ಬೆಳ್ತಂಗಡಿ: ವಿದ್ಯುತ್ ಆಘಾತದಲ್ಲಿ ದಂಪತಿ ದುರ್ಮರಣ

ವಿದ್ಯುತ್ ಆಘಾತವಾದ ಪರಿಣಾಮ ದಂಪತಿಗಳು ದುರ್ಮರಣಕ್ಕೀಡಾಗಿರುವ ಘತನೆ ದಕ್ಷಿಣ ಕನಡ ಜಿಲ್ಲೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ: ವಿದ್ಯುತ್ ಆಘಾತದಲ್ಲಿ ದಂಪತಿ ದುರ್ಮರಣ
ಬೆಳ್ತಂಗಡಿ: ವಿದ್ಯುತ್ ಆಘಾತದಲ್ಲಿ ದಂಪತಿ ದುರ್ಮರಣ
ಬೆಳ್ತಂಗಡಿ: ವಿದ್ಯುತ್ ಆಘಾತವಾದ ಪರಿಣಾಮ ದಂಪತಿಗಳು ದುರ್ಮರಣಕ್ಕೀಡಾಗಿರುವ ಘತನೆ ದಕ್ಷಿಣ ಕನಡ ಜಿಲ್ಲೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ವೇಣೂರು ಸಮೀಪ  ಕೊಕ್ರಾಡಿ ಎಂಬಲ್ಲಿ ನಡೆದ ದುರ್ಘಟನೆಯಲ್ಲಿ ಸಂಜೀವ ಮೂಲ್ಯ(55) ಹಾಗೂ ಸರೋಜಿನಿ  ಎಂಬುವವರು ಮೃತಪಟ್ಟಿದ್ದಾರೆ.
ಸರೋಜಿನಿ ಅವರ ಮನೆಯಲ್ಲಿ ವಿದ್ಯುತ್ ಸ್ವಿಚ್ ಬೋರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದಕ್ಕಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಪ್ಯೂಜ್ ತೆಗೆಯಲು ಮುಂದಾಗಿದ್ದಾರೆ. ಆಗ ಅವರಿಗೆ ವಿದ್ಯ್ತ್ ಆಘಾತವಾಗಿದೆ, ಪತ್ನಿ ಕಿರುಚಿಕೊಳ್ಳುತ್ತಿರುವುದನ್ನು ಕಂಡ ಪತಿ ಸಂಜೀವ ಅವರನ್ನು ರಕ್ಷಿಸಲು ಮುಂದಾದಾಗ ಅವರಿಗೆ ಸಹ ವಿದ್ಯುತ್ ಶಾಕ್ ತಗುಲಿದೆ.
ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ತಾಂತ್ರಿಕ ದೋಷವೇ ಘಟನೆಗೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com