ಮದವೇರಿದ ಸಾಕಾನೆ ಎಸ್ಕೇಪ್: ದುಬಾರೆ ಆನೆ ಶಿಬಿರ ಕ್ಲೋಸ್

ಕುಶಾಲ ನಗರದಲ್ಲಿರುವ ದುಬಾರೆ ಆನೆ ಶಿಬಿರವನ್ನು ಮುಚ್ಚಿರುವ ಅರಣ್ಯ ಇಲಾಖೆ, ಹೈ ಅಲರ್ಟ್ ಘೋಷಿಸಿದ್ದು, ಅಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ...
ದುಬಾರೆ ಆನೆ ಶಿಬಿರ(ಸಂಗ್ರಹ ಚಿತ್ರ)
ದುಬಾರೆ ಆನೆ ಶಿಬಿರ(ಸಂಗ್ರಹ ಚಿತ್ರ)
ಮಡಿಕೇರಿ: ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಯೊಂದಕ್ಕೆ ಮದವೇರಿ ಶಿಬಿರದಿಂದ ಪರಾರಿಯಾಗಿರುವ ಕಾರಣ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.
ಕುಶಾಲ ನಗರದಲ್ಲಿರುವ ದುಬಾರೆ ಆನೆ ಶಿಬಿರವನ್ನು ಮುಚ್ಚಿರುವ ಅರಣ್ಯ ಇಲಾಖೆ, ಹೈ ಅಲರ್ಟ್ ಘೋಷಿಸಿದ್ದು, ಅಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೋಳ್ಳುವ 37 ವರ್ಷದ ಗೋಪಿ ಎಂಬ ಆನೆ ಮಾವುತರ ಕಣ್ಣು ತಪ್ಪಿಸಿ ಕಾಡಿಗೆ ಪರಾರಿಯಾಗಿದೆ.  ಅಲ್ಲಿನ ಕಾಡಾನೆಗಳೊಂದಿಗೆ ಕಾದಾಟ ನಡೆಸುವ ಸಾಧ್ಯತೆಯಿದೆ, ಹೀಗಾಗಿ ಇದರಿಂದ ಅಪಾಯ ಸಂಭವಿಸಬಹುದು ಎಂಬ ಹಿನ್ನೆಲೆಯಲ್ಲಿ  ಮಾವುತರು ಆನೆಯನ್ನು ಶಿಬಿರಕ್ಕೆ ತರಲು ಹರಸಾಹಸ ಮಾಡುತ್ತಿದ್ದಾರೆ,
ದುಬಾರೆ ಆನೆ ಶಿಬಿರಕ್ಕೆ ಪ್ರವಾಸ ನಿಷೇಧಿಸಿದ್ದು, ಅಲ್ಲಿನ 26 ಆನೆಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ ಎಂದು. ಆನೆಯ ಮದವಿಳಿಯಲು 10 ದಿನಗಳ ಸಮಯ ಬೇಕಾಗಿದ್ದು, ಅಲ್ಲಿಯವರೆಗೂ ಎಚ್ಚರಿಕೆಯಿಂದರಲು ಸೂಚಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com