ಖಾಸಗಿ ಶಾಲಾ ಶಿಕ್ಷಕರು 'ನನ್' ಗಳು, ವಿದ್ಯಾರ್ಥಿಗಳೆಲ್ಲಾ 'ಗಿಳಿಗಳು': ಸಚಿವ ಎನ್. ಮಹೇಶ್ ವಿವಾದಾತ್ಮ ಕ ಹೇಳಿಕೆ

ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಎನ್. ಮಹೇಶ್ ರಾಜ್ಯದ ಖಾಸಗಿ ಶಾಲಾ ಶಿಕ್ಷಕರನ್ನು ನನ್ ಗಳಿಗೆ ಹೋಲಿಕೆ ಮಾಡುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಎನ್. ಮಹೇಶ್
ಎನ್. ಮಹೇಶ್
ಬೆಂಗಳೂರು: ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಎನ್. ಮಹೇಶ್ ರಾಜ್ಯದ ಖಾಸಗಿ ಶಾಲಾ ಶಿಕ್ಷಕರನ್ನು ನನ್ ಗಳಿಗೆ ಹೋಲಿಕೆ ಮಾಡುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರು ಮಕ್ಕಳ ಮೇಲೆ ಹೇರುವ ಕಠಿಣ ಶಿಸ್ತಿನ ತರಬೇತಿಯು ಮಕ್ಕಳ ಸೃಜನಶೀಲತೆಯನ್ನು ಕೊಲ್ಲಲಿದೆ.ಎಂದಿರುವ ಸಚಿವರು ಇಂತಹಾ ಶಾಲಾ ವಿದ್ಯಾರ್ಥಿಗಳು ಗಿಳಿಗಳಂತಿದ್ದಾರೆ ಎಂದರು. ಅಲ್ಲದೆ ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲಾ ಶಿಕ್ಷಕರಿಗಿಂತ ಹೆಚ್ಚು ಪ್ರತಿಭಾವಂತರಿದ್ದಾರೆ ಎಂದ ಸಚಿವರು ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಹದ್ದುಗಳಿಗೆ ಹೋಲಿಕೆ ಮಾಡಿದ್ದಾರೆ.
ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (ಕೆಎಸ್ಸಿಪಿಆರ್ಆರ್) ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು."ಖಾಸಗಿ ಶಾಲಾ ಶಿಕ್ಷಕರು ಸನ್ಯಾಸಿನಿಯರಂತೆ ಬಹಳ ಶಿಸ್ತು ಹಾಗೂ ಗಂಭೀರವಾಗಿರುತ್ತಾರೆ. "ನೀವು 10 ಗಂಟೆಯ ನಂತರ ರಾಜ್ಯದಲ್ಲಿರುವ ಯಾವುದೇ ಖಾಸಗಿ ಶಾಲೆಗೆ ಭೇಟಿ ನೀಡಿದರೆ, ಪಿನ್-ಡ್ರಾಪ್ ಸೈಲೆನ್ಸ್ ಇರುತ್ತದೆ.ಹಾಗೆಯೇ ಮಕ್ಕಳು ಎಂದು ಈ ದಿನ ಮುಕ್ತಾಯವಾಗುತ್ತದೆ, ನಾವು ಯಾವಾಗ ಹಕ್ಕಿಗಳಂತೆ ಹಾರಾಟ ನಡೆಸಲಿದ್ದೇವೆ ಎಂದು ಕಾಯುತ್ತಿರುತ್ತಾರೆ. ಅಲ್ಲಿನ ಶಿಕ್ಷಕರು ಮಕ್ಕಳ ಮೇಲೆ ಹೆಚ್ಚು ಶಿಸ್ತಿನ ಕ್ರಮಗಳನ್ನು ಹೇರುವ ಮೂಲಕ ಮಕ್ಕಳಲ್ಲಿನ ತೆ ಸೃಜನಶೀಲತೆಯನ್ನು ಕೊಲ್ಲುತ್ತಾರೆ" ಮಹೇಶ್ ಹೇಳಿದರು
"ನಮ್ಮ ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿಯವರಿಗಿಂತ ಹೆಚ್ಚು ಬುದ್ದಿವಂತರಿದ್ದಾರೆ. ಶಿಕ್ಷಕರು, ಮಕ್ಕಳ ನಡುವೆ ಏನಾದರೂ ಪರಸ್ಪರ ಹೊಂದಾಣಿಕೆ ಇನ್ನಷ್ಟು ಗಟ್ಟಿಗೊಂಡಿದ್ದಾದರೆ ಖಚಿತವಾಗಿ ಸರ್ಕಾರಿ ಶಾಲಾ ಮಕ್ಕಳು  ಖಾಸಗಿ ಶಾಲಾ ಮಕ್ಕಳನ್ನು ಹಿಂದಿಕ್ಕಿರುತ್ತಾರೆ" ಎಂದು ಸಚಿವರು ಹೇಳಿದರು.
ಸಚಿವರ ಪ್ರಕಾರ ಖಾಸಗಿ ಶಾಲೆಯಲ್ಲಿ ಕಲಿತ ಮಕ್ಕಳು ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡಲಾರರು.ಅವರು ವಿದೇಶದಲ್ಲಿ ಉದ್ಯೋಗ ಪಡೆದುಕೊಳ್ಳುವುದನ್ನೇ ಪ್ರಥಮ ಆದ್ಯತೆಯಾಗಿಸಿಕೊಳ್ಳುತ್ತಾರೆ ಹೊರತು  ನಮ್ಮ ಶಿಕ್ಷಕ, ಕಾನ್ಸ್ಟೇಬಲ್ ಅಥವಾ ಚಾಲಕರಾಗಿ ದೇಶ, ಸಮಾಜಕ್ಕೆ ಸೇವೆ ಸಲ್ಲಿಸುವುದಿಲ್ಲ. ಸರ್ಕಾರಿ ಶಾಲೆಯ ಮಕ್ಕಳು ರಾಜ್ಯದಲ್ಲಿಯೇ ಉಳಿಯುತ್ತಾರೆ ಮತ್ತು ಅವರು ಸಮಾಜಕ್ಕೆ ತಮ್ಮ ಕೊಡುಗೆ ಸಲ್ಲಿಸುತ್ತಾರೆ.
ಖಾಸಗಿ ಶಾಲಾ ಮಂಡಳಿಯಿಂದ ಖಂಡನೆ
ಸಚಿವ ಮಹೇಶ್ ಹೇಳಿಕೆಗೆ ಖಾಸಗಿ ಶಾಲಾ ಆಡಳಿತದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.ಸಚಿವರು ಖಾಸಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳಲ್ಲಿ ಬೇಧ ಎಣಿಸಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ.ಸಚಿವರ "ಬೇಜವಾಬ್ದಾರಿ" ಹೇಳಿಕೆಗಳ ಕಾರಣ ಅವರು ರಾಜೀನಾಮೆ ನೀಡಬೇಕು ಎಂದು ಕಾಸಗಿ ಶಾಲಾ ಆಡಳಿತ ಮಂಡಳಿ ಒತ್ತಾಯಿಸಿದೆ.
ರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ ಮೆಂಟ್ ನ ಧಾನ ಕಾರ್ಯದರ್ಶಿ ಡಿ. ಶಶಿ ಕುಮಾರ್ ಅವರು, "ಮಂತ್ರಿಗಳು ಇಂ<ತಹಾ  ಅಪಕ್ವ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ಏಕಾಗಿ ನೀಡುತ್ತಾರೆ? ಇಂತಹಾ ವ್ಯಕ್ತಿ ಸಚಿವರಾಗಲು ಯೋಗ್ಯರಲ್ಲ, ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು" ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com