ಬೆಳಗಾವಿ; ಅಪರೂಪದ ಶಸ್ತ್ರಚಿಕಿತ್ಸೆ, ಮಗುವಿನ ಬಲಬದಿಗೆ ಹೃದಯ ಬದಲಾವಣೆ

ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ಬೆಳಗಾವಿಯ ಪ್ರಭಾಕರ್ ಕೋರೆ ...
ಶಸ್ತ್ರಚಿಕಿತ್ಸೆ ನಂತರ ಮಗುವಿನ ಆರೋಗ್ಯ ಪರೀಕ್ಷಿಸುತ್ತಿರುವ ಬೆಳಗಾವಿಯ ಪ್ರಭಾಕರ್ ಕೋರೆ ಆಸ್ಪತ್ರೆ ವೈದ್ಯರು
ಶಸ್ತ್ರಚಿಕಿತ್ಸೆ ನಂತರ ಮಗುವಿನ ಆರೋಗ್ಯ ಪರೀಕ್ಷಿಸುತ್ತಿರುವ ಬೆಳಗಾವಿಯ ಪ್ರಭಾಕರ್ ಕೋರೆ ಆಸ್ಪತ್ರೆ ವೈದ್ಯರು

ಬೆಳಗಾವಿ: ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ಬೆಳಗಾವಿಯ ಪ್ರಭಾಕರ್ ಕೋರೆ ಆಸ್ಪತ್ರೆಯ ವೈದ್ಯರು 20 ದಿನದ ಶಿಶುವಿನ ಎದೆಯ ಎಡ ಭಾಗದಲ್ಲಿದ್ದ ಹೃದಯವನ್ನು ಬಲಬದಿಗೆ ಯಶಸ್ವಿಯಾಗಿ ಬದಲಾಯಿಸಿದ್ದಾರೆ.

ವಿಶ್ವದಲ್ಲಿ ಇದು 6ನೇ ಯಶಸ್ವಿ ಶಸ್ತ್ರಕ್ರಿಯೆಯಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಿಜಯಪುರ ಜಿಲ್ಲೆಯ ಜೈನಪುರ ಗ್ರಾಮದ ಎರಡೂವರೆ ಕೆ ಜಿ ತೂಕದ ಮಗುವನ್ನು ಹೃದಯ ಶಸ್ತ್ರಚಿಕಿತ್ಸೆಗಾಗಿ ಬಾಗಲಕೋಟೆಯ ಶಾಂತಿ ಮಕ್ಕಳ ಆಸ್ಪತ್ರೆಗೆ ಉಲ್ಲೇಖಿಸಲಾಗಿತ್ತು.

ಹೃದಯಾಘಾತಕ್ಕೀಡಾಗಿದ್ದ ಮಗುವನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು.ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೋರೆ ಆಸ್ಪತ್ರೆಗೆ ಉಲ್ಲೇಖಿಸಲಾಗಿತ್ತು. ಹೃದ್ರೋಗ ತಜ್ಞ ಡಾ ಪ್ರವೀಣ್ ತಂಬ್ರಳ್ಳಿಮಠ ಮಗುವನ್ನು ತಪಾಸಣೆ ಮಾಡಿದರು ಅವರ ಜೊತೆ ಮಕ್ಕಳ ಹೃದ್ರೋಗ ತಜ್ಞ ಡಾ ವೀರೇಶ್ ಮಾನ್ವಿ, ಮಗುವಲ್ಲಿ ಅಪರೂಪದ ಅಂಗಾಂಶ ಕಾಯಿಲೆ ಇರುವುದನ್ನು ಕೂಡ ಪತ್ತೆಹಚ್ಚಿದರು. ಮಗು ಬದುಕುಳಿಯಲು ಶಸ್ತ್ರಕ್ರಿಯೆಯೊಂದೇ ದಾರಿಯಾಗಿತ್ತು.

ಸಾಮಾನ್ಯವಾಗಿ ಮನುಷ್ಯರಿಗೆ ದೇಹದ ಎಡಭಾಗದಲ್ಲಿ ಹೃದಯವಿರುತ್ತದೆ.ಆದರೆ ಈ ಮಗುವಿಗೆ ಶಸ್ತ್ರಚಿಕಿತ್ಸೆ ಮೂಲಕ ಬದಬದಿಗೆ ವರ್ಗಾಯಿಸಲಾಯಿತು. ಮಗು ಬದುಕುಳಿಯಲು ಶಸ್ತ್ರಚಿಕಿತ್ಸೆ ಮಾಡಿ ಬಲಬದಿಗೆ ವರ್ಗಾಯಿಸುವುದೊಂದೆ ವೈದ್ಯರಿಗೆ ಉಳಿದ ದಾರಿಯಾಗಿತ್ತು. ಅದು ಯಶಸ್ವಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com