ತುಮಕೂರು: ಮಕ್ಕಳಿಗೆ ಶಿವಕುಮಾರ ಸ್ವಾಮೀಜಿ ಹೆಸರಿಟ್ಟ ಪೋಷಕರು

ಕಳೆದ ಜನವರಿ 21ರಂದು ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ...
ಶ್ರೀ ಶಿವಕುಮಾರ ಸ್ವಾಮೀಜಿ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹೊರತಂದಿರುವ ಪುಸ್ತಕವನ್ನು ಡಾ ಶಿವಕುಮಾರ ಸ್ವಾಮೀಜಿಗಳ 112ನೇ ಜಯಂತಿ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು
ಶ್ರೀ ಶಿವಕುಮಾರ ಸ್ವಾಮೀಜಿ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹೊರತಂದಿರುವ ಪುಸ್ತಕವನ್ನು ಡಾ ಶಿವಕುಮಾರ ಸ್ವಾಮೀಜಿಗಳ 112ನೇ ಜಯಂತಿ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು
Updated on
ತುಮಕೂರು: ಕಳೆದ ಜನವರಿ 21ರಂದು ಲಿಂಗೈಕ್ಯರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ನಿನ್ನೆ ನಡೆಯಿತು. ಕಳೆದ 80 ವರ್ಷಗಳ ಶ್ರೀಗಳ ಹುಟ್ಟುಹಬ್ಬ ಆಚರಣೆ ನಿನ್ನೆ ಶ್ರೀಗಳಿಲ್ಲದೆ ಅಪಾರ ಭಕ್ತಾದಿಗಳು ಮತ್ತು ಶಿಷ್ಯವರ್ಗದ ಸೇರ್ಪಡೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ಬೆಂಗಳೂರಿನ ಡಾ ಶಿವಕುಮಾರ ಸ್ವಾಮೀಜಿ ಭಕ್ತರ ಸಂಸ್ಥೆಯ 112 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಯ ಹೆಸರನ್ನು ಬಳಸಿಕೊಳ್ಳಲಾಯಿತು. 15 ದಿನಗಳಿಂದ ಒಂದು ವರ್ಷದವರೆಗಿನ ಮಠಕ್ಕೆ ಕರೆದುಕೊಂಡ ಬಂದ ಮಕ್ಕಳಿಗೆ ಶಿವಕುಮಾರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಲಾಯಿತು.
ಪೋಷಕರು ತಮ್ಮ ಗಂಡು ಮಕ್ಕಳಿಗೆ ಶಿವಕುಮಾರ ಎಂದು ಮತ್ತು ಹೆಣ್ಣು ಮಕ್ಕಳಿಗೆ ಶಿವಾನಿ ಎಂದು ಹೆಸರಿಟ್ಟರು ಎಂದು ಬೆಂಗಳೂರಿನ ಜಕ್ಕೂರಿನ ಹೈಕೋರ್ಟ್ ವಕೀಲ ಮತ್ತು ಸಂಸ್ಥೆಯ ಅಧ್ಯಕ್ಷ ಜಯಣ್ಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com