ಬೆಂಗಳೂರಿಗರ ಮತಜಾಗ್ರತಿಗಾಗಿ ವ್ಯಂಗ್ಯಚಿತ್ರಗಳ ಮೊರೆ ಹೋದ ಚುನಾವಣಾ ಆಯೋಗ

ಬೆಂಗಳೂರು ನಗರದ ಜನರು ಮತದಾನದತ್ತ ಹೆಚ್ಚು ಆಸಕ್ತರಾಗುವಂತೆ ಮಾಡಲು ಚುನಾವಣಾ ಆಯೋಗ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದೆ. ಭಾನುವಾರ ಲಾಲ್ ಬಾಗ್ ನಲ್ಲಿ ವಾಕಿಂಗ್, ಜಾಗಿಂಗ್...
ಬೆಂಗಳೂರಿಗರ ಮತಜಾಗ್ರತಿಗಾಗಿ ವ್ಯಂಗ್ಯಚಿತ್ರಗಳ ಮೊರೆ ಹೋದ ಚುನಾವಣಾ ಆಯೋಗ
ಬೆಂಗಳೂರಿಗರ ಮತಜಾಗ್ರತಿಗಾಗಿ ವ್ಯಂಗ್ಯಚಿತ್ರಗಳ ಮೊರೆ ಹೋದ ಚುನಾವಣಾ ಆಯೋಗ
Updated on
ಬೆಂಗಳೂರು: ಬೆಂಗಳೂರು ನಗರದ ಜನರು ಮತದಾನದತ್ತ ಹೆಚ್ಚು ಆಸಕ್ತರಾಗುವಂತೆ ಮಾಡಲು ಚುನಾವಣಾ ಆಯೋಗ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದೆ. ಭಾನುವಾರ ಲಾಲ್ ಬಾಗ್ ನಲ್ಲಿ ವಾಕಿಂಗ್, ಜಾಗಿಂಗ್ ಬಂದಿದ್ದವರಿಗೆ ಅಂತಹದೇ ಒಂದು ಅಚ್ಚರಿ ಎದುರಾಗಿತ್ತು. ಭಾನುವಾರದ ವಾಕಿಂಗ್ ಕೇವಲ ಶುದ್ದ ಗಾಳಿಯ ಸೇವನೆಯಷ್ಟೇ ಆಗಿರದೆ ವ್ಯಂಗ್ಯಚಿತ್ರ (ಕಾರ್ಟೂನ್) ಗಳನ್ನು ನೋಡುವ ಸೌಭಾಗ್ಯವೂ ಸಿಕ್ಕಿತ್ತು.  ಜನರನ್ನು ಜವಾಬ್ದಾರಿಯುತ ಮತದಾರರನ್ನಾಗಿಸಲು ಪ್ರಯತ್ನದದ ಒಂದು ಭಾಗ ಇದಾಗಿತ್ತು.
ಚಂದ್ರ ಗಂಗೊಳ್ಳಿ, ಬಿ ಜಿ ಗುಜ್ಜಾರಪ್ಪ, ವಿ ಗೋಪಾಲ್ ಮತ್ತು ಎಮ್.ವಿ. ಶಿವರಾಂ ಮುಂತಾದ 25 ಪ್ರಮುಖ ವ್ಯಂಗ್ಯಚಿತ್ರಕಾರರು ಕಾರ್ಟೂನ್ ಚಿತ್ರಗಳ ಮೂಲಕ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಮತಚಲಾಯಿಸುವಂತೆ ಪ್ರೇರಣೆ ನೀಡುತ್ತಿದ್ದರು. 
"ಮಗಾ ಗೆಟ್ ಅಪ್ ಆಂಡ್ ವೋಟ್", "ನೀವು ಮತದಾನ ಮಾಡಲು ಮರೆಯಬೇಡಿ, ಮತದಾನಕ್ಕೆ ಗೈರಾಗಬೇಡಿ" ಎಂಬ ಘೋಷವಾಕ್ಯಗಳೊಡನೆ ಕಾರ್ಟೂನ್ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಅದರಲ್ಲಿ ಓರ್ವ ಹುಡುಗಿ ಸೋಮಾರಿಯಾದ ಮತದಾರನನ್ನು ನೋಡಿ ನಗುತ್ತಾ ಹಾಸ್ಯ ಮಾಡುತ್ತಿರುವ ದೃಶ್ಯವೂ ಅದ್ಭುತವಾಗಿ ಗಮನ ಸೆಳೆಯಿತು.
ಮತದಾನದ ದಿನವನ್ನು "ಪ್ರಜಾಪ್ರಭುತ್ವದ ಉತ್ಸವ" ಎಂದು ಪರಿಗಣಿಸಬೇಕೆಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ಬ`ೆಂಗಳೂರಿನಲ್ಲಿ ಕಳೆದ ಸಾಲಿನ ವಿಧಾನಸಭೆ ಚುನಾವಣೆಗಳಲ್ಲಿ 2008ರಲ್ಲಿ 47.22 ಶೇ. ಹಾಗೂ 2013ರಲ್ಲಿ 58.27 ಶೇ, ಮತದಾನವಾಗಿತ್ತು. ಅದೇ ರೀತಿ 2018ರಲ್ಲಿ ನಡೆದ ಚುನಾವಣೆಯಲ್ಲಿ 65 ಶೇ. ಮತದಾನ ನಡೆದಿತ್ತು. ಆದರೂ ನಗರದ ಜನತೆ ಲೋಕಸಭೆ ಚುನಾವಣೆ ಕುರಿತು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕೇವಲ  ಶೇ 10 ರಷ್ಟು ಹೆಚ್ಚುವರಿ ಜನರು ಮಾತ್ರವೇ ಸಾರ್ವತ್ರಿಕ ಚುನಾವಣೆ ಬಗ್ಗೆ ಆಸಕ್ತರಾಗಿದ್ದಾರೆ. ಹೀಗಾಗಿ ಹೆಚ್ಚು ಹೆಚ್ಚು ಜನರನ್ನು ಮತಗಟ್ಟೆಗೆ ಸೆಳೆಯಲು, ಹೆಚ್ಚು ಪ್ರಮಾಣದಲ್ಲಿ ಮತ ಚಲಾವಣೆ ಆಗುವಂತೆ ಮಾಡಲು ಆಯೋಗ ಈ ಕ್ರಮ ಅನುಸರಿಸಿದೆ.ಲಾಲ್ ಬಾಗ್ ಗ್ಲಾಸ್ ಹೌಸ್ ನಲ್ಲಿ ಈ ಪ್ರದರ್ಶನ  ನಡೆದಿದ್ದು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ, ಸಹಯೋಗದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದೆ.
ಕಾರ್ಟೂನಿಸ್ಟ್ ಚಂದ್ರ ಗಂಗೊಳ್ಳಿ (40) ಅವರು ನಾವು ಉತ್ತಮ ಸರ್ಕಾರವನ್ನು ಆರಿಸುವ ಜವಾಬ್ದಾರಿ ಹೊಂದಿದ್ದೇವೆ ಎಂದರು. "ವ್ಯಂಗ್ಯಚಿತ್ರಗಳು ಸಂದೇಶವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ತೋಟಗಾರಿಕಾ ಇಲಾಖೆಯ ನಿರ್ದೇಶಕ ಡಾ. ಎಮ್ ವಿ ವೆಂಕಟೇಶ್, ಮತ್ತು ಚುನಾವಣಾ ಆಯೋಗದ ವಿಶೇಷ ಅಧಿಕಾರಿಗಳು  ಸಹ . ಒಂದು ಚಿತ್ರ ಸಾವಿರ ಪದಗಳನ್ನು ತಿಳಿಸುತ್ತದೆ  ಎಂದಿದ್ದಾರೆ. 
ಇದೇ ವೇಳೆ ಇವಿಎಂ ಬಳಕೆ ಕುರಿತಂತೆ ಸಹ ಸಾರ್ವಜನಿಕರಿಗೆ ಪ್ರದರ್ಶನದ ಮೂಲಕ ಮಾಹಿತಿ ಒದಗಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com