ದೇವಾಲಯಗಳ ನಗರಿ ಉಡುಪಿಯಲ್ಲಿ ವೈನ್ ಫೆಸ್ಟಿವಲ್ ಗೆ ಉತ್ತಮ ರೆಸ್ಪಾನ್ಸ್

ವಿಶ್ವ ಪ್ರವಾಸೋದ್ಯಮದ ಅಂಗವಾಗಿ ಮಲ್ಪೆ ಬೀಚ್ ನಲ್ಲಿ ಆಯೋಜಿಸಿರುವ ವೈನ್ ಫೆಸ್ಟಿವಲ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ನಾಲ್ಕು ದಿನಗಳ ವೈನ್ ಹಬ್ಬವನ್ನು ಕರ್ನಾಟಕ ...
ವೈನ್ ಫೆಸಸ್ಟಿವಲ್
ವೈನ್ ಫೆಸಸ್ಟಿವಲ್
ಉಡುಪಿ: ವಿಶ್ವ ಪ್ರವಾಸೋದ್ಯಮದ ಅಂಗವಾಗಿ  ಮಲ್ಪೆ ಬೀಚ್ ನಲ್ಲಿ ಆಯೋಜಿಸಿರುವ ವೈನ್ ಫೆಸ್ಟಿವಲ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ನಾಲ್ಕು ದಿನಗಳ  ವೈನ್ ಹಬ್ಬವನ್ನು ಕರ್ನಾಟಕ ವೈನ್ ಬೋರ್ಡ್,  ವೈನ್ ಕಲ್ಚರ್  ಪ್ರಸಿದ್ಧ ಗೊಳಿಸಲು ಹಮ್ಮಿಕೊಂಡಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ವೈನ್ ಉತ್ಪಾದಕರು,  ರೈತರು ಫೆಸ್ಚಿವಲ್ ನಲ್ಲಿ ಪಾಲ್ಗೊಂಡಿದ್ದರು, ಫೆಸ್ಟಿವಲ್ ಗೆ ಪ್ರವೇಶಿಸಲು ಯಾವುದ್ ಪ್ರವೇಶ ಟಿಕೆಟ್ ಇಲ್ಲ, ಜೊತೆಗೆ ಉಚಿತವಾಗಿ ಟೇಸ್ಟ್ ನೋಡಲು ವೈನ್ ಕೊಡಲಾಗಿತ್ತು, ಹೀಗಾಗಿ  ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ತಮ್ಮ ಮೆಚ್ಚಿನ ಸ್ವಾದದ ಬ್ರಾಂಡೆಡ್ ವೈನ್ ರುಚಿ ನೋಡಿದರು.
ಇಲ್ಲಿ ಹಲವು ಬಗೆಯ ವೈನ್  ವೆರೈಟಿಗಳಿದ್ದು,  ನೋಡಲು ಖುಷಿಯಾಗುತ್ತಿದೆ. ರಷ್ಯನ್ ಗಾದೆಯಂತೆ ಸೂಪ್ ನಂತರ ವೈನ್ ಬಳಸಿದರೇ ವೈದ್ಯರಿಂದ ದೂರ ಇರಬಹುದು ಎಂಬ  ಮಾತನ್ನು ಸಾಗರದ ಎಂಜಿನೀಯರ್ ಪ್ರಶಾಂತ್ ನಾಯಕ್ ಹೇಳಿದ್ದಾರೆ.
ಕರ್ನಾಟಕ ವೈನ್ ಬೋರ್ಡ್ ಆಯೋಜಿಸಿರುವ ಈ ಕಾರ್ಯಕ್ರಮದಿಂದ ದ್ರಾಕ್ಷಿ ಬೆಳೆಗಾರರಿಗೆ ವೈನ್ ಉತ್ಪಾದಕರಿಗೆ ಇದು ಒಳ್ಳೆಯ ವೇದಿಕೆಯಾಗಿದೆ, ಹೀಗಾಗಿ ಮುಂದಿನ ದಿನಗಳಲ್ಲೂ ವೈನ್ ಫೆಸ್ಟಿವಲ್ ಅನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು,  ಈ ಫೆಸ್ಟಿವಲ್ ವೇಳೆ ಸುಮಾರು 20 ಲಕ್ಷ ರು ಮೌಲ್ಯದ  ವೈನ್ ಮಾರಾಟ ವಾಗಲಿದೆ, ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ವೈನ್ಿ ಫೆಸ್ಟಿವಲ್ ನಿಂದ ಸುಮಾರು 35 ಲಕ್ಷ ಹಣ ಸಂಗ್ರಹವಾಗಿತ್ತು ಎಂದು ಕರ್ನಾಟಕ ವೈನ್ ಬೋರ್ಡ ಮ್ಯಾನೇಜರ್ ಸರ್ವೇಶ್ ಕುಮಾರ್ ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com