಿನ್ನೆ ಆಘಾತ ಕಾದಿತ್ತು. ಶಾಂತಚಿತ್ತನಾಗಿ ಪೊಲೀಸ್ ಠಾಣೆಗೆ ಪ್ರವೇಶಿಸಿದ ವ್ಯಕ್ತಿಯ ಚೀಲ ತೆಗೆದು ನೋಡಿದ ಪೊಲೀಸರು ಹೌಹಾರಿದರು.

ನಿನ್ನೆ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದ್ವಿಚಕ್ರ ವಾಹನದಲ್ಲಿ ಬಂದು ಒಂದು ಬ್ಯಾಗಿನೊಂದಿಗೆ ವ್ಯಕ್ತಿ ಪ್ರವೇಶಿಸಿ ಪೊಲೀಸರ ಮುಂದೆ ಬಂದು ಕುಳಿತನು, ಪೊಲೀಸರು ಏಕೆ ಬಂದಿದ್ದು, ಏನು ನಿಮ್ಮ ಸಮಸ್ಯೆ ಎಂದು ಕೇಳಿದಾಗ ಬ್ಯಾಗ್ ತೆರೆದು ತೋರಿಸಿದನು. ಅದರಲ್ಲಿ ಓರ್ವ ಮಹಿಳೆಯ ರುಂಡ ನೋಡಿದ ಪೊಲೀಸರು ಬೆಚ್ಚಿಬಿದ್ದರು.ಕೊನೆಗೆ ತಾನೇ ಮಹಿಳೆಯ ರುಂಡ ಕತ್ತರಿಸಿರುವುದಾಗಿ ಆತ ತಪ್ಪೊಪ್ಪಿಕೊಂಡನು. ಪೊಲೀಸರು ತಕ್ಷಣ ಅವನನ್ನು ಬಂಧಿಸಿದರು.

ಆಗಿರುವ ಘಟನೆಯೇನು?: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜಫ್ಫರ್ ಖಾನ್ ಮೊಹಲ್ಲಾದ ಅಜಿತ್ ಖಾನ್ ಅಲಿಯಾಸ್ ಸದ್ದಮ್(28ವ) ಮೊಬೈಲ್ ರಿಪೇರಿ ಅಂಗಡಿ ಹೊಂದಿದ್ದ ಮತ್ತು ಖಾಸಗಿ ಕಂಪೆನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೂಡ ಕೆಲಸ ಮಾಡುತ್ತಿದ್ದ. ಆತನಿಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ಆದರೂ ಕೂಡ ರೋಹನ್ ಖಾನುಮ್ ಎಂಬ ಮತ್ತೊಬ್ಬ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಆಕೆ ಬೆಂಗಳೂರಿನ ನೀಲಸಂದ್ರದ ನಿವಾಸಿಯಾಗಿದ್ದು ಗಂಡನಿಂದ ದೂರವಾಗಿದ್ದಳು. ಆಕೆಗೂ ಒಂದು ಮಗುವಿದೆ.

ಪರಿತ್ಯಕ್ತ ಮಹಿಳೆ ಖಾನುಮ್ ಗೆ ತಾನೊಬ್ಬನಲ್ಲದೆ ಇನ್ನೊಬ್ಬ ಪುರುಷನೊಂದಿಗೆ ಕೂಡ ಅಕ್ರಮ ಸಂಬಂಧವಿದೆ ಎಂಬ ಸಂಶಯ ಖಾನ್ ಗೆ. ಹೀಗಾಗಿ ಚಿಂತಾಮಣಿ ತಾಲ್ಲೂಕಿನ ಗುಟ್ಟಹಳ್ಳಿ ದಿನ್ನೆಯ ಅಜ್ಞಾತ ಸ್ಥಳಕ್ಕೆ ಖಾನುಮ್ ನನ್ನು ಕರೆದೊಯ್ದು ಸಿಟ್ಟಿನಲ್ಲಿ ಆಕೆಯ ತಲೆ ಕತ್ತರಿಸಿದನು. ನಂತರ ಆಕೆಯ ತಲೆಯನ್ನು ಬ್ಯಾಗಿನಲ್ಲಿ ತುಂಬಿಸಿ ತನ್ನ ದ್ವಿಚಕ್ರ ವಾಹನದಲ್ಲಿ ನೇರವಾಗಿ ಬಂದು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎಂದು ಎಸ್ಪಿ ರೋಹಿಣಿ ಕಟೋಚ್ ಸೆಪಟ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com