ಕಲಬೆರಕೆ ಮದ್ಯಕ್ಕೆ ಮುಕ್ತಿ: ಆಗುಂಬೆಯಲ್ಲಿ ಎಂಎಸ್ಐಎಲ್ ಮದ್ಯದ ಘಟಕಕ್ಕೆ ಗ್ರಾಮಸ್ಥರ ಒತ್ತಾಯ

ರಾಜ್ಯದಾದ್ಯಂತ 1,000 ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಬಹು ದೀರ್ಘಕಾಲದಿಂದ ಎಂಎಸ್ ಐಎಲ್....
ಸಂಗ್ರಹ್ ಚಿತ್ರ
ಸಂಗ್ರಹ್ ಚಿತ್ರ
Updated on
ಶಿವಮೊಗ್ಗ: ರಾಜ್ಯದಾದ್ಯಂತ 1,000 ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಬಹು ದೀರ್ಘಕಾಲದಿಂದ ಎಂಎಸ್ ಐಎಲ್ ಘಟಕಕ್ಕಾಗಿ ಬೇಡಿಕೆ ಇಟ್ಟಿದ್ದ ಆಗುಂಬೆ ಜನತೆಯಲ್ಲಿ ಮತ್ತೊಮ್ಮೆ ಆಶಾಕಿರಣ ಮೂಡಿದೆ.
ಎಂಟು ವರ್ಷಗಳ ನಂತರ, ಗ್ರಾಮದಲ್ಲಿ ಮೈಸೂರು ಸ್ಲೇಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಮದ್ಯ ಘಟಕವನ್ನು ತೆರೆಯಲು ಆಗುಂಬೆ ಗ್ರಾಮ ಪಂಚಾಯತ್ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಮತ್ತೆ ಕೋರಿಕೆ ಸಲ್ಲಿಸಲಾಗಿದೆ. ಅಲ್ಲದೆ ಇದರಿಂದ ಗ್ರಾಮದ ಅನೇಕ ಕುಟುಂಬಗಳು ನಡೆಸುವ "ದ್ವಿತೀಯ" "ತೃತೀಯ" ದರ್ಜೆ ಮದ್ಯಗಳ ಮಾರಾಟಕ್ಕೆ ಒಂಡು ತಡೆ ಸಿಕ್ಕಲ್ಲಿದೆ.
ತೀರ್ಥಹಳ್ಳಿಯಲ್ಲಿ ಬಿಟ್ಟರೆ ಹತ್ತಿರದಲ್ಲೆಲ್ಲೂ ಮದ್ಯದ ಅಂಗಡಿಗಳಿಲ್ಲ.ಆದ್ದರಿಂದ, ಜನರು ಸ್ಥಳೀಯವಾಗಿ ಲಭ್ಯವಿರುವ  ಸೇಂದಿ, ನೀರಾಗಳಂತಹಾ ಮದ್ಯವನ್ನೇ ಅವಲಂಬಿಸಿದ್ದಾರೆ. "ಸ್ಥಳೀಯ ಮದ್ಯವು ಕಡಿಮೆ ದರ್ಜೆಯದಾಗಿದ್ದು ಅದು ಗ್ರಾಹಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಲಿದೆ.ಇದನ್ನು ಅಂತ್ಯಗೊಳಿಸಲು ಗ್ರಾಮ ಪಂಚಾಯತಿಯು ಎಂಎಸ್ ಐಎಲ್ ನ ಅಧಿಕೃತ ಮದ್ಯದ ಮಳಿಗೆ ತೆರಯಲು ಅಧಿಕಾರಿಗಳಿಗೆ ಒತ್ತಾಯಿಸುತ್ತಿದೆ ಎಂದು ಪಂಚಾಯತಿ ಅಧ್ಯಕ್ಷ ಹಸಿರುಮನೆ ನಂದನ್ ಹೇಳಿದ್ದಾರೆ.
ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತ್ ಅನೇಕ ಪ್ರಯತ್ನಗಳನ್ನು ಮಾಡಿದೆ, ಆದರೆ ಅದು ಸಫಲವಾಗಿಲ್ಲ.ಅದಕ್ಕಾಗಿ ಗ್ರಾಮ ಪಂಚಾಯತಿಯು  ಎಂಎಸ್ಐಎಲ್ ಘಟಕವನ್ನು ಪ್ರಾರಂಭಿಸಲು ಒತ್ತಾಯಿಸುತ್ತದೆ.. "ಮಳೆಗಾಲ ಮತ್ತು ಚಳಿಗಾಲದಲ್ಲಿ ಗ್ರಾಮದಲ್ಲಿ ತೀವ್ರ ಚಳಿ ಹಾಗೂ ಶೀತದ ವಾತಾವರಣ ಇರುವ ಕಾರಣ ಜನರು ಚಳಿಯಿಂದ ಪಾರಾಗಲು ಮದ್ಯದ ಮೊರೆ ಹೋಗುತ್ತಾರೆ.ಅವರು ಉತ್ತಮ ಆಲ್ಕೊಹಾಲ್ ಸೇವನೆ ಮಾಡಬೇಕು.ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯ."ಎಂದು ವಿನಯ್ ಎಂಬ ಗ್ರಾಮಸ್ಥರು ಹೇಳಿದರು.
ಎಂಎಸ್ಐಎಲ್ ನಿಲುವು
"ಇಲಾಖೆ ಎಕ್ಸೈಸ್ ವಿಭಾಗದ ನಿಯಮಗಳ ಪ್ರಕಾರ ಮಂಜೂರಾತಿಗೆ ಸಿದ್ಧವಾಗಿದೆ. ಮುಖ್ಯವಾಗಿ, ಇಲಾಖೆಯು ಎನ್ಒಸಿ ಯೊಂದಿಗೆ ಭೂಮಿಯನ್ನು ಪಡೆಯಬೇಕು ಮತ್ತು ಇದು ಆಗುಂಬೆ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಿಂದ 220 ಮೀಟರ್ ದೂರದಲ್ಲಿರಬೇಕು." ಎಂದು ಉಪ ಕಮಿಷನರ್ (ಎಕ್ಸೈಸ್) ಆಗಿರುವ  ಮೋಹನ್ ಕುಮಾರ್ ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com