ಉಡದ ಅಂಗಾಂಗವನ್ನು ಗಿಡಮೂಲಿಕೆಯೆಂದು ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ

ವಿಲಕ್ಷಣ ಘಟನೆಯೊಂದರಲ್ಲಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಉಡದ ಅಂಗಾಂಗಳನ್ನು
ನಾಲ್ವರು ಆರೋಪಿಗಳೊಂದಿಗೆ ಅರಣ್ಯಾಧಿಕಾರಿಗಳು
ನಾಲ್ವರು ಆರೋಪಿಗಳೊಂದಿಗೆ ಅರಣ್ಯಾಧಿಕಾರಿಗಳು

ಬೆಂಗಳೂರು: ವಿಲಕ್ಷಣ ಘಟನೆಯೊಂದರಲ್ಲಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಉಡದ ಅಂಗಾಂಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಾಬಾಬುಡನ್ ಗಿರಿಯಲ್ಲಿ  ವಿವಿಧ ಸರೀಸೃಪಗಳ 49 ಅಂಗಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸರೀಸೃಪಗಳ ಅಂಗಾಂಗಗಳನ್ನು ಒಣಗಿಸಿ ಅದನ್ನು ಗಿಡಮೂಲಿಕೆಯಾಗಿ ಮಾರಾಟ ಮಾಡುತ್ತಿದ್ದರು. ಬಾಬಾಬುಡನ್ ಗಿರಿ ಬೆಟ್ಟದಲ್ಲಿ ಅಂಗಡಿ ಮಾಲೀಕನೊಬ್ಬ ಸರೀಸೃಪಗಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿದ್ದು ಅದು ವನ್ಯಮೃಗ ರಕ್ಷಣಾ ಕಾಯ್ದೆಗೆ ವಿರುದ್ಧವಾದ ಕ್ರಮವಾಗಿದ್ದು ಈ ಸಂಬಂಧ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ನಾಲ್ವರನ್ನು ಬಂಧಿಸಲಾಗಿದೆ.

ವನ್ಯಮೃಗ ಅಪರಾಧ ನಿಯಂತ್ರಣ ವಿಭಾಗದ ಅಧಿಕಾರಿಗಳಿಗೆ ಸಿಕ್ಕಿದ ನಿಖರ ಮಾಹಿತಿ ಆಧಾರದ ಮೇಲೆ ರೇಂಜ್ ಅರಣ್ಯಾಧಿಕಾರಿ ಶಿಲ್ಪ ನೇತೃತ್ವದ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ದತ್ತಪೀಠ ಬಾಬಾಬುಡನ್ ಗಿರಿಯಲ್ಲಿ ಸರೀಸೃಪಗಳ ಅಂಗಾಂಗಳನ್ನು ಮುಖ್ಯವಾಗಿ ಉಡದ ಭಾಗವನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com